»   » ನಟ ದರ್ಶನ್-ವಿಜಯಲಕ್ಷ್ಮಿ ಸಂಸಾರದಲ್ಲಿ ಮತ್ತೆ ಸುಂಟರಗಾಳಿ

ನಟ ದರ್ಶನ್-ವಿಜಯಲಕ್ಷ್ಮಿ ಸಂಸಾರದಲ್ಲಿ ಮತ್ತೆ ಸುಂಟರಗಾಳಿ

Posted By:
Subscribe to Filmibeat Kannada

ಬಾಕ್ಸಾಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮತ್ತೆ ವಿವಾದಕ್ಕೀಡಾಗಿದ್ದಾರೆ. ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಅವರ ವಿರುದ್ಧ ನಿನ್ನೆ (ಮಾರ್ಚ್ 9) ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

'ನಿನ್ನೆ ಸಂಜೆ ದರ್ಶನ್ ಅವರು ಹೊಸಕೆರೆಹಳ್ಳಿ ಕ್ರಾಸ್ ನಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಿವಾಸಕ್ಕೆ ಪಾನಮತ್ತರಾಗಿ ಬಂದು ಗಲಾಟೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಡೆಯಲು ಬಂದ ಸೆಕ್ಯೂರಿಟಿ ಮೇಲೂ ಹಲ್ಲೆ ನಡೆಸಿದ್ದಾರೆ'.[ದರ್ಶನ್ ಲವ್ವಿ ಡವ್ವಿ ಸ್ಟೋರಿ ಬಗ್ಗೆ ಮೌನ ಮುರಿದ ವಿಜಯಲಕ್ಷ್ಮಿ]

'ಹೀಗಾಗಿ ಇದರಿಂದ ಮನ ನೊಂದ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಅವರಿಗೆ ಬುದ್ದಿವಾದ ಹೇಳಬೇಕು ಎಂದು ಲಿಖಿತ ದೂರಿನಲ್ಲಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರಿಗೆ ಮನವಿ ಮಾಡಿದ್ದಾರೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಹಬ್ಬಿರುವ ಗಾಸಿಪ್ ನಿಜವೇ?]

ಅಷ್ಟಕ್ಕೂ ನಿನ್ನೆ ರಾತ್ರಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮನೆಯಲ್ಲಿ ನಡೆದಿದ್ದೇನು? ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

ವಿಜಯಲಕ್ಷ್ಮಿ ಆರೋಪ

ನಿನ್ನೆ (ಮಾರ್ಚ್ 9) ರಾತ್ರಿ ನಟ ದರ್ಶನ್ ಅವರು ಪಾನಮತ್ತರಾಗಿ ಹೊಸಕೆರೆಹಳ್ಳಿ ಕ್ರಾಸ್ ನಲ್ಲಿರುವ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ ಮೆಂಟ್ ನಿವಾಸಕ್ಕೆ ಬಂದು ವಿಪರೀತ ಗಲಾಟೆ ಮಾಡಿದ್ದಾರೆ. ಮಾತ್ರವಲ್ಲದೇ ಸೆಕ್ಯೂರಿಟಿ ಗಾರ್ಡ್ ದೇವರಾಜ್ ಅವರ ಮೇಲೂ ದರ್ಶನ್ ಅವರು ಹಲ್ಲೆ ಮಾಡಿದ್ದಾರೆ ಎಂದು ವಿಜಯಲಕ್ಷ್ಮಿ ಅವರು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದರ್ಶನ್ ವಿರುದ್ಧ ದೂರು ನೀಡಿದ್ದಾರೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ದೂರಿನ ವಿವರ

'ನಾನು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಕಳೆದ 18 ತಿಂಗಳಿನಿಂದ ಇಲ್ಲಿ ವಾಸವಾಗಿದ್ದೇನೆ. ದರ್ಶನ್ ಅವರು ಇವತ್ತು (ಮಾರ್ಚ್ 9) ಸಂಜೆ 7 ಘಂಟೆಗೆ ಬಂದು ನನಗೆ ಕಿರುಕುಳ ನೀಡ್ತಿದ್ರು. ಆದ್ದರಿಂದ ದಯವಿಟ್ಟು ಅವರಿಗೆ ಎಚ್ಚರಿಕೆ ನೀಡುವಂತೆ ಹಾಗೂ ನನ್ನಿಂದ ದೂರವಿರುವಂತೆ ಸೂಚಿಸಲು ಮನವಿ ಮಾಡುತ್ತಿದ್ದೇನೆ.-ನಿಮ್ಮ ವಿಶ್ವಾಸಿ ವಿಜಯಲಕ್ಷ್ಮಿ.

ಸ್ಥಳಕ್ಕೆ ಪೊಲೀಸ್ ಆಗಮನ

ತಕ್ಷಣ ಸ್ಥಳಕ್ಕೆ ಆಗಮಿಸಿದ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ ಮೆಂಟ್ ಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ದರ್ಶನ್ ಅವರು ಮತ್ತೆ ಅಪಾರ್ಟ್ ಮೆಂಟ್ ಗೆ ಬಂದು ಗಲಾಟೆ ಮಾಡುವ ಸಾಧ್ಯತೆ ಹಿನ್ನಲೆಯಲ್ಲಿ ರಾತ್ರಿ ಭದ್ರತೆಗಾಗಿ ಹೆಚ್ಚುವರಿಯಾಗಿ 6 ಪೊಲೀಸ್ ಪೇದೆಗಳನ್ನು ನಿಯೋಜಿಸಿದ್ದರು.

ಎರಡು ದೂರು ದಾಖಲಿಸಿಕೊಂಡ ಪೊಲೀಸರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಅವರ ಪತ್ನಿ ವಿಜಯಲಕ್ಷ್ಮಿ ಮಾತ್ರವಲ್ಲದೇ, ಅವರ ಅಪಾರ್ಟ್ ಮೆಂಟ್ ನ ಸೆಕ್ಯೂರಿಟಿ ಗಾರ್ಡ್ 53 ವಯಸ್ಸಿನ ಬಿ.ಎಸ್ ದೇವರಾಜ್ ಅವರು ಕೂಡ ದರ್ಶನ್ ಅವರು ನನಗೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ಸೆಕ್ಯೂರಿಟಿ ಗಾರ್ಡ್ ದೇವರಾಜ್ ದೂರಿನ ವಿವರ

'ನಾನು ಹೊಸಕೆರೆಹಳ್ಳಿ ಕ್ರಾಸ್ ನಲ್ಲಿರುವ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ ಮೆಂಟ್ ನಲ್ಲಿ 7 ತಿಂಗಳಿನಿಂದ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಈ ದಿನ (ಮಾರ್ಚ್ 9) ನಾನು ಕರ್ತವ್ಯದಲ್ಲಿ ಇದ್ದಾಗ ಸಂಜೆ ಸಮಾರು 6.45ರ ಸಮಯದಲ್ಲಿ ನಟರಾದ ದರ್ಶನ್ ಅವರು ಮತ್ತು ಅವರ ಇಬ್ಬರು ಬಾಡಿಗಾರ್ಡ್ಸ್, ಈ ಮೂರೂ ಜನರು, ಅದರಲ್ಲಿ ದರ್ಶನ್ ಅವರು ನನ್ನ ಮೇಲೆ ಏಕಾಏಕಿ ಜಗಳ ತೆಗೆದು ಅವಾಚ್ಯ ಪದಗಳಲ್ಲಿ ಬೈದರು, ಗಲಾಟೆ ಮಾಡಿ ದರ್ಶನ್ ಅವರು ಕಾಲಿನಲ್ಲಿ ಹೊಟ್ಟೆ ಕೆಳಭಾಗದಲ್ಲಿ ಗುದ್ದಿದರು. ಆಮೇಲೆ ಹೊರಟು ಹೋದರು. ಆ ಜಾಗದಲ್ಲಿ ಸೆಕ್ಯುರಿಟಿ ಗಾರ್ಡ್ ಆದ ನಾನು ದೇವರಾಜ್, ಆ ಜಾಗ ಬಿಟ್ಟು ಹೋದೆ. ದರ್ಶನ್ ಅವರನ್ನು ಕರೆಸಿ ನಮ್ಮ ತಂಟೆಗೆ ಬರದಂತೆ ಸೂಕ್ತ ಬಂದೋಬಸ್ತು ಮಾಡಿಕೊಡಬೇಕಾಗಿ ಕೇಳಿಕೊಳ್ಳುತ್ತೇನೆ. ಇಂತಿ ನಿಮ್ಮ ವಿಶ್ವಾಸಿ - ಬಿ.ಎಸ್.ದೇವರಾಜ್

ದರ್ಶನ್ ಗೆ ಡಬಲ್ ಟ್ರಬಲ್

ಇದೀಗ ದರ್ಶನ್ ಅವರ ಮೇಲೆ ಅವರ ಪತ್ನಿ ವಿಜಯಲಕ್ಷ್ಮಿ ಅವರು ಬುದ್ದಿ ಹೇಳಿ ಅಂತ ಮನವಿ ಮಾಡಿ ದೂರು ನೀಡಿದರೆ, ಸೆಕ್ಯೂರಿಟಿ ಗಾರ್ಡ್ ಬಿ.ಎಸ್ ದೇವರಾಜ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಇಬ್ಬರು ದೂರು ನೀಡಿರುವುದರಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಡಬಲ್ ಟ್ರಬಲ್ ಆದಂತಾಗಿದೆ.

ಜಟಿಲ ಸಮಸ್ಯೆ

ಇನ್ನು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಮಹಿಳಾ ಆಯೋಗಕ್ಕೆ ಸ್ವಯಂ ಪ್ರೇರಿತ ದೂರು ನೀಡಿರುವುದರಿಂದ ದರ್ಶನ್ ಅವರಿಗೆ ಸಮಸ್ಯೆ ಇನ್ನಷ್ಟು ಜಟಿಲ ಆಗುವ ಸಂಭವವಿದೆ.

ಇದು ಮೊದಲೇನಲ್ಲಾ.!

ಈ ಹಿಂದೆ 2011 ಸೆಪ್ಟೆಂಬರ್ ತಿಂಗಳಿನಲ್ಲಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ವಿರುದ್ಧ, ತಮ್ಮನ್ನು ದರ್ಶನ್ ಅವರ ಸಿಗರೇಟ್ ನಿಂದ ಸುಡುತ್ತಾರೆ, ಬಂದೂಕಿನಿಂದ ಬೆದರಿಕೆ ಹಾಕುತ್ತಾರೆ. ಮಗನ ಮೇಲೆ ಹಲ್ಲೆ ಮಾಡುತ್ತಾರೆ ಎಂದು ವಿಜಯನಗರದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಶಿಕ್ಷೆಗೊಳಗಾದ ದರ್ಶನ್

ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ವಿಚಾರಣೆಗೊಳಪಟ್ಟ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆಗೊಳಪಟ್ಟು ಬಿಡುಗಡೆ ಹೊಂದಿದ್ದರು. ಈ ವೇಳೆ ರೆಬೆಲ್ ಸ್ಟಾರ್ ಅಂಬರೀಶ್ ಅವರು ಮದ್ಯ ಪ್ರವೇಶಿಸಿ ಇವರಿಬ್ಬರ ಬದುಕನ್ನು ಸರಿಪಡಿಸಿದ್ದರು. ಬಳಿಕ 1 ವರ್ಷ ಇಬ್ಬರೂ ಪರಸ್ಪರ ಹೊಂದಾಣಿಕೆಯಿಂದಲೇ ಜೀವನ ನಡೆಸುತ್ತಿದ್ದರು. ನಂತರ ಇವರಿಬ್ಬರ ನಡುವೆ ಮುನಿಸು ಆರಂಭವಾಗಿತ್ತು. ಈ ಹಿನ್ನಲೆಯಲ್ಲಿ ವಿಜಯಲಕ್ಷ್ಮಿ ರಾಜರಾಜೇಶ್ವರಿ ನಗರದ ದರ್ಶನ್ ಮನೆ ಬಿಟ್ಟು ಕಳೆದ 2 ವರ್ಷಗಳಿಂದ ಹೊಸಕೆರೆಹಳ್ಳಿಯ ಮನೆಯಲ್ಲಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು.

English summary
Kannada Actor Darshan wife Vijayalakshmi files complaint against Darshan. And she was approached to police station and just warn her husband.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada