For Quick Alerts
  ALLOW NOTIFICATIONS  
  For Daily Alerts

  ನಟ ಧ್ರುವ ಶರ್ಮಾ ಅಭಿನಯಿಸಿದ್ದ ಕನ್ನಡ ಚಿತ್ರಗಳಿವು

  By Bharath Kumar
  |

  ಯುವ ನಟ ಹಾಗೂ ಖ್ಯಾತ ಸಿಸಿಎಲ್ ಕ್ರಿಕೆಟರ್ ಧ್ರುವ ಶರ್ಮಾ ಬಹು ಅಂಗಾಗ ವೈಪಲ್ಯದಿಂದ ನಿಧನರಾಗಿದ್ದಾರೆ. 35 ವರ್ಷದ ಧ್ರುವ ಶರ್ಮಾ ಮಾತು ಬಾರದಿದ್ದರೂ ಕಿವಿ ಕೇಳದಿದ್ದರೂ ಅಪ್ರತಿಮ ಕಲಾವಿದರಾಗಿದ್ದರು.

  ಒಂದು ಕಡೆ ಚಲನಚಿತ್ರಗಳಲ್ಲಿ ನಟಿಸಿ ತಮ್ಮ ಪ್ರತಿಭೆಯನ್ನ ಜಗತ್ತಿಗೆ ತೋರಿಸಿದ್ದರು. ತನ್ನ ನೂನ್ಯತೆಗಳು ಅವರ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನ ಬೆಳ್ಳಿತೆರೆ ಮೇಲೆ ಅಭಿನಯಿಸಿ ಸಾಬೀತು ಪಡಿಸಿದ್ದರು. ಮತ್ತೊಂದೆಡೆ ಸಿ.ಸಿ.ಎಲ್.ನಲ್ಲಿ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿದ್ದರು. ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಧ್ರುವ ತಂಡಕ್ಕೆ ಆಧಾರವಾಗಿದ್ದರು.

  ವಿಶಿಷ್ಟ ನಟ, ಕ್ರಿಕೆಟರ್ ಧ್ರುವ ಶರ್ಮ ಇನ್ನಿಲ್ಲ

  ಹಾಗಿದ್ರೆ, ಧ್ರುವ ಶರ್ಮಾ ಅಭಿನಯಿಸಿದ್ದ ಕನ್ನಡ ಚಿತ್ರಗಳು ಯಾವುದು? ಇಲ್ಲಿದೆ ನೋಡಿ

  ಸ್ನೇಹಾಂಜಲಿ

  ಸ್ನೇಹಾಂಜಲಿ

  2007 ರಲ್ಲಿ ತೆರೆಕಂಡ 'ಸ್ನೇಹಾಂಜಲಿ' ಚಿತ್ರದ ಮೂಲಕ ನಾಯಕ ನಟನಾಗಿ ಬಣ್ಣ ಹಚ್ಚಿದ ಧ್ರುವ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದರು. ಅಂಜು ಶರ್ಮಾ, ಅನಂತ್ ನಾಗ್, ಸುರೇಶ್ ಶರ್ಮಾ, ದೊಡ್ಡಣ್ಣ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದರು. ಗಿರೀಶ್ ಕಂಪ್ಲಾರ್ ಪುರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.

  'ಸ್ನೇಹಾಂಜಲಿ' ನಟ ಧ್ರುವ್ ಶರ್ಮ ನಿಧನ

  ನೀನಂದ್ರೆ ಇಷ್ಟ ಕಣೋ

  ನೀನಂದ್ರೆ ಇಷ್ಟ ಕಣೋ

  ಟಿ.ಎನ್ ಜಯರಾಮ್ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ನೀನಂದ್ರೆ ಇಷ್ಟ ಕಣೋ' ಚಿತ್ರದಲ್ಲಿ ಶರಣ್ ಹಾಗೂ ಧ್ರುವ ಶರ್ಮಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.

  ತಿಪ್ಪಾಜ್ಜಿ ಸರ್ಕಲ್

  ತಿಪ್ಪಾಜ್ಜಿ ಸರ್ಕಲ್

  ಪೂಜಾ ಗಾಂಧಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ 'ತಿಪ್ಪಾಜ್ಜಿ ಸರ್ಕಲ್' ಚಿತ್ರದಲ್ಲಿ ಧ್ರುವ ವಿಶೇಷ ಪಾತ್ರವನ್ನ ನಿರ್ವಹಿಸಿದ್ದರು. ನಟಿ ನೇಹಾ ಪಾಟೀಲ್ ಧ್ರುವ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರವನ್ನ ಆದಿತ್ಯ ಚಿಕ್ಕಣ್ಣ ನಿರ್ದೇಶನ ಮಾಡಿದ್ದರು.

  ಬೆಂಗಳೂರು 560023

  ಬೆಂಗಳೂರು 560023

  ಕ್ರಿಕೆಟ್ ಆಟದ ಕುರಿತಾಗಿಯೇ ಮೂಡಿ ಬಂದಿದ್ದ ಕಾಮಿಡಿ ಎಂಟರ್ ಟೈನ್ ಮೆಂಟ್ 'ಬೆಂಗಳೂರು 560023' ಚಿತ್ರದಲ್ಲಿ ಧ್ರುವ ಶರ್ಮಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಕಾರ್ತಿಕ್ ಜಯರಾಮ್, ಚಂದನ್ ಕುಮಾರ್, ಚಿಕ್ಕಣ್ಣ, ರಾಜೀವ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು.

  ಲೂಟಿ

  ಲೂಟಿ

  ಇಷಾ ಕೋಪ್ಲಿಕರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ 'ಲೂಟಿ' ಚಿತ್ರದಲ್ಲಿ ಧ್ರುವ ಶರ್ಮಾ ಅಭಿನಯಿಸಿದ್ದರು. ಗಿರೀಶ್ ಕಂಪ್ಲಾರ್ ಪುರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸಾಧುಕೋಕಿಲಾ. ಶ್ವೇತಾ ಪಂಡಿತ್, ದಿಲೀಪ್ ಸೇರಿದಂತೆ ಹಲವರು ಅಭಿನಯಿಸಿದ್ದರು.

  English summary
  Differently abled Actor Dhruv Sharma Films List. Actor, Cricketer Dhruv Sharma Passes Away on August 1st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X