For Quick Alerts
  ALLOW NOTIFICATIONS  
  For Daily Alerts

  ಧ್ರುವಗೆ ಪ್ರೀತಿಯ ಪಾಠ ಮಾಡಿದ ಈ ಟೀಚರ್ ಯಾರು?

  |
  14 ವರ್ಷದ ಗೆಳತಿಯೊಂದಿಗೆ ವಿವಾಹ ಮಾಡಿಕೊಳ್ಳಲು ಹೊರಟ ಧ್ರುವ ಸರ್ಜಾ | FILMIBEAT KANNADA

  ನಟ ಧ್ರುವ ಸರ್ಜಾ ಮದುವೆಗಂಡು ಆಗುತ್ತಿದ್ದಾರೆ. ಇದು ಯಾವುದೇ ಸಿನಿಮಾದಲ್ಲಿ ಅಲ್ಲ, ನಿಜ ಜೀವನದಲ್ಲಿ. ಹೌದು, ಆಕ್ಷನ್ ಪ್ರಿನ್ಸ್ ಧ್ರುವಗೆ ಈಗ ಕಂಕಣ ಭಾಗ್ಯ ಕೂಡಿ ಬಂದಿದೆ.

  ಕಳೆದ ಬಾರಿಯ ತಮ್ಮ ಹುಟ್ಟುಹಬ್ಬದ ದಿನ ನಾನು ಲವ್ ಮ್ಯಾರೇಜ್ ಆಗುತ್ತೇನೆ ಎಂದು ಸುಳಿವು ನೀಡಿದ್ದ ಧ್ರುವ, ಅದೇ ರೀತಿ ಈಗ ಪ್ರೀತಿಸಿದ ಹುಡುಗಿಯ ಜೊತೆಗೆ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಧ್ರುವ ಸರ್ಜಾ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಡಿಸೆಂಬರ್ 9 ರಂದು ಬೆಂಗಳೂರಿನಲ್ಲಿಯೇ ನಡೆಯಲಿದೆ.

  'ಬಹದ್ದೂರ್' ಗಂಡು ಧ್ರುವ ಸರ್ಜಾಗೆ ಕೂಡಿ ಬಂತು ಕಂಕಣ ಭಾಗ್ಯ

  ಧ್ರುವ ಸರ್ಜಾ ಮದುವೆ ಆಗುತ್ತಿರುವ ಹುಡುಗಿ ಯಾರು?, ಅವರ ರಿಯಲ್ ಲವ್ ಸ್ಟೋರಿ ಹೇಗಿದೆ? ಎನ್ನುವ ಕುತೂಹಲ ಅನೇಕರಿಗೆ ಇರುತ್ತದೆ. ಅಂದಹಾಗೆ, ಧ್ರುವ ಸರ್ಜಾ ಹೃದಯ ಕದ್ದ ಆ ಹುಡುಗಿ ಯಾರು ಎಂಬ ವಿವರ ಮುಂದಿದೆ ಓದಿ...

  ಧ್ರುವಗೆ ಪ್ರೀತಿ ಪಾಠ ಮಾಡಿದ ಟೀಚರ್

  ಧ್ರುವಗೆ ಪ್ರೀತಿ ಪಾಠ ಮಾಡಿದ ಟೀಚರ್

  ನಟ ಧ್ರುವ ಸರ್ಜಾ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಪ್ರೇರಣಾ. ಇವರು ಶಂಕರ್ ಮತ್ತು ಸರಿತಾ ಎಂಬ ದಂಪತಿಯ ಪುತ್ರಿ. ಸದ್ಯ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಟೀಚರ್ ಧ್ರುವಗೆ ಪ್ರೀತಿಯ ಪಾಠ ಮಾಡಿದ್ದಾರೆ.

  ಚಿರು-ಮೇಘನಾ ಆರತಕ್ಷತೆಯಲ್ಲಿ ತಾರಾ ಮೆರುಗು

  14 ವರ್ಷಗಳ ಲವ್ ಸ್ಟೋರಿ

  14 ವರ್ಷಗಳ ಲವ್ ಸ್ಟೋರಿ

  ಪ್ರೇರಣಾ ನಟ ಧ್ರುವ ಸರ್ಜಾ ಅವರ ಎದುರು ಮನೆಯ ಹುಡುಗಿ. ಸುಮಾರು ವರ್ಷಗಳಿಂದ ಇಬ್ಬರ ನಡುವೆ ಪರಿಚಯ ಇತ್ತು. ಕಳೆದ 14 ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದಾರೆ. ಈಗ ಧ್ರುವ 'She is my ಪುಟ್ಟಗೌರಿ, i won't ask dowry...' ಅಂತ ರಿಯಲ್ ಆಗಿ ಹಾಡು ಹೇಳುತ್ತಿದ್ದಾರೆ.

  ಮುಂದಿನ ಬರ್ತಡೇಯಷ್ಟರಲ್ಲಿ ಧ್ರುವ ಸರ್ಜಾ ಮದುವೆ.!

  ಚಿತ್ರರಂಗಕ್ಕೆ ಬರುವ ಮುನ್ನ ಪ್ರೀತಿ

  ಚಿತ್ರರಂಗಕ್ಕೆ ಬರುವ ಮುನ್ನ ಪ್ರೀತಿ

  ಧ್ರುವ ಸರ್ಜಾ ಹಾಗೂ ಪ್ರೇರಣಾ ನಡುವೆ ಪ್ರೀತಿ ಹುಟ್ಟಿದ್ದ ಸಮಯದಲ್ಲಿ ಧ್ರುವ ಇನ್ನೂ ಚಿತ್ರರಂಗಕ್ಕೆ ಬಂದಿರಲಿಲ್ಲ. 16 ವರ್ಷದ ಹುಡುಗನಾಗಿದ್ದಾಗ ಪ್ರೇರಣಾ ಮೇಲೆ ಧ್ರುವಗೆ ಲವ್ ಆಗಿತ್ತು. ಆಗ ಧ್ರುವ ಬಾಕ್ಸರ್ ಆಗುವ ಕನಸು ಹೊಂದಿದ್ದರು. ನಂತರ ಚಿತ್ರರಂಗಕ್ಕೆ ಬಂದರು.

  ಎರಡು ಕುಟುಂಬಗಳ ಒಪ್ಪಿಗೆ

  ಎರಡು ಕುಟುಂಬಗಳ ಒಪ್ಪಿಗೆ

  ಧ್ರುವ ಹಾಗೂ ಪ್ರೇರಣಾ ಅವರ ಇಬ್ಬರ ಕುಟುಂಬಗಳು ಬಹಳ ವರ್ಷದಿಂದ ಒಡನಾಟ ಹೊಂದಿದೆಯಂತೆ. ಹೀಗಾಗಿ ಅನೇಕ ಬಾರಿ ಎರಡು ಕುಟುಂಬದ ಕಾರ್ಯಕ್ರಮಗಳಿದ್ದಾಗ ಒಟ್ಟಾಗಿ ಧ್ರುವ - ಪ್ರೇರಣಾ ಭಾಗಿಯಾಗಿದ್ದಾರಂತೆ. ಅವರಿಬ್ಬರ ಪ್ರೇಮದ ವಿಷಯ ಮನೆಯವರ ಮುಖದಲ್ಲಿ ಈಗ ಸಂತಸ ಮೂಡಿಸಿದೆ.

  ಡಿಸೆಂಬರ್ 9 ರಂದು ನಿಶ್ಚಿತಾರ್ಥ

  ಡಿಸೆಂಬರ್ 9 ರಂದು ನಿಶ್ಚಿತಾರ್ಥ

  ಧ್ರುವ ಸರ್ಜಾ ಅವರ ನಿಶ್ಚಿತಾರ್ಥ ಡಿಸೆಂಬರ್ 9 ರಂದು ನಡೆಯಲಿದೆ. ಬೆಂಗಳೂರಿನ ಬನಶಂಕರಿಯಲ್ಲಿರುವ ವೀರಾಂಜನೇಯ ದೇವಸ್ಥಾನದಲ್ಲಿ ಕಾರ್ಯಕ್ರಮಗಳು ಸರಳವಾಗಿ ನಡೆಯಲಿದೆಯಂತೆ. ಎರಡು ಕುಟುಂಬದ ಸದಸ್ಯರು ಹಾಗೂ ಆಪ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

  ಮದುವೆ ಯಾವಾಗ ?

  ಮದುವೆ ಯಾವಾಗ ?

  ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರ ಮದುವೆ ಯಾವಾಗ ಎನ್ನುವ ವಿಚಾರ ಡಿಸೆಂಬರ್ 9 ರಂದು ಅಂದರೆ, ನಿಶ್ಚಿತಾರ್ಥದ ದಿನವೇ ತಿಳಿಯಲಿದೆಯಂತೆ. ಸದ್ಯದಲ್ಲಿಯೇ ಒಂದು ಸುದ್ದಿಗೋಷ್ಟಿ ನಡೆಸಿ ನಿಶ್ಚಿತಾರ್ಥದ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರಂತೆ.

  English summary
  Kannada Actor Dhruva Sarja to get engaged with his girl friend Prerana on December 9th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X