»   » ಲಂಡನ್ ನಲ್ಲಿ ಗಣೇಶ್: ಬಿಬಿಸಿ ರೇಡಿಯೋದಲ್ಲಿ ನಮಸ್ಕಾರ ನಮಸ್ಕಾರ...

ಲಂಡನ್ ನಲ್ಲಿ ಗಣೇಶ್: ಬಿಬಿಸಿ ರೇಡಿಯೋದಲ್ಲಿ ನಮಸ್ಕಾರ ನಮಸ್ಕಾರ...

Posted By:
Subscribe to Filmibeat Kannada

ಚಿನ್ನದ ಹುಡುಗ ಗಣೇಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಒಂದಾಗಿ ಕಾಣಿಸಿಕೊಂಡಿದ್ದ 'ಜೂಮ್' 50 ದಿನಗಳನ್ನು ಪೂರೈಸಿ, ಇದೀಗ 75ನೇ ದಿನಗಳತ್ತ ಮುನ್ನುಗ್ಗುತ್ತಿದೆ. ಇತ್ತೀಚೆಗಷ್ಟೇ ಚಿತ್ರ 50 ದಿನ ಪೂರೈಸಿದ ಸಂಭ್ರಮವನ್ನು ಬಹಳ ಅದ್ಧೂರಿ ಸಮಾರಂಭ ಮಾಡಿ ಆಚರಿಸಲಾಯಿತು.

ಅಂದಹಾಗೆ 'ಜೂಮ್' ಚಿತ್ರ ನಮ್ಮಲ್ಲಿ ಪ್ರೇಕ್ಷಕರನ್ನು ಕಮಾಲ್ ಮಾಡಿದ್ದು ಆಯ್ತು, ಸಿನಿಮಾ ಬಾಕ್ಸಾಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಕೂಡ ಮಾಡಿದೆ. ಇನ್ನು ಲಂಡನ್ ನಲ್ಲಿ 'ಜೂಮ್' ಚಿತ್ರದ ಪ್ರೀಮಿಯರ್ ಶೋ ಕೂಡ ಈಗಾಗಲೇ ನಡೆದಿದೆ.[ಚಿತ್ರ ವಿಮರ್ಶೆ: 'Zooಮ್' ಮಾಡಿ ನೋಡಿದ್ರೂ, 'ಜುಮ್' ಎನಿಸದು.!]


ಈ ಪ್ರೀಮಿಯರ್ ಶೋಗಾಗಿ ನಟ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಕುಟುಂಬ ಸಮೇತ ವಿಮಾನವೇರಿದ್ದರು. ಜೊತೆಗೆ ನಿರ್ದೇಶಕ ಪ್ರಶಾಂತ್ ರಾಜ್ ಮತ್ತು ನಿರ್ಮಾಪಕ ನವೀನ್ ಅವರು ಕೂಡ ಜೊತೆಯಾಗಿದ್ದರು.


ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಣೆ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್, ಅವರೊಂದಿಗೆ ತಾವು ಸಂಭ್ರಮಪಟ್ಟರು. ತದನಂತರ ಲಂಡನ್ ನಲ್ಲಿರುವ ಬಿ.ಬಿ.ಸಿ ರೇಡಿಯೋ ಕೇಂದ್ರಕ್ಕೆ ಭೇಟಿ ಕೊಟ್ಟರು.[ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ವಾರ್ಥಿಯಂತೆ.! ಹೌದಾ.?]


ಈ ಮೊದಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಟ ರಕ್ಷಿತ್ ಶೆಟ್ಟಿ ಅವರು ಸಹ ಬಿ.ಬಿ.ಸಿ ರೇಡಿಯೋ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ್ದರು. ಇದೀಗ ನಟ ಗಣೇಶ್ ಅವರ ಸರದಿ. ಮುಂದೆ ಓದಿ...


ಬಿಬಿಸಿಯಲ್ಲಿ ಗಣೇಶ್

'ಜೂಮ್' ಚಿತ್ರದ ಪ್ರೀಮಿಯರ್ ಶೋ ಮುಗಿದ ನಂತರ ನಟ ಗಣೇಶ್ ಅವರು ಬಿಬಿಸಿ ರೇಡಿಯೋ ಕೇಂದ್ರಕ್ಕೆ ವಿಶೇಷ ಅತಿಥಿಯಾಗಿ ಭೇಟಿ ಕೊಟ್ಟು ಅಲ್ಲಿ ಸಂದರ್ಶನ ನೀಡಿದರು.


ನಮಸ್ಕಾರ ನಮಸ್ಕಾರ....

ಬಿಬಿಸಿ ರೇಡಿಯೋಗೆ ಭೇಟಿ ನೀಡಿದ ಗಣೇಶ್ ಅವರು ಮೊದಲು ಮಾಡಿದ ಕೆಲಸ 'ನಮಸ್ಕಾರ ನಮಸ್ಕಾರ ನಮಸ್ಕಾರ...' ಎಂದಿದ್ದು. ಅಶಾಂತಿ ಓಂಕಾರ ಎಂಬ ಆರ್ ಜೆ ಬಿಬಿಸಿಯಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ಗಣೇಶ್ ಅವರನ್ನು ಸಂದರ್ಶನ ಮಾಡಿದರು.


ಕಾಮಿಡಿ ಶೋ ಬಗ್ಗೆ ಹಂಚಿಕೊಂಡ ಗಣೇಶ್

ಸಂದರ್ಶನ ಶುರು ಮಾಡಿದ ಗಣೇಶ್ ಅವರು ಮೊದಲು ತಾವು ಮಾಡುತ್ತಿದ್ದ ಟಿವಿ ಶೋ ಬಗ್ಗೆ ಹಂಚಿಕೊಂಡರು. ನಮಸ್ಕಾರ ನಮಸ್ಕಾರ ನಮಸ್ಕಾರ ಹೇಗೆ ಫೇಮಸ್ ಆಯ್ತು ಅನ್ನೋದನ್ನ ಹೇಳಿಕೊಂಡರು. ಜೊತೆಗೆ ಚಿತ್ರರಂಗಕ್ಕೆ ಕಾಲಿಟ್ಟ ಕ್ಷಣವನ್ನು ಕೂಡ ಇಲ್ಲಿ ನೆನಪಿಸಿಕೊಂಡರು.


'ಜೂಮ್' ಯಶಸ್ಸು ಹಂಚಿಕೊಂಡ ಗಣೇಶ್

ಬಿಬಿಸಿ ಸಂದರ್ಶನದಲ್ಲಿ ಗಣೇಶ್ ಅವರು ತಮ್ಮ 'ಜೂಮ್' ಚಿತ್ರದ ಯಶಸ್ಸನ್ನು ಹಂಚಿಕೊಂಡರು. ಯುಕೆ ಜನರಿಗೂ 'ಜೂಮ್' ನ ಬತ್ತಾಸ್ ತುಂಬಾ ಹಿಡಿಸಿತು ಎಂದು ಗಣೇಶ್ ಅವರು ಸಂದರ್ಶನದಲ್ಲಿ ಖುಷಿಯಿಂದ ಹೇಳಿಕೊಂಡರು.


'ಮುಂಗಾರು ಮಳೆ 2' ಪ್ರಚಾರ

ಇದೇ ಸಂದರ್ಭದಲ್ಲಿ ತಮ್ಮ ಮುಂಬರುವ ಸಿನಿಮಾ 'ಮುಂಗಾರು ಮಳೆ 2' ಚಿತ್ರದ ಪ್ರೊಮೋಷನ್ ಕೂಡ ಮಾಡಿದರು. ಸೆಪ್ಟೆಂಬರ್ 9 ರಂದು 'ಮುಂಗಾರು ಮಳೆ' ಸುರಿಯಲಿದ್ದು, ಅಲ್ಲಿರುವ ಅಭಿಮಾನಿಗಳಿಗೆ ಈಗಾಗಲೇ ಬಿಡುಗಡೆ ಆಗಿರುವ ಹಾಡನ್ನು ಕೂಡ ಬಿಬಿಸಿ ಮೂಲಕ ಕೇಳಿಸಿದರು.


English summary
Kannada Actor Ganesh who is London with director Prashanth Raj and producer Naveen for the premiere of his latest Kannada film 'Zoom' is all set to talk in BBC radio about 'Zoom'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada