For Quick Alerts
  ALLOW NOTIFICATIONS  
  For Daily Alerts

  'ಕಾಟನ್ ಪೇಟೆ'ಯಲ್ಲಿ ದುನಿಯಾ ವಿಜಿ ಜೊತೆ ಪತ್ತೆಯಾದ ಪಾರುಲ್

  By Suneetha
  |

  ನಿರ್ದೇಶಕ ಓಂ ಪ್ರಕಾಶ್ ರಾವ್ ಆಕ್ಷನ್-ಕಟ್ ನಲ್ಲಿ ಮತ್ತೆ 'ಶಿವಾಜಿನಗರ'ದ ಜೋಡಿ ಒಂದಾಗುವ ವಿಚಾರ ಈ ಮೊದಲೇ ತಿಳಿಸಿದ್ದೇವೆ. ಇದೀಗ ಫಟಾ-ಫಟ್ ಅಂತ ಚಿತ್ರಕ್ಕೆ 'ಕಾಟನ್ ಪೇಟೆ' ಎಂದು ನಾಮಕರಣ ಮಾಡಿ ನಿನ್ನೆ (ಜುಲೈ 19) ಮುಹೂರ್ತ ಕೂಡ ನೆರವೇರಿಸಿದ್ದಾರೆ.

  ಅಂದಹಾಗೆ ಈ ಚಿತ್ರದಲ್ಲಿ ಮತ್ತೆ 'ಶಿವಾಜಿನಗರ' ಚಿತ್ರದಲ್ಲಿ ಮೋಡಿ ಮಾಡಿದ್ದ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಮತ್ತು ಗ್ಲಾಮರ್ ಬೆಡಗಿ ಪಾರುಲ್ ಯಾದವ್ ಜೋಡಿ ಕಾಣಿಸಿಕೊಂಡಿದ್ದಾರೆ.[ಮತ್ತೆ 'ಶಿವಾಜಿನಗರದ' ಜೋಡಿ ಮಾಡುತ್ತಾ ಪ್ರೇಕ್ಷಕರಿಗೆ ಮೋಡಿ]

  ಚಿತ್ರಕ್ಕೆ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ನಿರ್ಮಾಪಕ ಸುಧೀಂದ್ರ ಅವರು ಬಂಡವಾಳ ಹೂಡುತ್ತಿದ್ದು, 'ಗುರು ಪೂರ್ಣಿಮೆ'ಯ ಪವಿತ್ರ ದಿನದಂದು 'ಕಾಟನ್ ಪೇಟೆ' ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿದೆ.

  ಸದ್ಯಕ್ಕೆ ನಟ ದುನಿಯಾ ವಿಜಯ್ ಅವರು 'ಮಾಸ್ತಿ ಗುಡಿ' ಚಿತ್ರದಿಂದ ಸುಮಾರು 35 ದಿನಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದಾರೆ. ಈ ಕಾರಣದಿಂದ ಇದೀಗ 'ಕಾಟನ್ ಪೇಟೆ' ಚಿತ್ರದ ಶೂಟಿಂಗ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಾಯವಾಗಿದೆ.[ಎಕ್ಸ್ ಕ್ಲೂಸಿವ್: ಮದುವೆ ಬಗ್ಗೆ ಮೌನ ಮುರಿದ ನಟ ದುನಿಯಾ ವಿಜಯ್]

  ನಟಿ ಪಾರುಲ್ ಯಾದವ್ ಅವರು ಕೂಡ ಯಾವುದೇ ಕಮಿಂಟ್ ಮೆಂಟ್ಸ್ ಇಲ್ಲದೇ ಫ್ರೀಯಾಗಿದ್ದರಿಂದ ಈಗಾಗಲೇ 'ಕಾಟನ್ ಪೇಟೆ' ಸೆಟ್ ಗೆ ಸೇರಿಕೊಂಡಿದ್ದಾರೆ.

  ವಿಶೇಷವಾಗಿ ಈ ಚಿತ್ರದಲ್ಲಿ ಖಳನಟನಾಗಿ 'ಚಕ್ರವ್ಯೂಹ' ಖ್ಯಾತಿಯ ಬಹುಭಾಷಾ ನಟ ಅಭಿಮನ್ಯು ಸಿಂಗ್ ಕಾಣಿಸಿಕೊಂಡಿದ್ದಾರೆ. ಅಂತೂ ಈ ಬಾರಿ ದುನಿಯಾ ವಿಜಯ್ ಅವರಿಗೆ ಟಕ್ಕರ್ ಕೊಡಲು ಅಭಿಮನ್ಯು ಸಿಂಗ್ ಭರ್ಜರಿ ತಯಾರಿ ನಡೆಸಿದ್ದಾರೆ.[ಚಿತ್ರಗಳು: 'ಕಾಟನ್ ಪೇಟೆ'ಯಲ್ಲಿ ದುನಿಯಾ ವಿಜಯ್ ಮತ್ತು ಪಾರುಲ್]

  English summary
  Kannada Movie 'Cotton Pet' to be launched. Kannada Actor Duniya Vijay, Kannada Actress Parul Yadav in the lead role. The movie is directed by Om Prakash Rao.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X