For Quick Alerts
  ALLOW NOTIFICATIONS  
  For Daily Alerts

  ಪ್ರಾಣಿ ಪ್ರೇಮಿ ದರ್ಶನ್‌ಗೆ ಸರ್ಕಾರದಿಂದ ಮತ್ತೊಂದು ಗೌರವ

  By ಫಿಲ್ಮಿಬೀಟ್ ಡೆಸ್ಕ್
  |

  ನಟ ದರ್ಶನ್ ಪ್ರಾಣಿ ಪ್ರೇಮಿ ಎಂಬುದನ್ನು ಅವರ ಅಭಿಮಾನಿಗಳಿಗೆ ವಿವರಿಸಿ ಹೇಳುವ ಅಗತ್ಯವಿಲ್ಲ. ಅವರ ಫಾರಂನಲ್ಲಿ ಸಾಕಿರುವ ಅನೇಕ ಪ್ರಾಣಿಗಳೇ ಅದಕ್ಕೆ ಸಾಕ್ಷಿ.

  ಪ್ರಾಣಿಗಳ ಬಗ್ಗೆ ದರ್ಶನ್‌ಗೆ ವಿಶೇಷ ಕಾಳಜಿ ಮತ್ತು ಅಕ್ಕರೆ, ಇದೇ ಕಾರಣಕ್ಕೆ ಕುದುರೆ, ಹಸು, ಎತ್ತು ಸೇರಿದಂತೆ ಹಲವು ಪ್ರಾಣಿಗಳನ್ನು ಸಾಕಿರುವ ದರ್ಶನ್, ವನ್ಯಜೀವಿಗಳ ಬಗ್ಗೆಯೂ ಅಷ್ಟೇ ಅಕ್ಕರೆ, ಮಮತೆ ಹೊಂದಿದ್ದಾರೆ. ಆಗಿದ್ದಾಂಗೆ ಅರಣ್ಯಕ್ಕೆ ತೆರಳಿ ವನ್ಯಜೀವಿಗಳ ಛಾಯಾಗ್ರಹಣದಲ್ಲಿ ತೊಡಗುತ್ತಾರೆ.

  ಅವರು ತೆಗೆದ ವನ್ಯಜೀವಿಗಳ ಚಿತ್ರಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಅರಣ್ಯ ಇಲಾಖೆಗೆ ನೀಡುತ್ತಾರೆ. ಆ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ತಮ್ಮ ಕಾಣ್ಕೆ ನೀಡುತ್ತಿದ್ದಾರೆ. ದರ್ಶನ್‌ ಅವರ ಈ ವನ್ಯಜೀವಿ ಪ್ರೀತಿ ಗುರುತಿಸಿರುವ ರಾಜ್ಯ ಸರ್ಕಾರವು ಅವರನ್ನು ವನ್ಯಜೀವಿ ಮಂಡಳಿಗೆ ಸದಸ್ಯರನ್ನಾಗಿ ನೇಮಕ ಮಾಡಿದೆ.

  ದರ್ಶನ್ ಅವರು ಈಗಾಗಲೇ ವನ್ಯಜೀವಿ ಛಾಯಾಗ್ರಾಹಕ ಹಾಗೂ ಪ್ರಾಣಿಶಾಸ್ತ್ರ ಪ್ರಾಧಿಕಾರದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಹಾಗಾಗಿ ಅವರನ್ನು ವನ್ಯಜೀವಿ ಮಂಡಳಿ ಸದಸ್ಯ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಇದರ ಜೊತೆಗೆ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಅವರನ್ನೂ ಸಹ ಇದೇ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

  ಈ ಇಬ್ಬರನ್ನೂ ಸದಸ್ಯರನ್ನಾಗಿ ನೇಮಕ ಮಾಡಿ ಅರಣ್ಯ ಇಲಾಖೆಯು ನವೆಂಬರ್ 19 ರಂದು ಆದೇಶ ಹೊರಡಿಸಿದ್ದು, ಈ ಇಬ್ಬರೂ ಮುಂದಿನ ವರ್ಷ ಅಕ್ಟೋಬರ್‌ ವರೆಗೆ ಅಥವಾ ಮುಂದಿನ ಆದೇಶ ಹೊರಬೀಳುವವರೆಗೆ ವನ್ಯಜೀವಿ ಮಂಡಳಿಯ ಸದಸ್ಯರಾಗಿರುತ್ತಾರೆ.

  ವನ್ಯಜೀವಿ ಮಂಡಳಿ, ವನ್ಯಜೀವಿ ಛಾಯಾಗ್ರಾಹಕ ಹಾಗೂ ಪ್ರಾಣಿಶಾಸ್ತ್ರ ಪ್ರಾಧಿಕಾರ ಮಾತ್ರವೇ ಅಲ್ಲದೆ, ರಾಜ್ಯ ಸರ್ಕಾರದ ಕೃಷಿ ಇಲಾಖೆಯ ರಾಯಭಾರಿ ಸಹ ಆಗಿದ್ದಾರೆ ನಟ ದರ್ಶನ್. ಕೃಷಿ ಸಚಿವರಾಗಿರುವ ಬಿ.ಸಿ.ಪಾಟೀಲ್ ಅವರ ಮನವಿಯಂತೆ ಕೃಷಿ ಇಲಾಖೆಯ ರಾಯಭಾರಿ ಸ್ಥಾನವನ್ನು ದರ್ಶನ್ ಅಲಂಕರಿಸಿದ್ದಾರೆ. ಬಿ.ಸಿ.ಪಾಟೀಲ್ ಅವರೊಟ್ಟಿಗೆ ಕೆಲವು ಕೃಷಿ ಸಂಬಂಧಿ ಕಾರ್ಯಕ್ರಮಗಳಲ್ಲಿಯೂ ದರ್ಶನ್ ಭಾಗಿಯಾಗಿದ್ದರು.

  English summary
  Actor Darshan nominated as member of wild life board. He already ambassador of state agriculture ministry.
  Sunday, November 20, 2022, 6:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X