»   » ಸಂತೋಷ್ ಆನಂದ್ ರಾಮ್ ಮನೆಗೆ ದಿಢೀರ್ ಭೇಟಿ ಕೊಟ್ಟ ಗಣೇಶ್

ಸಂತೋಷ್ ಆನಂದ್ ರಾಮ್ ಮನೆಗೆ ದಿಢೀರ್ ಭೇಟಿ ಕೊಟ್ಟ ಗಣೇಶ್

Posted By:
Subscribe to Filmibeat Kannada
ಸಂತೋಷ್ ಆನಂದ್ ರಾಮ್ ಮನೆಗೆ ದಿಢೀರ್ ಭೇಟಿ ಕೊಟ್ಟ ಗಣೇಶ್ | Filmibeat Kannada

'ರಾಜಕುಮಾರ' ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ಇಂದು ಸರ್ಪ್ರೈಸ್ ಕಾದಿತ್ತು. ಎಂದಿನಂತೆ ಮನೆಯಲ್ಲಿದ್ದ ಸಂತೋಷ್ ಅವರ ಮನೆಗೆ ದಿಢೀರ್ ಅಂತ ಗೋಲ್ಡನ್ ಸ್ಟಾರ್ ಗಣೇಶ್ ಭೇಟಿ ನೀಡಿದ್ದಾರೆ.

ಬೆಳಿಗ್ಗೆ ಸಂತೋಷ್ ಅವರ ಮನೆಗೆ ಹೋಗಿದ್ದ ಗಣೇಶ್ ಅವರ ಮನೆಯಲ್ಲಿಯೇ ತಿಂಡಿ ಕೂಡ ಸೇವಿಸಿದ್ದಾರೆ. ಹೀಗೆ, ಅನೀರಿಕ್ಷಿತವಾಗಿ ಗಣೇಶ್ ಅವರು ಯಾಕೆ ಮನೆಗೆ ಹೋಗಿರಬಹುದು ಅಂತ ಯೋಚನೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣವಿದೆ.

ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಗಣೇಶ್ ಮಗಳು ಕೊಟ್ಟ ಉಡುಗೊರೆ ಇದು

ಫೆಬ್ರವರಿ 21 ರಂದು ಜರುಗಿದ್ದ ಸಂತೋಷ್ ಆನಂದ್ ರಾಮ್ ಅವರ ಮದುವೆಗೆ ನಟ ಗಣೇಶ್ ಬಂದಿರಲಿಲ್ಲ. ಹೀಗಾಗಿ, ನೂತನವಾಗಿ ಮದುವೆಯಾಗಿದ್ದ ನವಜೋಡಿಗಳಿಗೆ ಶುಭಕೋರಲು ಮನೆಗೆ ಬಂದಿದ್ದರು.

Actor ganesh visit to santhosh ananddram home

ಗಣೇಶ್ ಮದುವೆಗೆ ಯಾಕೆ ಬಂದಿರಲಿಲ್ಲ.?
ಅಂದು 'ಆರೆಂಜ್' ಸಿನಿಮಾದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯುತಿತ್ತು. ಹೀಗಿದ್ದರೂ, ಅಂದಿನ ಲಾಸ್ಟ್ ಪ್ಲೈಟ್ ಬುಕ್ ಮಾಡಿಕೊಂಡಿದ್ದ ಗಣೇಶ್‌ ಮದುವೆಗೆ ಬರಬೇಕಿತ್ತು. ಆದರೆ ಅಂದು ಪ್ಲೈಟ್ ಮಿಸ್ ಆದ ಕಾರಣ ಮದುವೆಗೆ ಬರಲಾಗಲಿಲ್ಲ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್

Actor ganesh visit to santhosh ananddram home

ಆ ಬೇಸರವನ್ನ ಸಂತೋಷ್ ಆನಂದ್ ರಾಮ್ ಅವರ ಸ್ನೇಹಿತನ ಬಳಿ ಹಂಚಿಕೊಂಡಿದ್ದ ಗಣೇಶ್, ಇಂದು ಬೆಳಿಗ್ಗೆ ದಿಢೀರ್ ಅಂತ ಮನೆಗೆ ಬಂದು ನಮಗೆ ವಿಶ್ ಮಾಡಿ, ಕೆಲ ಸಮಯ ಕಾಲಕಳೆದು ತಿಂಡಿಯನ್ನು ಸಹ ಮಾಡಿದರು.

ಇದನ್ನ ಸ್ವತಃ ನಿರ್ದೇಶಕರೇ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದು ''ನಿಮ್ಮ ದೊಡ್ಡ ಮನಸಿಗೆ ನಿಮ್ಮ ಸಿಂಪ್ಲಿಸಿಟಿ ಗೆ hats off ಬರಿ ಬಾಕ್ಸ್ ಆಫೀಸ್ ನಲ್ಲೇ ಅಲ್ಲ ಹೃದಯದಲ್ಲಿಯೂ ನೀವು ಗೋಲ್ಡನ್ ಸ್ಟಾರ್'' ಎಂದು ಗುಣಗಾನ ಮಾಡಿದ್ದಾರೆ.

English summary
Kannada actor, golden star ganesh has visited to director santhosh ananddram home and he had breakfast with family.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X