For Quick Alerts
  ALLOW NOTIFICATIONS  
  For Daily Alerts

  ಚಕ್ರವರ್ತಿ ಸೂಲಿಬೆಲೆಗೆ 'ಮೊದಲು ಮಾನವನಾಗು' ಎಂದ ಡಾಲಿ ಧನಂಜಯ್

  |

  ಡಾಲಿ ಧನಂಜಯ್ ತೆರೆಯ ಮೇಲೆ ಒರಟನ, ಅಪರಾಧಿಯ ಪಾತ್ರಗಳನ್ನು ಮಾಡುತ್ತಾರಾದರೂ ನಿಜ ಜೀವನದಲ್ಲಿ ಸಂಪೂರ್ಣ ವಿರುದ್ಧ. ಪುಸ್ತಕಗಳನ್ನು ಓದುವ ಹವ್ಯಾಸವಿರುವ ಧನಂಜಯ್ ಮಾನವತಾವಾದಿಯೂ ಹೌದು.

  ರಾಬರ್ಟ್ ಮಾತ್ರ ಕೊರೊನಗೆ ಹೆದರಿಲ್ಲ | Darshan | Dboss | Filmibeat Kannada

  ಸಾಮಾನ್ಯವಾಗಿ ರಾಜಕಾರಣ, ಎಡ-ಬಲ ಸಿದ್ಧಾಂತ ಅಥವಾ ಇನ್ನಾವುದೇ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಾಗಲಿ, ಬಹಿರಂಗ ಕಾರ್ಯಕ್ರಮಗಳಲ್ಲಾಗಲಿ ಹಂಚಿಕೊಳ್ಳದ ಡಾಲಿ, ಇಂದು ಮಾಡಿರುವ ಟ್ವೀಟ್‌ ಒಂದು ಬಹುವಾಗಿ ಗಮನ ಸೆಳೆಯುತ್ತಿದೆ.

  ದಿನಕ್ಕೆ ಸಾವಿರ ಬಸ್ಕಿ ಹೊಡೀತಿದ್ದಾರೆ ಡಾಲಿ ಧನಂಜಯ್ದಿನಕ್ಕೆ ಸಾವಿರ ಬಸ್ಕಿ ಹೊಡೀತಿದ್ದಾರೆ ಡಾಲಿ ಧನಂಜಯ್

  'ಏನಾದರೂ ಆಗು, ಮೊದಲು ಮಾನವನಾಗು' ಎಂಬ ಸಿದ್ದಯ್ಯ ಪುರಾಣಿಕರ ಪದ್ಯದ ಒಂದು ಸಾಲನ್ನಷ್ಟೆ ಡಾಲಿ ಧನಂಜಯ್ ಟ್ವೀಟ್ ಮಾಡಿದ್ದಾರೆ. ಆದರೆ ಅವರು ಯಾರಿಗೆ ಟ್ವೀಟ್ ಮಾಡಿದ್ದಾರೆ, ಯಾವ ಕಾರಣಕ್ಕೆ, ಯಾವ ಸಂದರ್ಭದಲ್ಲಿ ಟ್ವೀಟ್‌ ಮಾಡಿದ್ದಾರೆ ಎಂಬುದು ಗಮನಿಸಬೇಕಾದ ವಿಷಯ.

  ಚಕ್ರವರ್ತಿ ಸೂಲಿಬೆಲೆ ಗೆ ಟ್ವೀಟ್‌ ಮಾಡಿರುವ ಧನಂಜಯ್

  ಚಕ್ರವರ್ತಿ ಸೂಲಿಬೆಲೆ ಗೆ ಟ್ವೀಟ್‌ ಮಾಡಿರುವ ಧನಂಜಯ್

  ಡಾಲಿ ಧನಂಜಯ್ ಅವರು 'ಏನಾದರೂ ಆಗು, ಮೊದಲು ಮಾನವನಾಗು' ಎಂದು ಸಲಹೆ ನೀಡಿರುವುದು ಯುವ ಬ್ರಿಗೇಡ್‌ ನ ಚಕ್ರವರ್ತಿ ಸೂಲಿಬೆಲೆಗೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಚಕ್ರವರ್ತಿ ಸೂಲಿಬೆಲೆಗೆ 'ಮಾನವನಾಗು' ಎಂದು ಧನಂಜಯ್ ಸಲಹೆ ನೀಡಲು ಇದೆ ಕಾರಣ.

  ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ

  ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ

  ಚಕ್ರವರ್ತಿ ಸೂಲಿಬೆಲೆ ಅವರು ಇಂದು ಕೊರೊನಾ ವೈರಸ್ ಕುರಿತಾಗಿ ಇಟಲಿ ಪರಿಸ್ಥಿತಿ ಕುರಿತಾದ ಸುದ್ದಿಯೊಂದರ ಲಿಂಕ್ ಅನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿಕೊಂಡು, 'ಜೀಸಸ್ ಲವ್ಸ್‌ ಎವರಿ ಒನ್' ಎಂದು ವ್ಯಂಗ್ಯ ಮಾಡಿದ್ದರು. ವ್ಯಂಗ್ಯದ ಹಿಂದೆ ಸೂಕ್ಷ್ಮವಾದ ಧರ್ಮ ನಿಂದನೆ ಹಾಗೂ ಮರಣಮೃದಂಗ ಭಾರಿಸುತ್ತಿರುವ ರೋಗದೊಂದಿಗೆ ಹೋರಾಡುತ್ತಿರುವ ಒಂದು ದೇಶ ಮತ್ತು ಅದರ ಜನಗಳ ಬಗ್ಗೆಯೂ ವ್ಯಂಗ್ಯ ಇತ್ತು. ಇದಕ್ಕೆ ಧನಂಜಯ್ ಸೂಕ್ಷ್ಮವಾಗಿಯೇ ಪ್ರತಿಕ್ರಿಯಿಸಿದ್ದಾರೆ.

  'ಮೊದಲು ಮಾನವನಾಗು' ಎಂದ ಧನಂಜಯ್

  'ಮೊದಲು ಮಾನವನಾಗು' ಎಂದ ಧನಂಜಯ್

  ಚಕ್ರವರ್ತಿ ಸೂಲಿಬೆಲೆ ಅವರ ಟ್ವೀಟ್‌ ಗೆ ಪ್ರತಿಕ್ರಿಯಿಸಿರುವ ಧನಂಜಯ್, 'ಮೊದಲು ಮಾನವನಾಗು' ಎಂದು ಬರೆದಿದ್ದಾರೆ. 'ಧರ್ಮ, ಜಾತಿಗಳನ್ನು ಮನುಷ್ಯರನ್ನು ಕಾಣದೆ, ಮಾನವನನ್ನು ಮಾತ್ರವೇ ಕಾಣು' ಎಂಬರ್ಥದಲ್ಲಿ ಧನಂಜಯ್ 'ಮೊದಲು ಮಾನವನಾಗು' ಎಂದು ಚಕ್ರವರ್ತಿ ಸೂಲಿಬೆಲೆ ಅವರಿಗೆ ಹೇಳಿದ್ದಾರೆ.

  ಸಾಹಿತ್ಯದ ಓದಿನ ನಂಟಿರುವ ಧನಂಜಯ್

  ಸಾಹಿತ್ಯದ ಓದಿನ ನಂಟಿರುವ ಧನಂಜಯ್

  ಸಾಹಿತ್ಯದ ವಿದ್ಯಾರ್ಥಿ ಎಂದು ಕರೆದುಕೊಳ್ಳುವ ಧನಂಜಯ್ ತೆರೆಯ ಮೇಲೆ ಎಷ್ಟೆ ಚಿತ್ರ ವಿಚಿತ್ರವಾದ ಪಾತ್ರಗಳನ್ನು ಮಾಡಿದರೂ ಸಹ ಸಾಹಿತ್ಯದೊಂದಿಗೆ, ಮಾನವಪರ ವಿಚಾರಗಳೊಂದಿಗೆ ನಂಟುಳ್ಳವರು. ಧನಂಜಯ್ ಜಾತ್ಯಾತೀತ, ಧರ್ಮಾತೀತ ವ್ಯಕ್ತಿದವರು ಎಂಬುದು ಅವರ ಇಂದಿನ ಟ್ವೀಟ್‌ನಿಂದ ವೇದ್ಯವಾಗುತ್ತಿದೆ.

  ಒಂದು ವರ್ಗದ ವಿರೋಧ, ಒಂದು ವರ್ಗದ ಪ್ರೀತಿ

  ಒಂದು ವರ್ಗದ ವಿರೋಧ, ಒಂದು ವರ್ಗದ ಪ್ರೀತಿ

  ಡಾಲಿ ಧನಂಜಯ್ ಇಂದು ಮಾಡಿರುವ ಒಂದು ಸಾಲಿನ ಟ್ವೀಟ್‌, ಅವರಿಗೆ ಒಂದು ವರ್ಗದ ವಿರೋಧವನ್ನೂ ಒಂದು ವರ್ಗದ ಪ್ರೇಮವನ್ನೂ ಗಳಿಸಿಕೊಡುವ ಸಾಧ್ಯತೆ ಇದೆ. ಆದರೆ ಸಿನಿ ಪ್ರೇಮಿಗಳಿಗೆ ಅವರಲ್ಲಿನ ನಟನಷ್ಟೆ ಕಾಣಲಿ ಎಂಬುದು ಆಶಯ.

  English summary
  Actor Dhananjay gives reply to Chakravarthi Sulibele's tweet about Jesus and Itali's fight against corona. He said Sulibele to be human first.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X