For Quick Alerts
  ALLOW NOTIFICATIONS  
  For Daily Alerts

  'ಸಲಗ' ಬಳಿಕ ಮತ್ತೊಂದು ಸಿನಿಮಾಗೆ ವಿಜಯ್ ನಿರ್ದೇಶನ: ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ ವಿಜಿ

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನಟ ದುನಿಯಾ ಸದ್ಯ ಸಲಗ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ವಿಶೇಷ ಅಂದರೆ ಸಲಗ ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡಿರುವ ಸಿನಿಮಾ. ಈ ಮೂಲಕ ವಿಜಯ್ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ.

  ಇದೀಗ ವಿಜಯ್ ಕಡೆಯಿಂದ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ವಿಜಯ್ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರಂತೆ. ಲಾಕ್ ಡೌನ್ ಸಮಯದಲ್ಲಿ ವಿಜಯ್ ಕೆಲವು ಕಥೆಗಳನ್ನು ಬರೆದಿದ್ದಾರಂತೆ. ಇದರಲ್ಲಿ ಒಂದು ಕಥೆಯನ್ನು ಸಿನಿಮಾ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಚಿತ್ರಮಂದಿರ ತೆರೆದರೂ ದೊಡ್ಡ ಬಜೆಟ್ ಚಿತ್ರಗಳು ಬಿಡುಗಡೆ ಆಗಲ್ಲ, ಕಾರಣ ಇಲ್ಲಿದೆ!

  ವಿಜಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದಲ್ಲಿ ವಿಜಯ್ ನಾಯಕನಾಗಿ ಕಾಣಿಸಿಕೊಳ್ಳುವುದಿಲ್ಲವಂತೆ. ಯಾಕೆಂದರೆ ಈ ಸಿನಿಮಾ ವಿಜಿಗೆ ಸೂಟ್ ಆಗುವುದಿಲ್ಲವಂತೆ. ಇದು ಪ್ರೇಮಕಥೆಯಾಗಿದ್ದು, 18 ರಿಂದ 22 ವರ್ಷ ವಯಸ್ಸಿನವರು ಮಾತ್ರ ಬೇಕಂತೆ. ಈ ಮೂಲಕ ವಿಜಿ ಚಂದನವನಕ್ಕೆ ಹೊಸ ಕಲಾವಿದರನ್ನು ಪರಿಚಯಿಸಲು ಸಜ್ಜಾಗಿದ್ದಾರೆ.

  ಹಾಗಾಗಿ ವಿಜಯ್ ಸದ್ಯ ಹೊಸ ಜೋಡಿಯ ಹುಡುಕಾಟದಲ್ಲಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾ ದಸರಾಹಬ್ಬದ ನಂತರ ಸೆಟ್ಟೇರುವ ಸಾಧ್ಯತೆ ಇದೆ. ಅಂದ್ಹಾಗೆ ವಿಜಯದಶಮಿ ದಿನ ಹೊಸ ಕಲಾವಿದರ ಪರಿಚಯ ಮಾಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ವಿಜಯ್ ನಿರ್ದೇಶನದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸಬರು ಯಾರು ಎನ್ನುವ ಕುತೂಹಲ ಕನ್ನಡ ಚಿತ್ರಪ್ರಿಯರಲ್ಲಿದೆ.

  ಉಪಾಧ್ಯಕ್ಷನ ಬೆಂಬಲಕ್ಕೆ ನಿಂತ ರಾಬರ್ಟ್ ನಿರ್ಮಾಪಕ | Upadyaksha | Chikkanna | Umapathy Srinivas

  ವಿಜಯ್ ನಿರ್ದೇಶನದ ಮತ್ತು ಅಭಿನಯದ ಸಲಗ ಸಿನಿಮಾದ ರಿಲೀಸ್ ಡೇಟ್ ಇನ್ನೂ ಬಹಿರಂಗವಾಗಿಲ್ಲ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೀಗ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. 2021 ಯುಗಾದಿ ಸಮಯದಲ್ಲಿ ಸಲಗ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಸಲಗ ರಿಲೀಸ್ ಗೂ ಮೊದಲೇ ವಿಜಿ ಮತ್ತೊಂದು ಸಿನಿಮಾದ ನಿರ್ದೇಶನ ಪ್ರಾರಂಭ ಮಾಡಿರುತ್ತಾರೆ.

  English summary
  Actor Duniya vijay ready to direct second movie after Salaga. Hewill direct to yothfull love story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X