For Quick Alerts
  ALLOW NOTIFICATIONS  
  For Daily Alerts

  'ಪ್ರೀತಿಯ ಸುಬ್ಬಿ'ಗೆ ನೋವಿನಿಂದ ವಿದಾಯ ಹೇಳಿದ 'ಡಾಲಿ'

  |

  ''ಅಂಕಲ್‌ನ ಹೊಡಿತೀನಿ ಸುಬ್ಬಿ.....ಅಂಕಲ್‌ನ ಹೊಡಿತೀನಿ......'' ಟಗರು ಚಿತ್ರದ ಫೇಮಸ್ ಡೈಲಾಗ್. ಡಾಲಿ ಧನಂಜಯ್ ಅವರು ಹೇಳುವ ಈ ಡೈಲಾಗ್ ಇಂದಿಗೂ ಮಾಸ್ ಪ್ರೇಕ್ಷಕರ ಫೇವರಿಟ್.

  ಟಗರು ಚಿತ್ರದಲ್ಲಿ ಡಾಲಿ ಹೇಳುವ ಸುಬ್ಬಿ ಪಾತ್ರ ಮಾಡಿರುವುದು ರಾಕ್‌ಲೈನ್ ಸುಧಾಕರ್. ದುರಾದೃಷ್ಟವಶಾತ್ ರಾಕ್ಲೈನ್ ಸುಧಾಕರ್ ಇಂದು ಹಠಾತ್ತಾಗಿ ನಿಧನ ಹೊಂದಿದ್ದಾರೆ. ಶುಗರ್‌ಲೆಸ್ ಚಿತ್ರದ ಶೂಟಿಂಗ್ ವೇಳೆ ಸಾವನ್ನಪ್ಪಿದ್ದಾರೆ. ನೆಚ್ಚಿನ ವ್ಯಕ್ತಿ, ಕಲಾವಿದನನ್ನು ಕಳೆದುಕೊಂಡಿದ್ದಕ್ಕೆ ಚಿತ್ರರಂಗ ಮರುಗಿದೆ. ಪ್ರೀತಿಯ ಸುಬ್ಬಿಯ ನಿಧನಕ್ಕೆ ಡಾಲಿ ಸಹ ಸಂತಾಪ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....

  ಸುಬ್ಬಿ ವಿದಾಯ ಹೇಳಿದ ಡಾಲಿ

  ಸುಬ್ಬಿ ವಿದಾಯ ಹೇಳಿದ ಡಾಲಿ

  ''ಪ್ರೀತಿಯ ಸುಬ್ಬಿ...,

  ಸಿಕ್ಕಾಗಲೆಲ್ಲ ನಗಿಸುತ್ತ, ಬದುಕಿನ ಫಿಲಾಸಫಿಗಳ ನಿನ್ನದೇ ರೀತಿಯಲ್ಲಿ ಅದ್ಭುತವಾಗಿ ಹೇಳುತ್ತ, ಪ್ರೀತಿಯಿಂದ ತಬ್ಬಿ ಒಳ್ಳೆಯದೆ ಆಗುತ್ತದೆ ಎಂದು ಹರಸುತ್ತಿದ್ದೆ. ನಿನ್ನಗಲಿಕೆಯ ನೋವು ಹೇಳತೀರದು. ಶಾಂತಿಯಿಂದ ನಿದ್ರಿಸು. ಇಂತಿ ನಿನ್ನ ಪ್ರೀತಿಯ ಡಾಲಿ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಕನ್ನಡದ ಖ್ಯಾತ ಹಾಸ್ಯನಟ ರಾಕ್‌ಲೈನ್ ಸುಧಾಕರ್ ನಿಧನಕನ್ನಡದ ಖ್ಯಾತ ಹಾಸ್ಯನಟ ರಾಕ್‌ಲೈನ್ ಸುಧಾಕರ್ ನಿಧನ

  ಡಾಲಿ-ಸುಬ್ಬಿ ಹಿಟ್ ಕಾಂಬಿನೇಶನ್

  ಡಾಲಿ-ಸುಬ್ಬಿ ಹಿಟ್ ಕಾಂಬಿನೇಶನ್

  'ಟಗರು' ಚಿತ್ರದಲ್ಲಿ ಡಾಲಿ ಪಾತ್ರದಲ್ಲಿ ನಟಿಸಿದ್ದ ಧನಂಜಯ್ ಗೆ ಸುಬ್ಬಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಕ್‌ಲೈನ್ ಸುಧಾಕರ್ ಉತ್ತಮ ಸಾಥ್ ನೀಡಿದ್ದರು. ಇಡೀ ಚಿತ್ರದಲ್ಲಿ ಡಾಲಿ ಮತ್ತು ಸುಬ್ಬಿಯ ದೃಶ್ಯಗಳು ಪ್ರೇಕ್ಷಕರ ಗಮನ ಸೆಳೆದಿತ್ತು. ಇದೇ ಸ್ನೇಹ ಧನಂಜಯ್ ಮತ್ತು ಸುಧಾಕರ್ ನಡುವೆ ಸಹ ಬೆಳೆದಿತ್ತು.

  ಚಿತ್ರರಂಗ ಸಂತಾಪ

  ಚಿತ್ರರಂಗ ಸಂತಾಪ

  ರಾಕ್‌ಲೈನ್ ಸುಧಾಕರ್ ಅವರ ನಿಧನಕ್ಕೆ ಕನ್ನಡದ ಹಲವು ತಾರೆಯರು ಸಂತಾಪ ಸೂಚಿಸಿದ್ದಾರೆ. '2020ಯ ರೌದ್ರಾವತಾರ ಮುಂದುವರೆದಿದೆ..ಸಿನಿಕಲಾವಿದರಾದ ರಾಕ್‌ಲೈನ್ ಸುಧಾಕರ್ ರವರು ಇಂದು ಮೇಕಪ್ ಹಚ್ಚಿರುವಾಗಲೇ ಹೃದಯಘಾತದಿಂದ ನಮ್ಮನ್ನೆಲ್ಲಾ ಅಗಲಿದ್ದಾರೆ..ಅವರ ಆತ್ಮಕ್ಕೆ ಶಾಂತಿ ಸಿಗಲಿ... ಓಂ ಶಾಂತಿ..'' ಎಂದು ನಿರ್ದೇಶಕ ಸುನಿ ಟ್ವೀಟ್ ಮಾಡಿದ್ದಾರೆ.

  ಸಿನಿಪ್ರಿಯರಿಗೆ ದಕ್ಷಿಣದಿಂದ ಬಂತು ಸಿಹಿ ಸುದ್ದಿ | Filmibeat Kannada
  ಕನ್ನಡದ ಹಿರಿಯ ಕಲಾವಿದ

  ಕನ್ನಡದ ಹಿರಿಯ ಕಲಾವಿದ

  120 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸುಧಾಕರ್, 'ಡಕೋಟಾ ಎಕ್ಸ್‌ಪ್ರೆಸ್' ಸಿನಿಮಾದ ಮೂಲಕ ಅಭಿನಯ ಪ್ರಾರಂಭಿಸಿದ್ದರು, ಆದರೆ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಪಂಚರಂಗಿ ಸಿನಿಮಾ. ಆ ನಂತರ ಪರಮಾತ್ಮ, ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ, ಲವ್ ಇನ್ ಮಂಡ್ಯ, ವಾಸ್ತು ಪ್ರಕಾರ, ಜೂಮ್, ಟೋಪಿವಾಲಾ, ಕೆಮಿಸ್ಟ್ರಿ ಆಫ್ ಕರಿಯಪ್ಪ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  Kannada Actor Dhananjaya mourns death of popular comedian rockline sudhakar. sudhakar passed away today due to cardiac arrest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X