»   » ಕಾವೇರಿ ವಿವಾದ: ತಮಿಳರಿಗಿಲ್ಲ 'ಮುಂಗಾರು ಮಳೆ 2' ನೋಡೋ ಭಾಗ್ಯ

ಕಾವೇರಿ ವಿವಾದ: ತಮಿಳರಿಗಿಲ್ಲ 'ಮುಂಗಾರು ಮಳೆ 2' ನೋಡೋ ಭಾಗ್ಯ

Posted By:
Subscribe to Filmibeat Kannada

ಬಹಳ ದಿನಗಳಿಂದ 'ಮುಂಗಾರು ಮಳೆ'ಗೆ ಕಾಯುತ್ತಿದ್ದ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಯಾಕೆಂದರೆ ಇಂದು (ಸೆಪ್ಟೆಂಬರ್ 10) ಇಡೀ ಕರ್ನಾಟಕದಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಹಾಗೂ ದೇಶಾದ್ಯಂತ 'ಮುಂಗಾರು ಮಳೆ' ಧೋ ಅಂತ ಸುರಿತಾ ಇದೆ.

ಆದರೆ ತಮಿಳುನಾಡು, ಚೆನ್ನೈನಲ್ಲಿ 'ಮುಂಗಾರು ಮಳೆ 2' ನೋಡುವ ಅವಕಾಶ ಸಿನಿಪ್ರಿಯರಿಗೆ ಇಲ್ಲದಂತಾಗಿದೆ. ಕಾವೇರಿ ವಿವಾದದ ಹಿನ್ನಲೆಯಲ್ಲಿ 'ಮುಂಗಾರು ಮಳೆ 2' ಚಿತ್ರವನ್ನು ತಮಿಳುನಾಡಿನಲ್ಲಿ ಪ್ರದರ್ಶನ ಮಾಡದಿರಲು ವಿತರಕರು ನಿರ್ಧರಿಸಿದ್ದಾರೆ.[ಸೆ.9ಕ್ಕೆ ಕರ್ನಾಟಕ ಬಂದ್: 'ಮುಂಗಾರು ಮಳೆ-2' ಚಿತ್ರ ಬಿಡುಗಡೆ ಯಾವಾಗ?]


Actor Ganesh's 'Mungaru Male 2' release withheld in Tamil Nadu

ಈಗಾಗಲೇ ತಮಿಳುನಾಡಿಗೆ ನೀರು ಬಿಟ್ಟಿದ್ದರೂ ಕೂಡ, ಇನ್ನಷ್ಟು ಬಿಡುವಂತೆ ತಕರಾರು ತೆಗೆದಿರುವ ತಮಿಳುನಾಡು ರಾಜ್ಯದಲ್ಲಿ, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಟಿ ನೇಹಾ ಶೆಟ್ಟಿ ಅಭಿನಯದ 'ಮುಂಗಾರು ಮಳೆ 2' ಚಿತ್ರವನ್ನು ಬಿಡುಗಡೆ ಮಾಡದಿರಲು ವಿತರಕರು ತೀರ್ಮಾನ ಮಾಡಿದ್ದಾರೆ.['ನೀರ್ ದೋಸೆ'ಗೆ ಬಂಪರ್ ಹೊಡೆದ್ಹಾಗೆ 'ಮುಂಗಾರು ಮಳೆ-2'ಗಾಗೋದು ಡೌಟು!]


Actor Ganesh's 'Mungaru Male 2' release withheld in Tamil Nadu

ಈ ಬಗ್ಗೆ ಖುದ್ದು ಚಿತ್ರದ ನಿರ್ದೇಶಕ ಶಶಾಂಕ್ ಅವರು ಮಾಹಿತಿ ನೀಡಿದ್ದಾರೆ. "ಕಾವೇರಿ ನೀರಿಗಾಗಿ ನಿನ್ನೆ (ಸೆಪ್ಟೆಂಬರ್ 9) ಕರ್ನಾಟಕ ಬಂದ್ ಮಾಡಲಾಗಿತ್ತು. ಇದಕ್ಕೆ ಹಲವು ಸಂಘಟನೆಗಳು ಹಾಗೂ ಕನ್ನಡ ಚಿತ್ರರಂಗ ವ್ಯಾಪಕ ಬೆಂಬಲ ವ್ಯಕ್ತಪಡಿಸಿತ್ತು.[MM2 ಬುಕ್ಕಿಂಗ್ ಆರಂಭ: ಸಿಡ್ನಿಯಲ್ಲಿ ಬಹುತೇಕ ಸೀಟುಗಳು ಭರ್ತಿ]


Actor Ganesh's 'Mungaru Male 2' release withheld in Tamil Nadu

ಆದ್ದರಿಂದ 'ಮುಂಗಾರು ಮಳೆ 2' ವಿತರಣಾ ಹಕ್ಕು ವಹಿಸಿಕೊಂಡವರು, ಚಿತ್ರವನ್ನು ತಮಿಳುನಾಡು, ಚೆನ್ನೈಯಾದ್ಯಂತ ಬಿಡುಗಡೆ ಮಾಡದಿರಲು ನಿರ್ಧಾರ ಮಾಡಿದ್ದಾರೆ' ಎಂದು ಚಿತ್ರದ ನಿರ್ದೇಶಕರು ಮಾಹಿತಿ ನೀಡಿದ್ದಾರೆ.[ಸೆನ್ಸಾರ್ ಮಂಡಳಿಯ ಅಧಿಕಾರಿಗಳು ಮೆಚ್ಚಿದ 'ಮುಂಗಾರು ಮಳೆ-2']


Actor Ganesh's 'Mungaru Male 2' release withheld in Tamil Nadu

ಸೆಪ್ಟೆಂಬರ್ 9, ಶುಕ್ರವಾರದಂದು ಗ್ರ್ಯಾಂಡ್ ಆಗಿ ತೆರೆ ಕಾಣಬೇಕಿದ್ದ 'ಮುಂಗಾರು ಮಳೆ 2', ಬಂದ್ ಹಿನ್ನಲೆಯಲ್ಲಿ ಶನಿವಾರ (ಸೆಪ್ಟೆಂಬರ್ 10) ಕರ್ನಾಟಕದಾದ್ಯಂತ ತೆರೆ ಕಂಡಿದೆ. ಈಗಾಗಲೇ ಹಾಡು ಮತ್ತು ಟ್ರೈಲರ್ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ 'ಮುಂಗಾರು' ಹವಾ ಹೇಗಿದೆ ಅಂತ ಇನ್ನೇನು ಕೆಲವೇ ಗಂಟೆಗಳಲ್ಲಿ ವಿಮರ್ಶಕರಿಂದ ತಿಳಿದುಬರಲಿದೆ.

English summary
Kannada Actor Ganesh and Actor Ravichandran-starrer "Mungaaru Male 2," was released worldwide on Saturday, (Septmber 10). But the Kannada film has failed to see the light of the day in Tamil Nadu due to the ongoing Cauvery row. The movie is directed by Shashank.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada