»   » ಜಟ್ಟ ಕಾಣಲು 'ಮಿರ್ಚಿ' ಸುದೀಪ್ ತವಕ

ಜಟ್ಟ ಕಾಣಲು 'ಮಿರ್ಚಿ' ಸುದೀಪ್ ತವಕ

Posted By:
Subscribe to Filmibeat Kannada

ಇತ್ತೀಚೆಗೆ ಕನ್ನಡ ಸಿನಿರಸಿಕರ ಹೃದಯ ಗೆದ್ದಿರುವ ಗಿರಿರಾಜ್ ಬಿಎಂ ನಿರ್ದೇಶನದ ಜಟ್ಟ ಚಿತ್ರ ಹೈದರಾಬಾದ್ ತಲುಪಿದೆ.

ಬೆಂಗಳೂರು, ಭೂಗತ ಜಗತ್ತು, ಪ್ರೀತಿ ಪ್ರೇಮ ಪ್ರಣಯ ಸುತ್ತ ಗಿರಿಕಿ ಹೊಡೆಯುತ್ತಿದ್ದ ಗಾಂಧಿನಗರವನ್ನು ಬೇರೆ ಒಂದು ಪ್ರದೇಶಕ್ಕೆ ಕರೆದೊಯ್ದ ಜಟ್ಟ ಚಿತ್ರ ಕಿಚ್ಚ ಸುದೀಪ್ ರನ್ನು ಆಕರ್ಷಿಸಿದೆ.

ನಿರ್ದೇಶಕ ಗಿರಿರಾಜ್ ಅವರ ಪ್ರಯತ್ನಕ್ಕೆ ಕನ್ನಡ ನೆಲದ ಕಥೆಗೆ ಕಿಶೋರ್, ಸುಕೃತಾ, ಪಾವನ, ಬಿ ಸುರೇಶ, ಪ್ರೇಮ್ ಕುಮಾರ್ ಅಭಿನಯಕ್ಕೆ, ಆಶ್ಲೆ ಅಭಿಲಾಶ್ ಸಂಗೀತ ಮೋಡಿಗೆ ಸಹೃದಯ ಕನ್ನಡ ಪ್ರೇಕ್ಷಕರಂತೆ ಪ್ರತಿಭಾವಂತ ಚಿತ್ರಕರ್ಮಿ ಸುದೀಪ್ ಕೂಡಾ ಮಾರು ಹೋಗಿದ್ದಾರೆ.

ಆದರೆ, ಸದ್ಯಕ್ಕೆ ಹೈದರಾಬಾದಿನಲ್ಲಿ ಮಿರ್ಚಿ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿರುವ ಸುದೀಪ್ ಅವರು ಜಟ್ಟ ಮಿಸ್ ಮಾಡಿಕೊಳ್ಳಲು ಇಷ್ಟಪಡದೆ ಹೈದರಾಬಾದಿನಲ್ಲೇ ಒಂದು ವಿಶೇಷ ಪ್ರದರ್ಶನ ಆಯೋಜಿಸುವ ಬಗ್ಗೆ ಆಲೋಚಿಸಿದ್ದಾರೆ.

ಹೈದರಾಬಾದಿನಲ್ಲಿ ಒಂದು ಚಿತ್ರಮಂದಿರ ಪೂರ್ತಿ ಬುಕ್ ಮಾಡಿಕೊಂಡು ಕಾದಿದ್ದರಂತೆ ಆದರೆ ಸಮಯಕ್ಕೆ ಸರಿಯಾಗಿ ಚಿತ್ರದ ಪ್ರಿಂಟ್ ಹೈದರಾಬಾದ್ ತಲುಪಿಲ್ಲವಂತೆ. ಕೊನೆಗೆ ಚಿತ್ರದ ನಿರ್ದೇಶಕ ಗಿರಿರಾಜ್ ಅವರು ಚಿತ್ರದ ಮಾಸ್ಟರ್ ಡಿವಿಡಿ ಪ್ರತಿಯನ್ನು ಹೈದರಾಬಾದಿಗೆ ರವಾನಿಸಿದ್ದಾರೆ.

ಕಿಚ್ಚ ಸುದೀಪ್ ಜತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡಾ ಇದ್ದು, ಅವರು ಜಟ್ಟ ನೋಡಲು ಉತ್ಸುಕರಾಗಿದ್ದಾರೆ ಎಂದು ತಿಳಿದು ಬಂದಿದೆ ಎಂದು ಚಿತ್ರಲೋಕ ವೆಬ್ ತಾಣ ವರದಿ ಮಾಡಿದೆ.

ಸಾರ್ವಜನಿಕರು ಹಾಗೂ ವಿಮರ್ಶಕರಿಂದ ಪ್ರಶಂಸೆಗೆ ಒಳಗಾಗಿರುವ ಜಟ್ಟ ಚಿತ್ರ ಎರಡನೇ ವಾರ ತುಂಬಿದ ಗೃಹ ಪ್ರದರ್ಶನ ಕಾಣುತ್ತಿದೆ. ಜಟ್ಟ ಚಿತ್ರ ನೋಡಿ ಚಿತ್ರರಂಗದಲ್ಲಿನ ಉತ್ತಮ ಪ್ರಯತ್ನಗಳಿಗೆ ಬೆನ್ನುತಟ್ಟುವ ಕೆಲಸ ಸುದೀಪ್ ಮಾಡುತ್ತಿದ್ದಾರೆ. ಹೈದರಾಬಾದಿನಲ್ಲಿ ಸುದೀಪ್ ಏನೇನು ಮಾಡಿದರು ಎಂಬುದನ್ನು ಮುಂದೆ ಅವರ ಟ್ವೀಟ್ ನಲ್ಲೇ ಓದಿ...

ಮಿರ್ಚಿ ಶೂಟಿಂಗ್ ನಲ್ಲಿ

ಮಿರ್ಚಿ ಶೂಟಿಂಗ್ ನಲ್ಲಿ ಸದ್ಯಕ್ಕೆ ಸುದೀಪ್ ಬ್ಯುಸಿಯಾಗಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಕೊನೆ ಫೈಟ್ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜತೆ ನಟಿಸಿದ್ದರೆ ಬಗ್ಗೆ ಹೆಮ್ಮೆಯಿಂದ ಟ್ವೀಟ್ ಮಾಡಿದ್ದಾರೆ. ಜತೆಗೆ ವಿವಾಹ ವಾರ್ಷಿಕೋತ್ಸವ ಚಿತ್ರ ಯಶಸ್ಸಿಗೆ ಶುಭ ಹಾರೈಸಿದ ಅಭಿಮಾನಿಗಳಿಗೆ ವಾಯ್ಸ್ ಮೆಸೇಜ್ ಕೂಡಾ ಕಿಚ್ಚ ಕೊಟ್ಟಿದ್ದಾರೆ.

ವಾಯ್ಸ್ ಮೆಸೇಜ್

ಶೂಟಿಂಗ್ ನಲ್ಲಿ ಫುಲ್ ಬ್ಯುಸಿ ಸೋ ವಾಯ್ಸ್ ಮೇಸೆಜ್ ಮೂಲಕ ನಿಮಗೆ ಧನ್ಯವಾದ ಅರ್ಪಿಸುತ್ತಿದ್ದೇನೆ ಎಂದ ಕಿಚ್ಚ

ಮಿರ್ಚಿ ಫೈಟಿಂಗ್

ವಿಷ್ಣುವರ್ಧನ ಚಿತ್ರದಲ್ಲಿ ಫೈಟಿಂಗ್ ಹೇಳಿಕೊಟ್ಟಿದ್ದ ಗಣೇಶ್ ಮಾಸ್ಟರ್ ಈ ಚಿತ್ರಕ್ಕೂ ಸಾಹಸ ದೃಶ್ಯ ಸಂಯೋಜಿಸಿದ್ದಾರೆ. ಮೂಲ ತೆಲುಗು ಚಿತ್ರಕ್ಕಿಂತ ಅದ್ದೂರಿಯಾಗಿ ಸಾಹಸ ಇಲ್ಲಿ ಕಾಣಬಹುದಂತೆ

ಕ್ರೇಜಿ ಸ್ಟಾರ್ ಸೂಪರ್

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ನಟನೆ ಡೈಲಾಗ್ ಡೆಲಿವರಿ ಬಗ್ಗೆ ಕಿಚ್ಚನ ಮೆಚ್ಚುಗೆ

ಕೆಂಪೇಗೌಡ 2

ಕೆಂಪೇಗೌಡ ಚಿತ್ರ ನಿರ್ಮಿಸಿ ಯಶಸ್ಸಿನ ಹಾದಿ ನೋಡಿದ್ದ ನಿರ್ಮಾಪಕ ಶಂಕರೇಗೌಡ ಅವರು ಈಗ ಕೆಂಪೇಗೌಡ 2 ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ ಎಂಬ ಸುದ್ದಿಯಿದೆ. ಆದರೆ, ಕೆಂಪೇಗೌಡ ಭಾಗ 2 ಚಿತ್ರ ಸಿಂಗಂ 2 ರಿಮೇಕ್ ಅಲ್ಲವಂತೆ.

ಮುಂದಿನ ವರ್ಷದ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಚಿತ್ರೀಕರಣ ಶುರುವಾಗಲಿದೆ. ಸುದೀಪ್ ಅವರು ಮಿರ್ಚಿ ಶೂಟಿಂಗ್ ಮುಗಿಸಿದ ಮೇಲೆ ಕೆಎಸ್ ರವಿಕುಮಾರ್ ಅವರ ನಿರ್ದೇಶನದ ಕನ್ನಡ-ತಮಿಳು ಚಿತ್ರದಲ್ಲಿ ಬ್ಯುಸಿಯಾಗಲಿದ್ದಾರೆ. ನಂತರ ಕೆಂಪೇಗೌಡ 2 ರಲ್ಲಿ ಕಿಚ್ಚ ಅವರು ನಟಿಸಿ ನಿರ್ದೇಶನ ಮಾಡುವ ಸಾಧ್ಯತೆಯಿದೆ.

English summary
Actor-director Sudeep is organising a show of the Kannada sensation Jatta in Hyderabad. Sudeep is currently shooting in Hyderabad for his film Mirchi with a host of actors. The team will be in Hyderabad for another three weeks.
Please Wait while comments are loading...