twitter
    For Quick Alerts
    ALLOW NOTIFICATIONS  
    For Daily Alerts

    ಆತ ನಿರಪರಾಧಿ ಆಗಿದ್ದರೆ ಬೆನ್ನೆಲುಬಾಗಿ ನಿಲ್ಲೋಣ: ಜೊಮ್ಯಾಟೊ ಬಾಯ್ ಬಗ್ಗೆ ವಿಜಯ್ ಪ್ರತಿಕ್ರಿಯೆ

    |

    ಯುವತಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕೆಲಸ ಕಳೆದುಕೊಂಡಿರುವ ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಗೆ ಅನೇಕರು ಬೆಂಬಲ ಸೂಚಿಸುತ್ತಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಕಾಮರಾಜ್ ಮತ್ತು ಯುವತಿ ಹಿತೇಶಾ ಚಂದ್ರಾಣಿ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಅನೇಕ ಸೆಲೆಬ್ರಿಟಿಗಳು ಸಹ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಜೊಮ್ಯಾಟೊ ಬಾಯ್ ಘಟನೆ ಬಗ್ಗೆ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಕೂಡ ಪ್ರತಿಕ್ರಿಯೆ ನೀಡಿ, ಕಾಮರಾಜ್‌ಗೆ ಬೆಂಬಲ ನೀಡಿದ್ದಾರೆ.

    ಜೊಮ್ಯಾಟೊ ಡೆಲಿವರಿ ಬಾಯ್ ಪರ ನಿಂತ ನಟಿ ಪ್ರಣಿತಾ ಮತ್ತು ಪರಿಣೀತಿಜೊಮ್ಯಾಟೊ ಡೆಲಿವರಿ ಬಾಯ್ ಪರ ನಿಂತ ನಟಿ ಪ್ರಣಿತಾ ಮತ್ತು ಪರಿಣೀತಿ

    ಇದೀಗ ಸ್ಯಾಂಡಲ್ ವುಡ್ ನಟ ದುನಿಯ ವಿಜಯ್ ಈ ಘಟನೆ ಬಗ್ಗೆ ಮೌನ ಮುರಿದಿದ್ದಾರೆ. ಫೇಸ್ ಬುಕ್‌ನಲ್ಲಿ ಬರೆದುಕೊಂಡಿರುವ ವಿಜಯ್, ಒಂದು ವೇಳೆ ಆತ ನಿರಪರಾಧಿ ಆಗಿದ್ದರೆ ಆತನ ಬೆಂಬಲಕ್ಕೆ ನಾವೆಲ್ಲ ಬೆನ್ನೆಲುಬಾಗಿ ನಿಲ್ಲೋಣ ಎಂದು ಹೇಳಿದ್ದಾರೆ. ಮುಂದೆ ಓದಿ...

    ಎಲ್ಲರೋ ಬೆಂಬಲಕ್ಕೆ ನಿಲ್ಲೋಣ

    ಎಲ್ಲರೋ ಬೆಂಬಲಕ್ಕೆ ನಿಲ್ಲೋಣ

    'ಸುಮಾರು 4 ದಿನಗಳಿಂದ ಸುದ್ದಿಯಲ್ಲಿರುವ Zomato ಹುಡುಗ ಕಾಮರಾಜ್ ಪ್ರಕರಣವನ್ನು ತಿಳಿದುಕೊಂಡೆ. ಕರ್ನಾಟಕ ಪೊಲೀಸರು ನಿಷ್ಪಕ್ಷಪಾತವಾದ ತನಿಖೆ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ. ಒಂದು ವೇಳೆ ಆತ ನಿರಪರಾಧಿ ಆಗಿದ್ದರೆ ಆತನ ಬೆಂಬಲಕ್ಕೆ ನಾವೆಲ್ಲ ಬೆನ್ನೆಲುಬಾಗಿ ನಿಲ್ಲೋಣ. ಯಾವುದೇ ಕಾರಣಕ್ಕೂ ಆತನಿಗೆ ಅನ್ಯಾಯ ಆಗಬಾರದು ಎಂದು ಬಯಸುತ್ತೇನೆ' ಎಂದು ಹೇಳಿದ್ದಾರೆ.

    ಆತನ ದೂರನ್ನು ಪರಿಗಣಿಸಿ, ತನಿಖೆಯಾಗಬೇಕು

    ಆತನ ದೂರನ್ನು ಪರಿಗಣಿಸಿ, ತನಿಖೆಯಾಗಬೇಕು

    'ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಇರುವುದರಿಂದ ಈತನ ದೂರನ್ನು ಸಹ ಪರಿಗಣಿಸಿ, ಅದರಲ್ಲೂ ಸಹ ತನಿಖೆಯಾಗಬೇಕೆಂದು ಕೇಳಿಕೊಳ್ಳುತ್ತೇನೆ. ಕಾಮರಾಜ್ ಪರವಾಗಿ ನಿಂತಿರುವ ರೂಪೇಶ್ ರಾಜಣ್ಣ ಅವರಿಗೆ ನನ್ನ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು' ಎಂದು ಬರೆದುಕೊಂಡಿದ್ದಾರೆ.

    ದುನಿಯಾ ವಿಜಯ್ ಮನೆಗೆ ಭೇಟಿ ನೀಡಿದ ಸಂಸದ ತೇಜಸ್ವಿ ಸೂರ್ಯದುನಿಯಾ ವಿಜಯ್ ಮನೆಗೆ ಭೇಟಿ ನೀಡಿದ ಸಂಸದ ತೇಜಸ್ವಿ ಸೂರ್ಯ

    ಕಾಮರಾಜ್ ಗೆ ವ್ಯಾಪಕ ಬೆಂಬಲ

    ಕಾಮರಾಜ್ ಗೆ ವ್ಯಾಪಕ ಬೆಂಬಲ

    ಜೊಮ್ಯಾಟೊ ಬಾಯ್ ಕಾಮರಾಜ್ ಹಲ್ಲೆ ಮಾಡಿದ್ದಾರೆ ಎಂದು ಯುವತಿ ಹಿತೇಶಾ ಆರೋಪ ಮಾಡಿ, ವಿಡಿಯೋ ಮೂಲಕ ಬಹಿರಂಗ ಪಡಿಸಿದ ನಂತರ ಈ ಘಟನೆ ರಾಷ್ಟ್ರ ಮಟ್ಟದ ಗಮನ ಸೆಳೆಯಿತು. ಬಳಿಕ ಕಾಮರಾಜ್ ವಿಡಿಯೋ ಮೂಲಕ ತಾನು ಹಲ್ಲೆ ಮಾಡಿಲ್ಲ, ಯುವತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ನಂತರ ಸಾಮಾಜಿಕ ಜಾಲತಾಣದಲ್ಲಿ ಕಾಮರಾಜ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಟ್ವಿಟ್ಟರ್ ನಲ್ಲಿ ಕಾಮರಾಜ್ ಗೆ ಬೆಂಬಲ ಸೂಚಿಸಿ ಅಭಿಯಾನ ಕೂಡ ನಡೆಯುತ್ತಿದೆ.

    Recommended Video

    ಜಗ್ಗೇಶ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಡಿ ಬಾಸ್ | Filmibeat Kannada
    ಪರಿಣೀತಿ-ಪ್ರಣಿತಾ ಟ್ವೀಟ್

    ಪರಿಣೀತಿ-ಪ್ರಣಿತಾ ಟ್ವೀಟ್

    ಈ ಘಟನೆ ಬಗ್ಗೆ ನಟಿ ಪರಿಣೀತಿ ಚೋಪ್ರಾ ಟ್ವೀಟ್ ಮಾಡಿ, ಜೊಮ್ಯಾಟೊ ಇಂಡಿಯಾ ದಯವಿಟ್ಟು ಸತ್ಯವನ್ನು ಹುಡುಕಿ ಸಾರ್ವಜನಿಕವಾಗಿ ವರದಿ ಮಾಡಿ. ವ್ಯಕ್ತಿ ನಿರಪರಾಧಿಯಾಗಿದ್ದರೆ (ನಾನು ಆತನನ್ನು ನಂಬುತ್ತೇನೆ) ಹಲ್ಲೆ ಮಾಡಿದ ಮಹಿಳೆಗೆ ದಂಡ ವಿಧಿಸಿ. ಇದು ಅಮಾನವೀಯ, ನಾಚಿಕೆಗೇಡು ಮತ್ತು ಹೃದಯ ವಿದ್ರಾವಕವಾಗಿದೆ. ದಯವಿಟ್ಟು ನಾನು ಹೇಗೆ ಸಹಾಯ ಮಾಡಬಹುದು ಎಂದು ತಿಳಿಸಿ' ಎಂದಿದ್ದರು. ಇನ್ನು ನಟಿ ಪ್ರಣಿತಾ ಕೂಡ ಟ್ವೀಟ್ ಮಾಡಿ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದರು.

    English summary
    Actor Duniya Vijay reacts to Zomato Boy Kamaraj and Hitesha chandrani case.
    Tuesday, March 16, 2021, 17:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X