For Quick Alerts
  ALLOW NOTIFICATIONS  
  For Daily Alerts

  'ಕ್ರಾಂತಿ'ಯನ್ನು ಹೊತ್ತು ಮೆರೆಸುತ್ತಿರುವ ದರ್ಶನ್ ಅಭಿಮಾನಿಗಳು, ನಿಲ್ಲದ ಅಭಿಯಾನ!

  |

  ದರ್ಶನ್​ ನಟನೆಯ ಬಹುನಿರೀಕ್ಷಿತ​ ಸಿನಿಮಾ 'ಕ್ರಾಂತಿ'. ಈ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ವಿದೇಶಗಳಲ್ಲಿಯೂ ಚಿತ್ರದ ಶೂಟಿಂಗ್ ಮುಗಿದಿದೆ. ಇತ್ತೀಚೆಗೆ ಚಿತ್ರತಂಡ ಪೋಲೆಂಡ್‌ನಲ್ಲಿ ಚಿತ್ರೀಕರಣ ಮುಗಿಸಿ ಬಂದಿದೆ.

  ಕಥೆಯ ಬಗ್ಗೆ ಸಣ್ಣ ಸುಳಿವು ಬಿಟ್ಟು ಕೊಟ್ಟಿರುವ ನಿರ್ಮಾಪಕಿ ಶೈಲಜಾ ನಾಗ್ ಇದು ಅಕ್ಷರ 'ಕ್ರಾಂತಿ' ಎಂದಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್​ ಮಾಡಿ ಮುಗಿಸಿದೆ ಸಿನಿಮಾ ತಂಡ. ಈಗಾಗಲೇ ಬೆಂಗಳೂರು, ಹೈದರಾಬಾದ್​​ನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಅಕ್ಷರ ಕ್ರಾಂತಿಯ ಕಥೆ ಹೇಳ್ತಿದ್ದು, ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಸಿನಿಮಾ ನಿರ್ಮಾಣ ಆಗ್ತಿದೆ.

  ನಿರ್ಮಾಪಕ ಆದ್ರು ವಿನೋದ್ ಪ್ರಭಾಕರ್, ಸಾಥ್ ಕೊಟ್ರು ನಟ ದರ್ಶನ್!ನಿರ್ಮಾಪಕ ಆದ್ರು ವಿನೋದ್ ಪ್ರಭಾಕರ್, ಸಾಥ್ ಕೊಟ್ರು ನಟ ದರ್ಶನ್!

  ವಿ. ಹರಿಕೃಷ್ಣ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳೋದರ ಜೊತೆಗೆ ಮ್ಯೂಸಿಕ್​ ಕಂಪೋಸ್​ ಮಾಡ್ತಿದ್ದಾರೆ. ಇನ್ನು ಸಿನಿಮಾದ ಚಿತ್ರೀಕರಣ ನಂತರ, ಚಿತ್ರ ಡಬ್ಬಿಂಗ್ ಕೆಲಸಗಳು ಶುರುವಾಗಿವೆ. ಡಬ್ಬಿಂಗ್ ಮುಗಿಯುತ್ತಿದ್ದ ಹಾಗೆ ಸಿನಿಮಾ ರಿಲೀಸ್‌ಗೆ ರೆಡಿ ಅಂತಲೆ ಅರ್ಥ. ಚಿತ್ರದ ದರ್ಶನ್ ಅಭಿಮಾನಿಗಳೇ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ.

  ದರ್ಶನ್ ' ಕ್ರಾಂತಿ'ಗೆ ಫ್ಯಾನ್ಸ್ ಸಾಥ್!

  ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಬರ್ತಿದೆ ಅಂದ್ರೆ ಸಾಕು, ಅವರ ಅಭಿಮಾನಿಗಳಿಗೆ ಅದು ಹಬ್ಬವೇ ಸರಿ. ಸಿನಿಮಾ ಹೇಗಿರುತ್ತೋ ಬಿಡುತ್ತೋ, ಒಟ್ಟಾರೆ ಅವರ ಸಿನಿಮಾ ಬಂದರೆ ಸಾಕು ಎನ್ನುವ ನಿಟ್ಟಿನಲ್ಲಿ ನಟ ದರ್ಶನ್ ಅಭಿಮಾನಿಗಳು ಅವರ ಚಿತ್ರಗಳಿಗಾಗಿ ಕಾಯುತ್ತಾ ಇರುತ್ತಾರೆ. ಅಂತೆಯೇ ಈಗ 'ಕ್ರಾಂತಿ' ಸಿನಿಮಾಗಾಗಿ ಕೂಡ ಕಾಯುತ್ತಿದ್ದಾರೆ. ಹಾಗಂತಾ ಕಾಯುತ್ತಾ ಸುಮ್ಮನೆ ಕೂತಿಲ್ಲ. ಚಿತ್ರತಂಡಕ್ಕಿಂತಲೂ ಹೆಚ್ಚಿನ ಕಾಳಜಿ ವಹಿಸಿ, ಸಿನಿಮಾ ಪ್ರಚಾರಕ್ಕೆ ಇಳಿದು ಬಿಟ್ಟಿದ್ದಾರೆ. ಅಷ್ಟಕ್ಕೂ ಹಲವು ದಿನಗಳಿಂದ ದರ್ಶನ್ 'ಕ್ರಾಂತಿ' ಸಿನಿಮಾದ ಸದ್ದು ನಿರಂತರವಾಗಿ ಕೇಳಲು ದರ್ಶನ್ ಅಭಿಮಾನಿಗಳೇ ಕಾರಣ.

  'ಕ್ರಾಂತಿ'ಗಾಗಿ ಪೋಲ್ಯಾಂಡ್‌ಗೆ ಹಾರಿದ ದರ್ಶನ್, ರಚಿತಾ ರಾಮ್'ಕ್ರಾಂತಿ'ಗಾಗಿ ಪೋಲ್ಯಾಂಡ್‌ಗೆ ಹಾರಿದ ದರ್ಶನ್, ರಚಿತಾ ರಾಮ್

  'ಕ್ರಾಂತಿ'ಯನ್ನು ಮೆರೆಸುತ್ತಿರುವ ಫ್ಯಾನ್ಸ್!

  ಮೊದಲಿನಿಂದಲೂ ಚಿತ್ರರಂಗದಲ್ಲಿ ಒಂದು ಮಾತಿದೆ. ನಟ ದರ್ಶನ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ಮಾಸ್ ಫ್ಯಾನ್ ಫಾಲೋಯಿಂಗ್ ಇರುವ ನಟ ಎನ್ನುವ ಖ್ಯಾತಿ ಇದೆ. ಇದು ಈಗ ಮತ್ತೊಮ್ಮೆ ಬಹಿರಂಗವಾಗಿ ಸಾಬೀತಾಗುತ್ತಿದೆ. ಅಷ್ಟರ ಮಟ್ಟಿಗೆ ದರ್ಶನ್ ಅಭಿಮಾನಿಗಳು 'ಕ್ರಾಂತಿ' ಚಿತ್ರವನ್ನು ಹೊತ್ತು ಮೆರೆಸುತ್ತಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಕರುನಾಡಿನಾದ್ಯಂತ ಎಲ್ಲಿ ನೋಡಿದರೂ 'ಕ್ರಾಂತಿ' ಹವಾನೇ. ದಿನಕ್ಕೊಂದು ಕಡೆ ಅಭಿಮಾನಿಗಳು 'ಕ್ರಾಂತಿ' ಪಥ ಸಂಚಲನ ನಡೆಸಿದ್ದಾರೆ. 'ಕ್ರಾಂತಿ' ಚಿತ್ರದ ಪೋಸ್ಟರ್‌ಗಳನ್ನು ಹಿಡಿದು ದರ್ಶನ್ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಯಲ್ಲಿ 'ಕ್ರಾಂತಿ'ಯ ಕ್ರಾಂತಿಯನ್ನು ಪಸರಿಸುತ್ತಿದ್ದಾರೆ. ಒಬ್ಬ ನಟನ ಚಿತ್ರಕ್ಕೆ ಅಭಿಮಾನಿಗಳು ಇಷ್ಟು ದೊಡ್ಡ ಮಟ್ಟದಲ್ಲಿ ಪ್ರಚಾರಕ್ಕೆ ಇಳಿದಿರುವುದು ಇತ್ತೀಚಿನ ದಿನಗಳಲ್ಲಿ ಬಹುಶಃ ಇದೇ ಮೊದಲಿರ ಬಹುದು.

  'ಕ್ರಾಂತಿ'ಯಲ್ಲಿ ದರ್ಶನ್ ಲುಕ್!

  'ಕ್ರಾಂತಿ' ಚಿತ್ರದ ಶೂಟಿಂಗ್ ಬಗ್ಗೆ ಸ್ವತಃ ನಟ ದರ್ಶನ್ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಚಿತ್ರದಲ್ಲಿನ ತಮ್ಮ ಹೊಸ ಲುಕ್ ಕೂಡ ರಿವೀಲ್ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟ ದರ್ಶನ್ ಫೋಟೊವನ್ನು ಹಂಚಿಕೊಂಡಿದ್ದಾರೆ. ಸೂಟು, ಬೂಟು ತೊಟ್ಟು ನಟ ದರ್ಶನ್ ಗ್ಲಾಮರ್ ಲುಕ್‌ನಲ್ಲಿ ಮಿಂಚಿದ್ದಾರೆ. ದರ್ಶನ್ ಈ ಲುಕ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ.

  ಅಭಿಮಾನಿಗಳಿಗೆ ದರ್ಶನ್ ಧನ್ಯವಾದ!

  ಪೋಲೆಂಡ್‌ನಲ್ಲಿ ಶೂಟಿಂಗ್ ವೇಳೆ ಕ್ಲಿಕ್ಕಿಸಿದ ಫೋಟೊ ಹಂಚಿಕೊಂಡಿರುವ ದರ್ಶನ್ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. "ಕ್ರಾಂತಿ ಚಿತ್ರದ ಶೂಟಿಂಗ್ ಪೋಲೆಂಡ್‌ನಲ್ಲಿ ಬಿರುಸಿನಿಂದ ಸಾಗುತ್ತಿದೆ. ನಲ್ಮೆಯ ಸೆಲೆಬ್ರಿಟಿಗಳು ತೋರುತ್ತಿರುವ ಪ್ರೀತಿಗೆ ನಾ ಸದಾ ಚಿರಋಣಿ". ಎಂದು ದರ್ಶನ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

  Recommended Video

  BigBoss OTT Kannada | ಇಷ್ಟು ದಿನ ಆದ್ರು ಈ ಪ್ರಶ್ನೆ ಯಾರು ಕೇಳಿರ್ಲಿಲ್ಲ. | Kiccha Sudeep
  English summary
  Actor Darshan Fans Crazy Promotion Of Kranti Movie Continue From Long Time, Know More.
  Tuesday, August 2, 2022, 13:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X