»   » 'ರಾಜು'ಗೆ 'ಶಿವಲಿಂಗ' ಸುರೇಶ್ ಹೊಸ ಸಿನಿಮಾ ಮಾಡ್ತವ್ರೇ

'ರಾಜು'ಗೆ 'ಶಿವಲಿಂಗ' ಸುರೇಶ್ ಹೊಸ ಸಿನಿಮಾ ಮಾಡ್ತವ್ರೇ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬ್ಲಾಕ್ ಬಸ್ಟರ್ ಹಿಟ್ 'ಶಿವಲಿಂಗ' ಚಿತ್ರಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ಕೆ.ಎ ಸುರೇಶ್ ಅವರು ಇದೀಗ 'ಫಸ್ಟ್‌ ರ‍್ಯಾಂಕ್‌ ರಾಜು' ಚಿತ್ರ ಮಾಡಿದ್ದ ನಿರ್ದೇಶಕ ನರೇಶ್ ಕುಮಾರ್ ಅವರ ಜೊತೆ ಕೈ ಜೋಡಿಸಿದ್ದಾರೆ.

'ಫಸ್ಟ್‌ ರ‍್ಯಾಂಕ್‌ ರಾಜು' ಸಿನಿಮಾ ಮಾಡಿದ್ದ ನಿರ್ದೇಶಕ ನರೇಶ್ ಕುಮಾರ್ ಅವರು ಇದೀಗ ಹೊಸ ಪ್ರಾಜೆಕ್ಟ್ ಒಂದಕ್ಕೆ ಕೈ ಹಾಕಿದ್ದು, ವಿಶೇಷವಾಗಿ ನಟ ಗುರುನಂದ್ ಅವರೇ ಈ ಸಿನಿಮಾದಲ್ಲೂ ನಾಯಕ ನಟನ ಪಾತ್ರ ವಹಿಸುತ್ತಿದ್ದಾರೆ.[ತಪ್ಪು ಯಾರದ್ದು ಗೊತ್ತಾ? 'ಫಸ್ಟ್ ರ‍್ಯಾಂಕ್‌' ಗುರುನಂದನ್ ಬಾಯ್ಬಿಟ್ಟ ಸತ್ಯ!]


Actor Gurunandan teams up with 'Shivalinga' producer KA Suresh

ನಟ ಗುರುನಂದನ್ ಅವರಿಗೆ 'ಫಸ್ಟ್‌ ರ‍್ಯಾಂಕ್‌ ರಾಜು' ಸಾಕಷ್ಟು ಯಶಸ್ಸು ಕೊಟ್ಟಿದ್ದು ಮಾತ್ರವಲ್ಲದೇ, ಸ್ಯಾಂಡಲ್ ವುಡ್ ನಲ್ಲಿ ಅವರನ್ನು ಗುರುತಿಸುವಂತೆ ಮಾಡಿತ್ತು.


ನರೇಶ್ ಕುಮಾರ್ ಆಕ್ಷನ್-ಕಟ್ ಹೇಳಿದ್ದ 'ಫಸ್ಟ್‌ ರ‍್ಯಾಂಕ್‌ ರಾಜು' [ಫಸ್ಟ್ Rank ರಾಜು ಚಿತ್ರವಿಮರ್ಶೆ: ಡಿಸ್ಟಿಂಕ್ಷನ್ ಗೆ ಕೊಂಚ ಕಮ್ಮಿ] ಸಿನಿಮಾ ಸೂಪರ್ ಹಿಟ್ ಆಗಿರುವುದರಿಂದ ನಿರ್ಮಾಪಕ ಸುರೇಶ್ ಅವರು ತಮ್ಮ ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನರೇಶ್ ಕುಮಾರ್ ಜೊತೆ ಸೇರಿಕೊಂಡು ಹೊಸ ಸಿನಿಮಾ ಮಾಡಲು ಎಲ್ಲಾ ತಯಾರಿಯಲ್ಲಿ ತೊಡಗಿದ್ದಾರೆ.


Actor Gurunandan teams up with 'Shivalinga' producer KA Suresh

ಸದ್ಯಕ್ಕೆ ನಟ ಗುರುನಂದನ್ ಅವರು 'ಸ್ಮೈಲ್ ಪ್ಲೀಸ್' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಇದಾದ ತಕ್ಷಣ ನರೇಶ್ ಕುಮಾರ್ ಅವರ ಹೊಸ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರಕ್ಕೆ ಸೂಕ್ತ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ತೊಡಗಿದೆ.['ಫಸ್ಟ್ ರ‍್ಯಾಂಕ್‌ ರಾಜು' ಗುರುನಂದನ್ ಗೆ ಯಶಸ್ಸಿನ ಅಮಲು ನೆತ್ತಿಗೇರ್ತಾ?]


Actor Gurunandan teams up with 'Shivalinga' producer KA Suresh

'ಫಸ್ಟ್ ರ‍್ಯಾಂಕ್‌ ರಾಜು' ಚಿತ್ರದಲ್ಲಿದ್ದ ಛಾಯಾಗ್ರಾಹಕ, ನಟಿ ಮತ್ತು ನಿರ್ಮಾಪಕರನ್ನು ಹೊರತುಪಡಿಸಿ ಉಳಿದಂತೆ ಹಳೇ ತಂಡವೇ ಇಲ್ಲೂ ಮುಂದುವರಿಯಲಿದೆ. 'ಫಸ್ಟ್‌ ರ‍್ಯಾಂಕ್‌ ರಾಜು' ಸಿನಿಮಾ ಶಿಕ್ಷಣದ ಕುರಿತಾದ ಕಥಾಹಂದರ ಹೊಂದಿತ್ತು. ಇದೀಗ ಹೊಸದಾಗಿ ಮಾಡುತ್ತಿರುವ ಚಿತ್ರದಲ್ಲಿ ಹಾಸ್ಯದೊಂದಿಗೆ ಜೀವನ ಪಾಠ ಹೇಳಲು ಹೊರಟಿದ್ದಾರೆ ನಿರ್ದೇಶಕರು.

English summary
Kannada Actor Gurunandan has joined hands with the team of 1st Rank Raju. Now hear that the project is to be helmed by Naresh Kumar will be produced by KA Suresh under his popular banner Suresh Arts.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada