»   » 'ಮೊಟ್ಟೆಯ ಕಥೆ' ನೋಡಿ ಗಣೇಶ್ ಮತ್ತು ಪ್ರಜ್ವಲ್ ಹೇಳಿದ್ರು ಅಸಲಿ ಕಥೆ

'ಮೊಟ್ಟೆಯ ಕಥೆ' ನೋಡಿ ಗಣೇಶ್ ಮತ್ತು ಪ್ರಜ್ವಲ್ ಹೇಳಿದ್ರು ಅಸಲಿ ಕಥೆ

Posted By:
Subscribe to Filmibeat Kannada

'ಒಂದು ಮೊಟ್ಟೆಯ ಕಥೆ' ಚಿತ್ರ ಕಳೆದ ಶುಕ್ರವಾರವಷ್ಟೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಶಬ್ಬಾಶ್ ಎನಿಸಿಕೊಂಡಿದೆ. ರಾಜ್ ಬಿ ಶೆಟ್ಟಿ ಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ನಿರ್ದೇಶನ ಕೂಡ ಮಾಡಿದ್ದಾರೆ. 'ಒಂದು ಮೊಟ್ಟೆಯ ಕಥೆ' ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಕೇವಲ ಪ್ರೇಕ್ಷಕರು ಮಾತ್ರವಲ್ಲ, ಸ್ಯಾಂಡಲ್ ವುಡ್ ನ ತಾರೆಯರು ಕೂಡ ಸಿನಿಮಾ ನೋಡಿ ಅಷ್ಟೆ ಖುಷಿಯಾಗಿದ್ದಾರೆ.

ಹೌದು, ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ನಟ ರವಿಶಂಕರ್ ಗೌಡ, ಶಿಲ್ಪಾ ಗಣೇಶ್, ಹರ್ಷಿಕಾ ಪೂಣಚ್ಚ ಸೇರಿದಂತೆ ಇನ್ನು ಕೆಲವರು 'ಒಂದು ಮೊಟ್ಟೆಯ ಕಥೆ' ಚಿತ್ರವನ್ನ ನೋಡಿದ್ದರು. ಸಿನಿಮಾ ನೋಡಿ ಖುಷಿ ಪಟ್ಟ ಇವರು ಕಣ್ಣೀರು ಕೂಡ ಹಾಕಿದ್ರಂತೆ.

ಹಾಗಿದ್ರೆ, ಮೊಟ್ಟೆಯ ಕಥೆ ಚಿತ್ರವನ್ನ ನೋಡಿ ಸ್ಟಾರ್ ನಟರು ಏನಂದ್ರು? ಮುಂದೆ ಓದಿ....

ಮೊಟ್ಟೆ ಕಥೆ ಬಗ್ಗೆ ಗಣೇಶ್ ಹೇಳಿದ್ದೇನು?

''ಒಂದು ಮೊಟ್ಟೆಯ ಕಥೆ.... ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತೆ. ಬಹಳ ಇಷ್ಟವಾಯಿತು. ತುಂಬಾ ಚೆನ್ನಾಗಿ ಕಾಮಿಡಿ ಮಾಡಿದ್ದಾರೆ, ಅಷ್ಟೇ ಚೆನ್ನಾಗಿ ಅಣ್ಣಾವ್ರ ಹಾಡುಗಳನ್ನ ಬಳಸಿಕೊಂಡಿದ್ದಾರೆ. ಆದ್ರೆ, ಈ ಗ್ಯಾಪ್ ನಲ್ಲಿ ಚೆನ್ನಾಗಿ ಅಳಿಸಿ ಬಿಡುತ್ತಾರೆ. ಇಡೀ ಸಿನಿಮಾ ಮಂಗಳೂರು ಭಾಷೆಯಲ್ಲಿ ಮೂಡಿದೆ'' - ಗಣೇಶ್, ನಟ

ವಿದೇಶಗಳಲ್ಲಿ ಸಂಚರಿಸಲಿದೆ 'ಒಂದು ಮೊಟ್ಟೆಯ ಕಥೆ'

ಒಂದು ಸೀನ್ ತುಂಬಾ ಇಷ್ಟವಾಯಿತು

''ಕ್ಲೈಮ್ಯಾಕ್ಸ್ ಗೂ ಮುಂಚೆ ಒಂದು ಸೀನ್ ಇದೆ. ಆ ದೃಶ್ಯದಲ್ಲಿ ಅಳು ಬಂತು. ನಾನು ಮಾತ್ರವಲ್ಲ, ನನ್ನ ಜೊತೆ ಇದ್ದ ಸ್ನೇಹಿತರೆಲ್ಲಾ ಅತ್ತುಬಿಟ್ಟರು. ರಾಜ್ ಶೆಟ್ಟಿ ಅಭಿನಯ ಚೆನ್ನಾಗಿದೆ. ನಿರ್ದೇಶನ ಕೂಡ ಉತ್ತಮವಾಗಿ ನಿರ್ವಹಿಸಿದ್ದಾರೆ. ಕಲಾವಿದರೆಲ್ಲಾ ಅತ್ಯುತ್ತಮ ಅಭಿನಯ ಮಾಡಿದ್ದಾರೆ. ಹೊಡಿಬಡಿ, ಲವ್ ಮಾಡು, ಡ್ಯುಯೆಟ್ ಹಾಡು ಎನ್ನುವ ಫಾರ್ಮೆಟ್ ಗಿಂತ ವಿಭಿನ್ನವಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೇ, ಮೊಟ್ಟೆ ಬಹಳ ರುಚಿಯಾಗಿದೆ. '' - ಗಣೇಶ್, ನಟ

ನಟಿ ಶ್ರದ್ಧಾ ಶ್ರೀನಾಥ್ ಬರೆದ 'ಒಂದು ಮೊಟ್ಟೆಯ ಕಥೆ' ವಿಮರ್ಶೆ

ಪ್ರಜ್ವಲ್ ದೇವರಾಜ್

''ತುಂಬಾ ಡೀಪ್ ಆಗಿ ಸಿನಿಮಾ ಇಷ್ಟವಾಯಿತು. ಸನ್ನಿವೇಶಗಳು, ಕಥೆಗಳು, ಪಾತ್ರಗಳು ಸಹಜವಾಗಿದೆ. ನಿಜವಾದ ಸೌಂದರ್ಯ ಏನು ಅಂತ ತಿಳಿದುಕೊಳ್ಳುವುದಕ್ಕೆ ಈ ಸಿನಿಮಾ ನೋಡಿದ್ರೆ ಸಾಕು. ಸಿನಿಮಾ ನಗಿಸುತ್ತೆ, ಅಳಿಸುತ್ತೆ. ಸೂಪರ್ ಸಿನಿಮಾ'' - ಪ್ರಜ್ವಲ್ ದೇವರಾಜ್, ನಟ

ಒಂದು ಮೊಟ್ಟೆಯ ಕಥೆ : ಡಬ್ಬಲ್ ಮೀನಿಂಗ್ ಇಲ್ಲದ ಕಾಶೀನಾಥ್ ಚಿತ್ರ

ರವಿಶಂಕರ್ ಏನಂದ್ರು?

''ನಗಿಸಿ ಅಳಿಸುವ ಮೊಟ್ಟೆ, ನಾನಂತೂ ತುಂಬಾ ಇಷ್ಟ ಪಟ್ಟೆ. ಇತ್ತೀಚೆಗೆ ಪ್ಲಾಸ್ಟಿಕ್ ಮೊಟ್ಟೆಗಳ ಭರಾಟೆಯಲ್ಲಿ ಒಂದು ಉತ್ತಮವಾದ ಮೊಟ್ಟೆ ಸಿಕ್ಕಿದೆ. ರಾಜ್ ಬಿ ಶೆಟ್ಟಿ ಅವರು ಉತ್ತಮವಾಗಿ ನಿರ್ದೇಶಿಸಿ, ಅಭಿನಯವನ್ನ ಕೂಡ ಸಮರ್ಥವಾಗಿ ನಿಭಾಯಿಸಿದ್ದಾರೆ. ಬೇರೆ ಕಲಾವಿದರು ಕೂಡ ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾರೆ. ಕೊನೆಯವರೆಗೂ ಖುಷಿ ಕೊಡುತ್ತೆ. ಅಣ್ಣಾವ್ರು ಹಾಡುಗಳು ಬಳಸಿರುವ ರೀತಿ ತುಂಬಾ ಇಷ್ಟವಾಯಿತು'' - ರವಿಶಂಕರ್ ಗೌಡ, ನಟ

'ಒಂದು ಮೊಟ್ಟೆಯ ಕಥೆ' ಬಗ್ಗೆ ಸೆಲೆಬ್ರಿಟಿಗಳು ಮಾತನಾಡಿರುವ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

English summary
Kannada Actor Ganesh and Actor Prajwal Devraj Appreciate to Ondu Motteya Kathe. The Movie Directed by Raj B Shetty and features Usha Bhandari, Shalashree.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada