For Quick Alerts
  ALLOW NOTIFICATIONS  
  For Daily Alerts

  Breaking: ಬೆಂಗಳೂರಿಗೆ ದಿಗಂತ್: ಆತಂಕದ ಅಗತ್ಯವಿಲ್ಲ

  |

  ಕತ್ತು, ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿರುವ ನಟ ದಿಗಂತ್ ಅನ್ನು ಗೋವಾದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ.

  ಪತ್ನಿ ಐಂದ್ರಿತಾ ರೇ ಜೊತೆ ಗೋವಾ ಪ್ರವಾಸದಲ್ಲಿದ್ದ ನಟ ದಿಗಂತ್, ಅಲ್ಲಿ ಟ್ರಾಂಪೊಲಿನ್‌ ಮೇಲೆ ಆಡುತ್ತಿದ್ದಾಗ ಆಯತಪ್ಪಿ ಬಿದ್ದು ಕುತ್ತಿಗೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದರು. ದಿಗಂತ್ ಅವರನ್ನು ಗೋವಾದ ಆಸ್ಪತ್ರೆಯೊಂದಕ್ಕೆ ನಿನ್ನೆಯೇ ದಾಖಲಿಸಲಾಗಿತ್ತು.

  ಆದರೆ ಹೆಚ್ಚುವರಿ ಚಿಕಿತ್ಸೆಯ ಅಗತ್ಯ ಇದ್ದ ಕಾರಣ ದಿಗಂತ್ ಅವರನ್ನು ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಗೋವಾದಿಂದ ಏರ್‌ಲಿಫ್ಟ್ ಮಾಡಿ ಹೆಲಿಕಾಪ್ಟರ್ ಮೂಲಕ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಕರೆತಂದು ಅಲ್ಲಿಂದ ಈಗ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗಿದೆ.

  ದಿಗಂತ್ ಅನ್ನು ಆಂಬುಲೆನ್ಸ್‌ನಿಂದ ಇಳಿಸಿ ಆಸ್ಪತ್ರೆಯ ಒಳಕ್ಕೆ ಕರೆದುಕೊಂಡು ಹೋಗುತ್ತಿರುವ ದೃಶ್ಯಗಳು ಮಾಧ್ಯಮಗಳು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈಗ ಕಂಡುಬರುತ್ತಿರುವ ದೃಶ್ಯಾವಳಿಗಳ ಪ್ರಕಾರ ದಿಗಂತ್‌ ಕತ್ತಿಗೆ ಹೆಚ್ಚಿನ ಪೆಟ್ಟಾಗಿದೆ ಆದರೆ ತೀರ ಜೀವಕ್ಕೇನೂ ಅಪಾಯವಿಲ್ಲ.

  ದಿಗಂತ್‌ ಕತ್ತು ಅಲುಗದಂತೆ ಕಾಲರ್ ಹಾಕಲಾಗಿದ್ದು, ಆಸ್ಪತ್ರೆಗೆ ಕರೆತಂದಾಗ ದಿಗಂತ್ ಎಚ್ಚವಾಗಿ ಇದ್ದರು. ಅವರೊಟ್ಟಿಗೆ ಪತ್ನಿ ಐಂದ್ರಿತಾ ರೇ ಸಹ ಆಂಬುಲೆನ್ಸ್‌ನಲ್ಲಿಯೇ ಆಸ್ಪತ್ರೆಗೆ ಆಗಮಿಸಿದ್ದಾರೆ. ಮಣಿಪಾಲ್‌ ಆಸ್ಪತ್ರೆಯಲ್ಲಿ ದಿಗಂತ್‌ಗಾಗಿ ವಿಶೇಷ ಐಸಿಯು ವ್ಯವಸ್ಥೆ ಮಾಡಲಾಗಿದ್ದು, ರೂಮ್ ಸಂಖ್ಯೆ 1167 ನಲ್ಲಿ ದಿಗಂತ್‌ಗೆ ಚಿಕಿತ್ಸೆ ನಡೆಯಲಿದೆ.

  ಇಂದೇ ದಿಗಂತ್‌ಗೆ ಸಣ್ಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದು ವೈದ್ಯರು ಹೇಳಿದ್ದು, ನಾಳೆ ಅಥವಾ ಇನ್ನೆರಡು ದಿನದಲ್ಲಿ ದಿಗಂತ್ ಆರಾಮವಾಗಿ ನಡೆದಾಡುವಂತಾಗುತ್ತಾರೆ ಎಂದಿದ್ದಾರೆ.

  ಆಸ್ಪತ್ರೆಗೆ ನಿರ್ದೇಶಕ ಯೋಗರಾಜ್ ಭಟ್ ಭೇಟಿ ನೀಡಿದ್ದು, ದಿಗಂತ್ ಯೋಗ ಕ್ಷೇಮ ವಿಚಾರಿಸಿದ್ದಾರೆ. ದಿಗಂತ್‌ರ ತಂದೆ, ಮಾವ, ದಿಗಂತ್‌ರ ಅತ್ತಿಗೆ ಎಲ್ಲರೂ ಆಸ್ಪತ್ರೆ ಬಳಿ ಬಂದಿದ್ದು, ದಿಗಂತ್‌ ಜೊತೆ ಖುದ್ದಾಗಿ ಮಾತನಾಡಿದ್ದಾರೆ. ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ದಿಗಂತ್‌ರ ತಂದೆ, ದಿಗಂತ್‌ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ, ಇಂದು ಸಣ್ಣ ಶಸ್ತ್ರಚಿಕಿತ್ಸೆ ಮಾಡುತ್ತಾರೆ, ನಾಳೆಯಿಂದ ಆರಾಮವಾಗಿ ನಡೆದಾಡುತ್ತಾನೆ. ಬೆನ್ನು ಮೂಳೆಗೆ ಯಾವುದೆ ಪೆಟ್ಟಾಗಿಲ್ಲ ಎಂದಿದ್ದಾರೆ.

  Actor Diganth Airlifted To Bengaluru From Goa Admitted To Manipal Hospital

  ಆದರೆ ದಿಗಂತ್ ಕತ್ತು, ಹಾಗೂ ಬೆನ್ನು ಮೂಳೆಗೆ ತೀವ್ರ ಪೆಟ್ಟು ಆಗಿರುವ ಕಾರಣ ದಿಗಂತ್ ಚೇತರಿಸಿಕೊಳ್ಳಲು ಕೆಲವು ವಾರಗಳೇ ಬೇಕಾಗುವ ಸಾಧ್ಯತೆ ಇದೆ.

  English summary
  Actor Diganth Manchale airlifted to Bengaluru from Goa. He admitted to Manipal hospital. His neck fractured and spinal cord injured.
  Tuesday, June 21, 2022, 17:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X