»   » 'ಚಕ್ರವರ್ತಿ'ಯಲ್ಲಿ ದರ್ಶನ್ ನ್ಯೂ ಲುಕ್ ಹೇಗಿದೆ, ನೋಡಿದ್ರಾ?

'ಚಕ್ರವರ್ತಿ'ಯಲ್ಲಿ ದರ್ಶನ್ ನ್ಯೂ ಲುಕ್ ಹೇಗಿದೆ, ನೋಡಿದ್ರಾ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಜಗ್ಗುದಾದ' ಚಿತ್ರ ಶತದಿನ ಆಚರಿಸಿದೆ. ಅದರ ಖುಷಿಯಲ್ಲಿಯೇ ಬಾಕ್ಸಾಫೀಸ್ ಸುಲ್ತಾನ ತಮ್ಮ ಮುಂಬರುವ ಸಿನಿಮಾ 'ಚಕ್ರವರ್ತಿ' ಶೂಟಿಂಗ್ ನಲ್ಲಿ ಭಯಂಕರ ಬಿಜಿಯಾಗಿದ್ದಾರೆ.

ನವ ನಿರ್ದೇಶಕ ಚಿಂತನ್ ಆಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ದರ್ಶನ್ ಅವರು ಭಿನ್ನ-ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಹಲವು ರೀತಿಯ ಕಸರತ್ತು ಕೂಡ ಮಾಡಿದ್ದಾರೆ.[ದರ್ಶನ್ 'ಚಕ್ರವರ್ತಿ' ಅಡ್ಡದಿಂದ ಬಂದ ಲೇಟೆಸ್ಟ್ ಸುದ್ದಿ ಇದು]


Actor Darshan's new look for Kannada Movie 'Chakravarthy'

ನಟ ದರ್ಶನ್ ಅವರು ಈ ಚಿತ್ರದಲ್ಲಿ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂತ ನಾವೇ ನಿಮಗೆ ತಿಳಿಸಿದ್ದೇವೆ. ಬರೀ ರೆಟ್ರೋ ಲುಕ್ ಮಾತ್ರವಲ್ಲದೇ ಇನ್ನೊಂದು ಅವತಾರದಲ್ಲೂ ದರ್ಶನ್ ಅವರು ಮಿಂಚಲಿದ್ದಾರೆ.


ಇದೀಗ 'ಚಕ್ರವರ್ತಿ' ಚಿತ್ರಕ್ಕಾಗಿ ದರ್ಶನ್ ಅವರು ತಮ್ಮ ಕಪ್ಪು ಕೂದಲನ್ನು ಕೆಂಚು ಕೂದಲಾಗಿ ಬದಲಾಯಿಸಿಕೊಂಡಿದ್ದಾರೆ. ತಮ್ಮ ಕೆಲಸದ ಮೇಲೆ ಸಾಕಷ್ಟು ಡೆಡಿಕೇಷನ್ ಇಟ್ಟುಕೊಂಡಿರುವ ದರ್ಶನ್, ತಮ್ಮ ಸ್ಟೈಲನ್ನೇ ಬದಲಾಯಿಸಿಕೊಂಡಿದ್ದಾರೆ.['ಚಕ್ರವರ್ತಿ' ಚಿತ್ರತಂಡ ಸೇರಿಕೊಂಡ ಹೊಸ ಅತಿಥಿ ಯಾರು ?]


Actor Darshan's new look for Kannada Movie 'Chakravarthy'

ಈ ಹೊಸ ತರದ ಲುಕ್ ನಲ್ಲಿ ದರ್ಶನ್ ಒಳ್ಳೆ ಫಾರಿನರ್ಸ್ ತರ ಕಾಣಿಸುತ್ತಿದ್ದಾರೆ. ಕೆಂಚು ಕೂದಲು ಹಾಗೆ ಕೆಂಚು ಗಡ್ಡ ಬಿಟ್ಟುಕೊಂಡು ಒಂಥರಾ ಚೆಂದ ಕಾಣಿಸುತ್ತಿದ್ದಾರೆ. ದರ್ಶನ್ ಅವರ ಹೊಸ ಲುಕ್ ನ ಫೋಟೋ, ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.


ಒಟ್ನಲ್ಲಿ ಒಂದೆಡೆ ರೆಟ್ರೋ ಲುಕ್, ಇನ್ನೊಂದೆಡೆ ಕೆಂಚು ಕೂದಲಿನ 'ಡಾನ್' ದರ್ಶನ್, ಇವೆಲ್ಲವನ್ನು ನೋಡುತ್ತಿರುವ ಅಭಿಮಾನಿಗಳು, ಸಿನಿಮಾ ಯಾವಾಗ ಬಿಡುಗಡೆ ಆಗುತ್ತೋ ಅಂತ ಬಹಳ ಕಾತರದಿಂದ ಕಾದಿದ್ದಾರೆ.


Actor Darshan's new look for Kannada Movie 'Chakravarthy'

ಚಿತ್ರದಲ್ಲಿ ದರ್ಶನ್ ಅವರ ಕುಚಿಕು ಗೆಳೆಯರಾದ ಸೃಜನ್ ಲೋಕೇಶ್, ಆದಿತ್ಯ, ನಟಿ ದೀಪಾ ಸನ್ನಿಧಿ ಮಿಂಚುತ್ತಿದ್ದಾರೆ. ಇವರು ಮಾತ್ರವಲ್ಲದೇ ವಿಶೇಷವಾಗಿ ನಟಿ ಚಾರುಲತಾ ಅವರು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಕೊನೆಯ ಭಾಗದ ಚಿತ್ರೀಕರಣದಲ್ಲಿ ಬಿಜಿಯಾಗಿದೆ.

English summary
Actor Darshan's new look for Kannada Movie 'Chakravarthy'. The still of Chakravarthy, Actor Darshan will be never before look. Kannada Actor Aditya, Actress Deepa Sannidhi, Kannada Actor Srujan Lokesh, Actress Charulatha in the lead role. The movie is directed by Chintan, who is making his directorial debut.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada