For Quick Alerts
  ALLOW NOTIFICATIONS  
  For Daily Alerts

  ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದರ್ಶನ್: ಕಾರಣ ಬಹಳ ವಿಶೇಷ!

  |

  ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲೇ ಹೋದರು, ಎಲ್ಲೆ ಬಂದರೂ ಅವರ ವಿಡಿಯೋ, ಫೋಟೊಗಳು ವೈರಲ್ ಆಗಿ ಬಿಡುತ್ತವೆ. ದರ್ಶನ್ ಆಚೆ ಅಭಿಮಾನಿಗಳ ಕಣ್ಣಿಗೆ ಬಿದ್ದರೆ ಸಾಕು, ಅವರ ಅಂದಿನ ಫೋಟೊ ವೈರಲ್ ಆದ ಹಾಗೆ ಲೆಕ್ಕ, ಯಾಕೆಂದರೆ ದರ್ಶನ್ ಬಗ್ಗೆ ಅಷ್ಟೊಂದು ಕ್ರೇಜ್ ಇದ್ದೇ ಇದೆ.

  ನಟ ದರ್ಶನ್ ಸದ್ಯ ಕ್ರಾಂತಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಚಿತ್ರದಲ್ಲಿ ಇರುವ ಅವರ ಲುಕ್ ಗುಟ್ಟಾಗಿ ಉಳಿದಿಲ್ಲ. ಯಾಕೆಂದರೆ ದರ್ಶನ್ ಇತ್ತೀಚೆಗೆ ಹೆಚ್ಚಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅವರ ಲುಕ್‌ ಕೂಡ ರಿವೀಲ್ ಆಗಿದೆ.

  ಪ್ಯಾನ್ ಇಂಡಿಯಾ ರೇಸ್‌ನಲ್ಲಿ ಕನ್ನಡ ಸ್ಟಾರ್ ನಟರು: ಓಡೋರು ಯಾರು? ಬೀಳೋರು ಯಾರು?ಪ್ಯಾನ್ ಇಂಡಿಯಾ ರೇಸ್‌ನಲ್ಲಿ ಕನ್ನಡ ಸ್ಟಾರ್ ನಟರು: ಓಡೋರು ಯಾರು? ಬೀಳೋರು ಯಾರು?

  ಇನ್ನು ನಟ ದರ್ಶನ್ ಬೆಂಗಳೂರಿನ ಗಾಳಿ ಆಂಜನೇಯ ದೇವಸ್ಥಾನದಕ್ಕೆ ಭೇಟಿ ಕೊಟ್ಟಿದ್ದಾರೆ. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟ ದರ್ಶನ್ ಆಂಜನೇಯ ದೇವಸ್ಥಾನಕ್ಕೆ ಸುಮ್ಮನೆ ಪೂಜೆಗಾಗಿ ಹೋಗಿಲ್ಲ. ಬದಲಿಗೆ ವಿಶೇಷ ಕಾರಣಕ್ಕಾಗಾಗಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಅದೇನೆಂದು ಮುಂದೆ ಓದಿ...

  'ಕ್ರಾಂತಿ' ಕಥೆ ಏನು? 'ದರ್ಶನ್' ಪಾತ್ರ ಏನು? ಇಲ್ಲಿದೆ ಉತ್ತರ!'ಕ್ರಾಂತಿ' ಕಥೆ ಏನು? 'ದರ್ಶನ್' ಪಾತ್ರ ಏನು? ಇಲ್ಲಿದೆ ಉತ್ತರ!

   ಆಂಜನೇಯ ಮೂರ್ತಿ ಪ್ರತಿಸ್ಠಾಪನೆ, ಅಭಿಶೇಕ!

  ಆಂಜನೇಯ ಮೂರ್ತಿ ಪ್ರತಿಸ್ಠಾಪನೆ, ಅಭಿಶೇಕ!

  ನಟ ದರ್ಶನ್ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದು ವಿಶೇಷ ಕಾರಣಕ್ಕೆ. ಆಂಜನೇಯ ಸ್ವಾಮಿ ಮೂರ್ತಿಯ ಪ್ರತಿಷ್ಠಾಪನೆಗಾಗಿ ದರ್ಶನ್ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರ್ತಿ ಪ್ರತಿಷ್ಠಾಪನೆಯ ನಂತರ ಸ್ವತಃ ನಟ ದರ್ಶನ್ ಅಭಿಶೇಕ ಮಾಡಿದ್ದಾರೆ. ಈ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.

  ಪಾಪಣ್ಣ ಮಟನ್ ಸ್ಟಾಲ್ ಮಣಿ ಮೂರ್ತಿ ಪ್ರತಿಸ್ಠಾಪನೆ!

  ಹಾಗಂತ ನಟ ದರ್ಶನ್ ದೇವಸ್ಥಾನದಲ್ಲಿ ಮೂರ್ತಿ ಪ್ರತಿಸ್ಠಾಪನೆ ಮಾಡಿಲ್ಲ. ಬದಲಿಗೆ ಸ್ನೇಹಿತರು ಮಾಡಿದ ಪ್ರತಿಸ್ಠಾಪನಾ ಕಾರ್ಯಕ್ರಮದಲ್ಲಿ ಅವರು ಭಾಗಿ ಆಗಿದ್ದರು. ಬೆಂಗಳೂರಿನಲ್ಲಿರುವ ಹೆಸರಾಂತ ಪಾಪಣ್ಣ ಮಟನ್ ಸ್ಟಾಲ್ ಮಣಿ ಅವ್ರಿಂದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾದಲ್ಲಿ ಮೂರ್ತಿ ಪ್ರತಿಸ್ಠಾಪನೆಗೊಂಡಿದೆ. ಇನ್ನು 48 ದಿನಗಳ ಕಾಲ ಪೂಜೆ ನಡೆಯಲಿದೆ.

   ದರ್ಶನ್ ಮುಂದಿನ ಸಿನಿಮಾ ಕ್ರಾಂತಿ!

  ದರ್ಶನ್ ಮುಂದಿನ ಸಿನಿಮಾ ಕ್ರಾಂತಿ!

  ಇನ್ನು ನಟ ದರ್ಶನ್ ಸಿನಿಮಾ ವಿಚಾರಕ್ಕೆ ಬರುವುದಾದರೆ, ದರ್ಶನ್ ಸದ್ಯ ಕ್ರಾಂತಿ ಸಿನಿಮಾ ಮಾಡುತ್ತಿದ್ದಾರೆ. ಕ್ರಾಂತಿ ಚಿತ್ರದಲ್ಲಿ ದರ್ಶನ್ ಎನ್‌ಆರ್‌ಐ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡಲಿದ್ದಾರೆ ಎನ್ನುವುದು ಈಗಾಗಲೆ ರಿವೀಲ್ ಆಗಿದೆ. ಕ್ರಾಂತಿ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡು ಅಭಿಮಾನಿಗಳು ಕಾಯುತ್ತಿದ್ದಾರೆ.

   'ಡಿ 56'ಗೆ ಮುಂದಿನ ತಯಾರಿ!

  'ಡಿ 56'ಗೆ ಮುಂದಿನ ತಯಾರಿ!

  ಕ್ರಾಂತಿ ಬಿಟ್ಟರೆ ನಟ ದರ್ಶನ್ ಮುಂದಿನ ಸಿನಿಮಾ 'D 56'. ಈ ಚಿತ್ರವನ್ನು ನಿರ್ದೇಶಕ ತರುಣ್ ಸುಧೀರ್ ನಿರ್ದೇಶನ ಮಾಡಲಿದ್ದಾರೆ. ಈಗಾಗಲೆ ರಾಬರ್ಟ್ ಸಿನಿಮಾ ಮಾಡಿ ಗೆದ್ದ ತರುಣ್ ಮತ್ತೆ ದರ್ಶನ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಆದರೆ ಕ್ರಾಂತಿ ಚಿತ್ರದ ರಿಲೀಸ್ ಬಳಿಕ ಈ ಚಿತ್ರದ ಬ್ಗಗೆ ಮಾಹಿತಿ ಸಿಗಲಿದೆ.

  English summary
  Actor Darshan Visit Bangalore Gali Anjaneya Swami Temple For Special Reason, Know More
  Thursday, June 9, 2022, 13:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X