For Quick Alerts
ALLOW NOTIFICATIONS  
For Daily Alerts

  ದುನಿಯಾ ವಿಜಿ ಇನ್ನೊಂದು ಮುಖ ನೋಡಿದ್ದೀರಾ?

  By ಜೀವನರಸಿಕ
  |

  ದುನಿಯಾ ವಿಜಯ್ ಒರಟನ ಪಾತ್ರಗಳನ್ನ ಮಾಡ್ತಾರೆ ಆದರೆ ಮನಸ್ಸಲ್ಲಿ ಮಾತ್ರ ತುಂಬಾ ಮೃದು. ವಿಜಿ ಕೇವಲ ಸಿನಿಮಾವನ್ನ ಮಾಡಲ್ಲ. ಸಿನಿಮಾದ ಜೊತೆ ಸ್ನೇಹ, ಪ್ರೀತಿಗಳೂ ಜೊತೆಗೆ ಇರುತ್ತವೆ. ಬಡವರ, ಕೈಲಾಗದವರ ಮೇಲೆ ವಿಜಿ ತೋರಿಸೋ ಅನುಕಂಪ ಕರುಣೆ ಅಚ್ಚರಿ ಮೂಡಿಸುತ್ತೆ.

  ದುನಿಯಾ ವಿಜಯ್ ಸಿನಿಮಾದಲ್ಲಿ ಮಾಡೋ ಪಾತ್ರಗಳಲ್ಲಿ ಮಾತ್ರ ಹೀರೋ ಅಲ್ಲ, ಅವರು ನಿಜಜೀವನದಲ್ಲೂ ಹೀರೋ. ಕಷ್ಟ ಅಂತ ಮನೆಗೆ ಬರೋ ಅದೆಷ್ಟೋ ಜನರಿಗೆ ವಿಜಿ ಸಹಾಯಮಾಡ್ತಾರೆ. ವಿಜಿ ಸರಿಯಾಗಿ ಯೋಚನೆ ಮಾಡೀನೇ ಇಂತಹಾ ಕೆಲಸಗಳನ್ನೆಲ್ಲಾ ಮಾಡ್ತಾರೆ. ಯಾಕಂದ್ರೆ ಇತ್ತೀಚೆಗೆ ಮನೆಗೆ ಬಂದು ಕಷ್ಟ ಅಂತ ಕೇಳಿಕೊಂಡ ವ್ಯಕ್ತಿಯೊಬ್ಬನಿಗೆ ಬುದ್ಧಿ ಹೇಳಿ ಹತ್ತು ಸಾವಿರ ರುಪಾಯಿ ಕೊಟ್ಟು ಕಳಿಸಿದ್ರು. [ಮೃತ ರೈತ ಕುಟುಂಬಕ್ಕೆ ದುನಿಯಾ ವಿಜಯ್ ನೆರವಿನ ಹಸ್ತ]

  ಕೊಟ್ಟ ಮರುಕ್ಷಣದಲ್ಲೇ ಅವ್ನು ಎಲ್ಲರನ್ನೂ ಹೀಗೆ ಯಾಮಾರಿಸೋ ಖಿಲಾಡಿ ಅಂತ ಫೇಸ್ ಬುಕ್ ನಿಂದ ತಿಳ್ಕೊಂಡ ವಿಜಿ ಒಂದೇ ದಿನದಲ್ಲಿ ತನ್ನ ಗೆಳೆಯರ ಜೊತೆ ಅವನ ಬೆನ್ನತ್ತಿ. ಮೋಸಗಾರರನ್ನ ಪೊಲೀಸರಿಗೆ ಹಿಡಿದುಕೊಟ್ಟಿದ್ರು. ಆದ್ರೆ ಇತ್ತೀಚೆಗೆ ವಿಜಯ್ ಬಿಳಿಗಿರಿ ರಂಗನಬೆಟ್ಟಕ್ಕೆ ಹೋದಾಗ ಎಲ್ಲರಿಗೂ ಮಾದರಿಯಾಗುವಂತಹಾ ಕೆಲಸ ಮಾಡಿದ್ದಾರೆ ಅದೇನು ಅಂತ ಸ್ಲೈಡ್ ನಲ್ಲಿ ನೋಡಿ...

  ವಿಜಯ್ ಕರುಣಾಮಯಿ

  ನಟ ವಿಜಯ್ ಕಷ್ಟಪಡುವವರನ್ನ ಕಂಡ್ರೆ ಕರಗ್ತಾರೆ. ನೋವಿನಲ್ಲಿರೋರಿಗೆ ಸಹಾಯ ಮಾಡ್ತಾರೆ. ಇದು ವಿಜಿ ಇತ್ತೀಚೆಗೆ ಬಿಳಿಗಿರಿ ರಂಗನಬೆಟ್ಟಕ್ಕೆ ಹೋಗಿದ್ದ ಫೋಟೋ. ವಿಜಿ ಅಲ್ಲಿ ಅಸ್ವಸ್ಥ ವ್ಯಕ್ತಿಯೊಬ್ಬನಿಗೆ ಸಹಾಯ ಮಾಡಿದ್ದಾರೆ.

  ಸ್ನಾನ ಮಾಡಿಸಿದ ವಿಜಿ

  ಹಿಂದೆ ಕರಾಟೆ ಮಾಸ್ಟರ್ ಆಗಿದ್ದ ಬೊಮ್ಮಯ್ಯ ಅನ್ನೋ ವ್ಯಕ್ತಿಯ ಪರಿಸ್ಥಿಗೆ ಮರುಗಿದ ವಿಜಿ ತಾನೇ ಸ್ನಾನ ಮಾಡಿಸಿದ್ರು.

  ಶೇವಿಂಗ್ ಕೂಡ ಮಾಡಿದ ವಿಜಿ

  ವಿಜಿ ಸ್ನಾನ ಮಾಡಿಸೋದಷ್ಟೇ ಅಲ್ಲ ಬೊಮ್ಮಯ್ಯ ಅನ್ನೋ ಅ ವ್ಯಕ್ತಿಗೆ ತಾವೇ ಬ್ಲೇಡ್ ಹಿಡಿದು ಶೇವಿಂಗ್ ಕೂಡ ಮಾಡಿಸಿದ್ದಾರೆ.

  ತಲೆ ಬಾಚ್ಕಳ್ಳಿ ಪೌಡ್ರ್ ಹಾಕ್ಕಳಿ

  ದುನಿಯಾ ಸಿನಿಮಾದಲ್ಲಿ ತಲೆ ಬಾಚ್ಕಳಿ ಪೌಡ್ರ್ ಹಾಕ್ಕಳಿ ಅನ್ನೊ ಡೈಲಾಗ್ ಕೇಳಿರ್ತೀರಾ. ಇಲ್ಲಿ ವಿಜಿ ಈ ವ್ಯಕ್ತಿಯನ್ನ ತಾನೇ ಮೇಕ್ ಓವರ್ ಮಾಡಿದ್ರು.

  ಹೊಸ ಬಟ್ಟೆ ಹೊಸ ಲುಕ್

  ದುನಿಯಾ ವಿಜಿ ಒಳ್ಳೆಯ ಶರ್ಟ್, ಪ್ಯಾಂಟ್ ಹಾಕ್ಕೋಬೇಕು ಅಂತ ಬಯಸದ ಸರಳ ವ್ಯಕ್ತಿ. ಆದರೆ ಬಿಳಿಗಿರಿ ರಂಗನ ಬೆಟ್ಟದಲ್ಲಿ ಸಿಕ್ಕ ಆ ಬೊಮ್ಮಯ್ಯನಿಗೆ ಹೊಸ ಬಟ್ಟೆ ಕೊಡಿಸಿದ್ರು ಮತ್ತು ತಾವೇ ತೊಡಿಸಿದ್ರು.

  'ದುನಿಯಾ ಬೊಮ್ಮ'ನಾದ ಬೊಮ್ಮಯ್ಯ

  ಅಸ್ವಸ್ಥನಾಗಿದ್ದ ಕರಾಟೆ ಮಾಸ್ಟರ್ ಗೆ ವಿಜಿ ಚೇಂಜ್ ಓವರ್ ಕೊಟ್ಟಮೇಲೆ ಅವರಿಗೆ ಬಿಳಿಗಿರಿ ರಂಗನಬೆಟ್ಟದಲ್ಲಿ ಜನರು ದುನಿಯಾ ಬೊಮ್ಮ ಅಂತ ಹೆಸರಿಟ್ರು.

  ವಿಜಿಗೆ ಬಡವರು ಅಂದ್ರೆ ಕರುಣೆ

  ಒಂದು ಕಾಲದಲ್ಲಿ ತಾನೂ ಹೀಗೆ ಪರದಾಡಿದ್ದರಿಂದ ವಿಜಿಗೆ ಬಡವರು ಅಂದ್ರೆ ಕರುಣೆ. ಕಷ್ಟಪಡೋರು ಅಂದ್ರೆ ಪ್ರೀತಿ, ಅದೇನೋ ಒಂಥರಾ ಆತ್ಮೀಯತೆ.

  English summary
  The otherside of actor Duniya Vijay is wellknown to his fans. Viji’s attitude towards society, sincerity, straight talk and honesty is the policy. Some of the characters portrayed by Viji inspired lot of people. Here is one example of his kindness once again.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more