ಕೋಟಿ ಬೆಲೆಯ ಕಾರು ಬಿಟ್ಟು ಲೂನದಲ್ಲಿ ದರ್ಶನ್ ಸವಾರಿ
Recommended Video
ನಟ ದರ್ಶನ್ ಕಾರ್ ಕ್ರೇಜ್ ಇರುವ ವ್ಯಕ್ತಿ. ಆಯುಧ ಪೂಜೆಗೆ ದರ್ಶನ್ ಮನೆ ಮುಂದೆ ನಿಲ್ಲುವ ಕಾರುಗಳನ್ನು ನೋಡಿದರೆನೇ ಅವರ ಕಾರ್ ಕ್ರೇಜ್ ಏನು ಎಂಬುದು ತಿಳಿಯುತ್ತದೆ. ಕೋಟಿ ಕೋಟಿ ಬೆಲೆಬಾಳುವ ಕಾರ್ ಇದ್ದರೂ ದರ್ಶನ್ ಈಗ ಲೂನ ಸವಾರಿ ಮಾಡಿದ್ದಾರೆ.
ಈ ಲೂನ ದರ್ಶನ್ ಬದುಕಿನಲ್ಲಿ ಮಹತ್ವದ ಸ್ಥಾನ ಹೊಂದಿದೆ. ಕಾರಣ ಇದನ್ನು ಅವರಿಗೆ ಕೊಡಿಸಿದ್ದು, ತಂದೆ ತೂಗುದೀಪ ಶ್ರೀನಿವಾಸ್. ಪ್ರೀತಿಯಿಂದ ತಂದೆ ನೀಡಿದ್ದ ಲೂನ ದರ್ಶನ್ ಬಳಿ ಈಗಲೂ ಇದೆ. ಇಂದಿಗೂ ಆಗಾಗ ದರ್ಶನ್ ಅದರಲ್ಲಿ ಸವಾರಿ ಮಾಡುತ್ತಾರೆ.
ಚಿತ್ರರಂಗದ ಪ್ರಾರಂಭದ ದಿನಗಳಲ್ಲಿ ದರ್ಶನ್ ಇದೇ ಲೂನ ಏರಿ ಚಿತ್ರೀಕರಣದ ಸ್ಥಳಕ್ಕೆ ಹೋಗುತ್ತಿದ್ದರು. ನಂತರ ಕಾರ್ ಬಂತು. ಆದರೆ, ಎಷ್ಟೇ ಕಾರ್ ಮನೆ ಮುಂದೆ ಬಂದು ನಿಂತರೂ ದರ್ಶನ್ ಲೂನದ ಆನಂದವನ್ನು ಮರೆತಿಲ್ಲ.

ಇತ್ತೀಚಿಗೆ ಮತ್ತೆ ದರ್ಶನ್ ತಮ್ಮ ಲೂನ ಏರಿ ಫರ್ಮ್ ಹೌಸ್ ನಲ್ಲಿ ಒಂದೆರಡು ಸುತ್ತು ಹೊಡೆದಿದ್ದಾರೆ. ಈ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ಹಂಚಿಕೊಂಡಿದ್ದಾರೆ.
ನಟ ದರ್ಶನ್ ಸದ್ಯ ರಾಬರ್ಟ್ ಹಾಗೂ ಮದಕರಿ ನಾಯಕ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.


Click it and Unblock the Notifications











