For Quick Alerts
  ALLOW NOTIFICATIONS  
  For Daily Alerts

  'ಅದ್ಧೂರಿ'ಯಾಗಿ ನಿಶ್ಚಿತಾರ್ಥ ಮಾಡಿಕೊಂಡ 'ಭರ್ಜರಿ' ಹುಡುಗ

  |

  ನಟ ಅರ್ಜುನ್ ಸರ್ಜಾ ಸೋದರಳಿಯ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಅವರ ನಿಶ್ಚಿತಾರ್ಥ ಸಂಪ್ರದಾಯವಾಗಿ ನೆರವೇರಿದೆ. ಬನಶಂಕರಿಯ ಧರ್ಮಗಿರಿ ದೇವಸ್ಥಾನದಲ್ಲಿ ಕುಟುಂಬ, ಬಂಧು-ಮಿತ್ರರ ಸುಮ್ಮಖದಲ್ಲಿ ಬಾಲ್ಯದ ಗೆಳತಿ ಪ್ರೇರಣಾಗೆ ಉಂಗುರ ತೊಡಿಸಿದರು.

  ಈ ಮೂಲಕ ಸುಮಾರು 16 ವರ್ಷದ ಪ್ರೀತಿಗೆ ಅಧಿಕೃತವಾಗಿ ಮದುವೆ ಎಂಬ ಮುದ್ರೆ ಬಿದ್ದಿದೆ. ಕಲಾ ನಿರ್ದೇಶಕ ಅರುಣ್ ಸಾಗರ್ ನಿರ್ಮಿಸಿದ್ದ ತೆಂಗಿನ ಗರಿಯ ಹಸಿರು ತಳಿರು-ತೋರಣಗಳ ವೇದಿಕೆಯಲ್ಲಿ ಪ್ರೇರಣಾ ಮತ್ತು ಧ್ರುವ ಪರಸ್ಪರ ಉಂಗುರ ಬದಲಿಸಿಕೊಂಡರು.

  ಧ್ರುವ ಸರ್ಜಾ ಮತ್ತು ಪ್ರೇರಣ ನಿಶ್ಚಿತಾರ್ಥದಲ್ಲಿ ಕಂಡು ಬಂದ ವಿಶೇಷಗಳು

  ಇದಕ್ಕೂ ಮುಂಚೆ ಗೋ ಪೂಜೆ, ಮಂತ್ರ ಘೋಷಣೆ, ಸೇರಿದಂತೆ ಹಲವು ರೀತಿ ಶಾಸ್ತ್ರಗಳನ್ನ ನೆರವೇರಿಸಲಾಗಿತ್ತು. ಈ ಸಂಪ್ರದಾಯ ಕಾರ್ಯಕ್ರಮಗಳಲ್ಲಿ ಎರಡು ಕುಟುಂಬದವರು ಭಾಗವಹಿಸಿದ್ದರು.

  11 ಗಂಟೆಗೆ ಉಂಗುರ ಬದಲಿಸಿಕೊಳ್ಳಲಿರುವ ಧ್ರುವ-ಪ್ರೇರಣಾ

  ಇನ್ನು ಧ್ರುವ ಸರ್ಜಾ ಅವರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ, ಹಲವು ಗಣ್ಯರು ಆಗಮಿಸಿ ನವಜೋಡಿಗಳು ಶುಭಕೋರಿದರು. ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರವಿಶಂಕರ್, ವಿನೋದ್ ಪ್ರಭಾಕರ್, ನಿರ್ದೇಶಕ ಹರ್ಷ, ಮಹೇಶ್ ಗೌಡ, ಚೇತನ್, ನಟ ಪ್ರಥಮ್, ನಿರ್ಮಾಪಕ ಕೆ ಮಂಜು ಸೇರಿದಂತೆ ಹಲವರು ಭಾಗಿಯಾಗಿದ್ದರು.

  English summary
  Kannada Actor dhruva sarja got engaged with prerana shankar. A grand ceremony held at dharmagiri temple, banashankari

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X