»   » ಆಫ್ರಿಕಾದಲ್ಲೂ ಫುಲ್ 'ಜೂಮ್' ಆಗುತ್ತಿದ್ದಾರೆ ಗಣೇಶ್-ರಾಧಿಕಾ

ಆಫ್ರಿಕಾದಲ್ಲೂ ಫುಲ್ 'ಜೂಮ್' ಆಗುತ್ತಿದ್ದಾರೆ ಗಣೇಶ್-ರಾಧಿಕಾ

Posted By:
Subscribe to Filmibeat Kannada

ಇತ್ತೀಚೆಗೆ ಕೆಲವು ಕನ್ನಡ ಚಿತ್ರಗಳು ನಮ್ಮ ರಾಜ್ಯದ ನಾನಾ ಕಡೆಗಳಲ್ಲಿ ಸೇರಿದಂತೆ ವಿದೇಶಗಳಲ್ಲೂ ಏಕಕಾಲದಲ್ಲಿ ತೆರೆ ಕಂಡಿವೆ. ಇದೀಗ ಆ ಸಾಲಿಗೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ 'Zooಮ್' ಹೊಸ ಸೇರ್ಪಡೆ.

ಜುಲೈ 1 ರಂದು 'ಜೂಮ್' ಚಿತ್ರ ತೆರೆ ಕಾಣುತ್ತಿದ್ದು, ವಿದೇಶಗಳಲ್ಲಿ ಕೂಡ ಏಕಕಾಲದಲ್ಲಿ ಸಿನಿಮಾ ಬಿಡುಗಡೆ ಮಾಡಲು ಇಡೀ ಚಿತ್ರತಂಡ ಸರ್ಕಸ್ ಮಾಡುತ್ತಿದೆ.[ಫೋಟೋ ಆಲ್ಬಂ: 'Zooಮ್' ಚಿತ್ರದ ಅದ್ಧೂರಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮ]


Actor Ganesh starrer Kannada Movie 'Zoom' theater list

ನಿರ್ದೇಶಕ ಪ್ರಶಾಂತ್ ರಾಜ್ ನಿರ್ದೇಶನದ 'ಜೂಮ್' ಚಿತ್ರ ಆಫ್ರಿಕಾದಲ್ಲೂ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. 'ಕೇಪ್ ಟೌನ್', ಜಾಂಬಿಯಾ, ಘಾನ, ಈಜಿಪ್ಟ್, ಉಗಾಂಡ, ಕೀನ್ಯಾ, ರವಾಂಡ, ನೈಜೀರಿಯಾ ಮುಂತಾದ ದೇಶಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಅವರು ಫುಲ್ 'ಜೂಮ್' ಆಗಿದ್ದಾರೆ.[ಟ್ರೈಲರ್ ಹೇಗಿದೆ.? ಒಮ್ಮೆ 'Zooಮ್' ಮಾಡಿ ನೋಡಿ ಹೇಳಿ...]


Actor Ganesh starrer Kannada Movie 'Zoom' theater list

ಮಾತ್ರವಲ್ಲದೇ ನ್ಯೂಜಿಲ್ಯಾಂಡ್, ಜರ್ಮನಿ, ಆಸ್ಟ್ರೇಲಿಯಾ, ನೆದರ್ಲ್ಯಾಂಡ್, ಬೆಲ್ಜಿಯಂ, ಫಿನ್ಲೆಂಡ್, ಐರ್ಲೆಂಡ್, ಕುವೈತ್, ಮಸ್ಕತ್ ಮತ್ತು ದುಬೈನಲ್ಲಿ ಏಕಕಾಲದಲ್ಲಿ ಅದ್ದೂರಿಯಾಗಿ ತೆರೆ ಕಾಣಲಿದೆ.


Actor Ganesh starrer Kannada Movie 'Zoom' theater list

ಈಗಾಗಲೇ ಚಿತ್ರತಂಡದವರು ಥಿಯೇಟರ್ ಲಿಸ್ಟ್ ಬಿಡುಗಡೆ ಮಾಡಿದ್ದು, ಚಿತ್ರತಂಡದವರು ಕೂಡ ಫುಲ್ 'ಜೂಮ್' ಆಗಿ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.


ಜುಲೈ 1 ರಂದು ಬೆಂಗಳೂರಿನ ಮುಖ್ಯ ಚಿತ್ರಮಂದಿರ 'ಅನುಪಮ'ದಲ್ಲಿ 'ಜೂಮ್' ಭರ್ಜರಿಯಾಗಿ ತೆರೆ ಕಾಣುತ್ತಿದೆ. ವಿಭಿನ್ನ ಲವ್ ಸ್ಟೋರಿಯಾಧರಿತ ಕಥೆಯನ್ನು ಹೊಂದಿರುವ ಚಿತ್ರದ ಬಗ್ಗೆ ಗಣೇಶ್ ಅಭಿಮಾನಿಗಳು ಸಾಕಷ್ಟು ಕುತೂಹಲ ಇಟ್ಟುಕೊಂಡಿದ್ದಾರೆ.

English summary
Kannada Actor Ganesh starrer Kannada Movie 'Zoom' is all set to release on July 1st. 'Zoom' is simultaneously getting released in other country. Here is the theater List.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada