For Quick Alerts
  ALLOW NOTIFICATIONS  
  For Daily Alerts

  ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಗಣೇಶ್ ಸ್ನೇಹಿತರು ನಿಧನ

  |

  ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಸುಮಾರು 290ಕ್ಕೂ ಅಧಿಕ ಜನ ಮರಣ ಹೊಂದಿದ್ದಾರೆ ಎಂಬ ಮಾಹಿತಿ ಇದೆ. ಕರ್ನಾಟಕದ ಕೆಲವರು ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

  ನಟ ಗಣೇಶ್ ಸಹ ಬಾಂಬ್ ಸ್ಫೋಟದಲ್ಲಿ ತಮ್ಮ ಪ್ರೀತಿಯ ಸ್ನೇಹಿತರನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ಖಾತೆಯಲ್ಲಿ ನೋವನ್ನು ಹಂಚಿಕೊಂಡಿದ್ದಾರೆ. ಪುಟ್ಟರಾಜು ಮತ್ತು ಮರೀಗೌಡ ಮೃತ ಪಟ್ಟ ಗಣೇಶ್ ಗೆಳೆಯರಾಗಿದ್ದಾರೆ.

  ಶ್ರೀಲಂಕಾ ಬಾಂಬ್ ಸ್ಫೋಟ: ಕೂದಲೆಳೆಯ ಅಂತರದಲ್ಲಿ ಪಾರಾದ 'ದಿ ವಿಲನ್' ನಿರ್ಮಾಪಕ

  ''ನೀವು ಇನ್ನಿಲ್ಲ ಎನ್ನುವ ಸುದ್ದಿ ನಂಬಲು ಆಗುತ್ತಿಲ್ಲ. ನನಗೆ ಆಗುತ್ತಿರುವ ದುಃಖವನ್ನು ಹೇಳಲು ಪದಗಳಿಲ್ಲ. ನನ್ನ ಪ್ರೀತಿಯ ಸ್ನೇಹರಾದ ಪುಟ್ಟರಾಜು ಮತ್ತು ಮರೀಗೌಡ ಇಬ್ಬರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ.'' ಎಂದು ಉಗ್ರರ ದಾಳಿಯಲ್ಲಿ ಹತರಾದ ಎಲ್ಲರಿಗೂ ಸಂತಾಪ ಸೂಚಿಸಿದ್ದಾರೆ.

  ಶ್ರೀಲಂಕಾ ಬಾಂಬ್ ಸ್ಫೋಟದಿಂದ ನಟಿ ರಾಧಿಕಾ ಗ್ರೇಟ್ ಎಸ್ಕೇಪ್

  ಇನ್ನು, ಶ್ರೀಲಂಕಾದ ಸಿನ್ನಮೋನ್ ಗ್ರ್ಯಾಂಡ್ ಹೋಟೆಲ್ ನಲ್ಲಿದ್ದ ನಟಿ ರಾಧಿಕಾ ಶರತ್ ಕುಮಾರ್ ಹಾಗೂ ಕನ್ನಡದ ನಿರ್ಮಾಪಕ ಸಿ ಆರ್ ಮನೋಹರ್ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

  English summary
  Kannada actor Ganesh lost his two friends in Sri Lanka blasts. He tweets and condolences for friends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X