For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಕಾಲಿಗೆ ಬಿದ್ದ ಧನ್ವೀರ್: ಹೇಗಿತ್ತು 'ಬಜಾರ್' ಹುಡ್ಗನ ಬರ್ತ್‌ಡೇ ಸೆಲೆಬ್ರೇಷನ್?

  |

  'ಬಜಾರ್' ಹಾಗೂ 'ಬೈಟು ಲವ್' ಸಿನಿಮಾಗಳಿಂದ ಭರವಸೆ ಮೂಡಿಸಿರುವ ಯುವ ನಟ ಧನ್ವೀರ್ ಗೌಡ ನಿನ್ನೆಯಷ್ಟೆ(ಸೆಪ್ಟೆಂಬರ್ 9) ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಧನ್ವೀರ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಜಯತೀರ್ಥ ನಿರ್ದೇಶನದ 'ಕೈವ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಸಂಜೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕೇಕ್ ಕತ್ತರಿಸಿ ಧನ್ವೀರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

  ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದು. ಯುವನಟರನ್ನು ಬೆಂಬಲಿಸುವಲ್ಲಿ ದರ್ಶನ್ ಸದಾ ಮುಂದೆ ನಿಲ್ಲುತ್ತಾರೆ. ಸಾಕಷ್ಟು ಹೊಸ ಪ್ರತಿಭೆಗಳ ಸಿನಿಮಾ ಕಾರ್ಯಕ್ರಮಗಳಿಗೆ ಬಂದು ಶುಭ ಹಾರೈಸಿದ್ದಾರೆ. ಧನ್ವೀತ್ ನಟನೆಯ 'ಬಜಾರ್' ಚಿತ್ರಕ್ಕೂ ದರ್ಶನ್‌ ಸಾಥ್ ಕೊಟ್ಟಿದ್ದರು. ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಿದ್ದರು. ಅಷ್ಟೇ ಅಲ್ಲ ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ನಟನೆ ಬಗ್ಗೆ ಧನ್ವೀರ್‌ಗೆ ಒಂದಷ್ಟು ಟಿಪ್ಸ್ ಕೂಡ ಕೊಟ್ಟಿದ್ದರು.

  ಧನ್ವೀರ್ 'ಕೈವ' ಪೋಸ್ಟರ್ ರಿಲೀಸ್: ಆ ಘಟನೆಯ ಸುತ್ತಾ ಜಯತೀರ್ಥ ದೃಶ್ಯಕಾವ್ಯ!ಧನ್ವೀರ್ 'ಕೈವ' ಪೋಸ್ಟರ್ ರಿಲೀಸ್: ಆ ಘಟನೆಯ ಸುತ್ತಾ ಜಯತೀರ್ಥ ದೃಶ್ಯಕಾವ್ಯ!

  ದರ್ಶನ್ ಹಾಗೂ ಧನ್ವೀರ್ ನಡುವೆ ಗುರು ಶಿಷ್ಯರ ಬಾಂಧವ್ಯ ಇದೆ. ದರ್ಶನ್‌ನ ಧನ್ವೀರ್ ಅಣ್ಣ ಅಂತಲೇ ಕರೀತಾರೆ. ಆರ್‌ಆರ್‌ ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಧನ್ವೀರ್ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬರ್ತ್‌ಡೇ ಪಾರ್ಟಿಯಲ್ಲಿ ನಟ ದರ್ಶನ್ ಕೂಡ ಭಾಗಿ ಆಗಿದ್ದಾರೆ. ಕೇಕ್ ಕಟ್ ಮಾಡಿ ದರ್ಶನ್ ಕಾಲಿಗೆ ಬಿದ್ದು ಧನ್ವೀರ್ ಆಶಿರ್ವಾದ ಪಡೆದುಕೊಂಡಿದ್ದಾರೆ. ರ್ಯಾಪರ್ ಆಲ್‌ಓಕೆ, ಹಾಸ್ಯ ನಟ ಶಿವರಾಜ್ ಕೆ. ಆರ್‌ ಪೇಟೆ ಸೇರಿದಂತೆ ಧನ್ವೀರ್ ಗೌಡ ಆಪ್ತರು ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ವಿಡಿಯೋ ಮತ್ತು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

  ಹುಬ್ಬಳ್ಳಿಯಲ್ಲಿ ಧನ್ವೀರ್ ಗೌಡ ಮೇಲೆ ಮುಗಿಬಿದ್ದ ಅಭಿಮಾನಿಗಳುಹುಬ್ಬಳ್ಳಿಯಲ್ಲಿ ಧನ್ವೀರ್ ಗೌಡ ಮೇಲೆ ಮುಗಿಬಿದ್ದ ಅಭಿಮಾನಿಗಳು

  ಸದ್ಯ ಧನ್ವೀರ್ 'ಕೈವ' ಹಾಗೂ 'ವಾಮನ' ಎನ್ನುವ ಎರಡೂ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಜಯ ತೀರ್ಥ ನಿರ್ದೇಶನದ 'ಕೈವ' ನೈಜ ಘಟನೆಗಳನ್ನು ಆಧರಿಸಿರುವ ಸಿನಿಮಾ. ಚಿತ್ರದಲ್ಲಿ ಮೇಘಾ ಶೆಟ್ಟಿ ನಾಯಕಿಯಾಗಿ ಮಿಂಚಿದ್ದಾರೆ. 1983 ಸೆಪ್ಟೆಂಬರ್ 12ರಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ದುರಂತ ಘಟನೆಯ ಸುತ್ತಾ ಕಥೆಯನ್ನು ಹೆಣೆಯಲಾಗಿದೆ. ಚಿತ್ರದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದೆ. ಚಿತ್ರದಲ್ಲಿ ಇತಿಹಾಸ ಪ್ರಸಿದ್ಧ ಕರಗ ಉತ್ಸವವನ್ನು ತೋರಿಸಲಾಗುತ್ತಿದೆ. ಇನ್ನೊಂದು ವಾರ ಶೂಟಿಂಗ್ ಬಾಕಿಯಿದೆ. ಪ್ರೀ ಪ್ರೊಡಕ್ಷನ್ ವರ್ಕ್‌ ಕೂಡ ಭರದಿಂದ ಸಾಗಿದ್ದು, ಇದೇ ವರ್ಷ ತೆರೆಮೇಲೆ 'ಕೈವ'ನ ಆರ್ಭಟ ಶುರುವಾಗಲಿದೆ.

  Actor Dhanveer Birthday Bash with Challenging star Darshan

  ಅಭಿಮಾನಿ ಮೇಲೆ ನಟ ಧನ್ವೀರ್‌ ಹಲ್ಲೆ ಪ್ರಕರಣಕ್ಕೆ ನಾಟಕೀಯ ತಿರುವು!ಅಭಿಮಾನಿ ಮೇಲೆ ನಟ ಧನ್ವೀರ್‌ ಹಲ್ಲೆ ಪ್ರಕರಣಕ್ಕೆ ನಾಟಕೀಯ ತಿರುವು!

  ಶಂಕರ್ ರಾಮನ್ ನಿರ್ದೇಶನದ 'ವಾಮನ' ಚಿತ್ರದಲ್ಲಿ ಮಾಸ್ ಹೀರೋ ಆಗಿ ಧನ್ವೀರ್ ನಟಿಸ್ತಿದ್ದಾರೆ. ಇತ್ತೀಚೆಗೆ ಸಿನಿಮಾ ಶೂಟಿಂಗ್‌ ವೇಳೆ ಧನ್ವೀರ್ ಕೈಗೆ ಪೆಟ್ಟಾಗಿತ್ತು. ಮಾಫಿಯಾ ಹಿನ್ನೆಲೆಯ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗ್ತಿದೆ. ತುಳುನಾಡಿನ ಕುವರಿ ರಚನಾ ರೈ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರಲಿದೆ.

  English summary
  Actor Dhanveer Birthday Bash with Challenging star Darshan. Dhanveer falls on Darshan feet for blessing. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X