ಸತ್ಯ ಬಿಚ್ಚಿಡಲು ಮುಂದಾದ ದುನಿಯಾ ವಿಜಯ್

ನನ್ನ ಜೀವನದಲ್ಲಿ ನನ್ನ ತಂದೆತಾಯಿಯೇ ಸರ್ವಸ್ವ. ಮಾಧ್ಯಮಗಳು ನನಗೆ ಮಾರ್ಗದರ್ಶಕರಿದ್ದಂತೆ. ನನ್ನ ತಂದೆತಾಯಿ ಸಮ್ಮುಖದಲ್ಲಿ ಏನಾಯಿತು ಎಂಬ ವಿವರಗಳನ್ನು ಬಹಿರಂಗಪಡಿಸುವುದಾಗಿ ವಿಜಯ್ ತಿಳಿಸಿದ್ದಾರೆ. ವಿಜಯ್ ಎಂಟರ್ ಪ್ರೈಸಸ್ ಹಾಗೂ ದುನಿಯಾ ಟಾಕೀಸ್ ಎಂದಿರುವ ಲೆಟರ್ ಹೆಡ್ ನಲ್ಲಿ ಅವರು ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ.
ಭಕ್ತಿ ( Devotion), ಶಿಸ್ತು (Discipline), ಸಂಕಲ್ಪ (Decision), ಛಲ (Determination) ಹಾಗೂ ಸಮರ್ಪಣ (Dedication) ಭಾವದ ವ್ಯಕ್ತಿತ್ವ ತನ್ನದು ಎಂದಿರುವ ವಿಜಿ, ತನ್ನ ಜೀವನದಲ್ಲಿ ಮೇಲಿನ 5Dಗಳು ಪ್ರಮುಖ ಪಾತ್ರವಹಿಸಿದ್ದಾಗಿ ಹೇಳಿಕೊಂಡಿದ್ದಾರೆ.
ತಮ್ಮ ಪತ್ನಿ ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದ ವಿಜಿ ವಿವಾಹ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದು ಗೊತ್ತೇ ಇದೆ.
ನನಗಾಗಿರುವ ನೋವು ಇನ್ಯಾರಿಗೂ ಆಗಬಾರದು. ನನ್ನ ತಾಯಿ ನನಗೆ ಮುಖ್ಯ. ಎರಡು ವರ್ಷಗಳ ಹಿಂದೆ ನನ್ನ ತಾಯಿ ಇನ್ನೇನು ಸಾಯುವ ಹಂತಕ್ಕೆ ಹೋಗಿದ್ದರು. ಆಗ ಈ ಸೊಸೆ ಅನ್ನಿಸಿಕೊಂಡವರು ಎಲ್ಲಿ ಹೋಗಿದ್ದರು ಎಂದು ಕೇಳಿದ್ದ ವಿಜಿ ಮಾಧ್ಯಮಗಳ ಮುಂದೆ ಇನ್ನೇನು ಹೇಳುತ್ತಾರೋ ಏನೋ? (ಏಜೆನ್ಸೀಸ್)


Click it and Unblock the Notifications











