For Quick Alerts
  ALLOW NOTIFICATIONS  
  For Daily Alerts

  ಎರಡನೇ ಬಾರಿಗೆ ತಂದೆಯಾದ ನಟ ಹರೀಶ್ ರಾಜ್

  |

  ಸ್ಯಾಂಡಲ್ ವುಡ್ ನಟ ಹರೀಶ್ ರಾಜ್ ಮತ್ತೊಮ್ಮೆ ತಂದೆಯಾದ ಸಂತಸದಲ್ಲಿದ್ದಾರೆ. ಸಿನಿಮಾ ಮತ್ತು ಕಿರುತೆರೆ ಎರಡರಲ್ಲೂ ಫೇಮಸ್ ಆಗಿರುವ ನಟ ಹರೀಶ್ ರಾಜ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹರೀಶ್ ರಾಜ್ ಪತ್ನಿ ಶ್ರುತಿ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

  ಗುರುವಾರ (ಡಿ.17) ಬೆಳಗ್ಗೆ ಶ್ರುತಿ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಹರೀಶ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಬಿಗ್ ಬಾಸ್ ಮೂಲಕ ಮತ್ತಷ್ಟು ಖ್ಯಾತಿಗಳಿಸಿದ್ದ ಹರೀಶ್ ರಾಜ್ ಅವರಿಗೆ ಈಗಾಗಲೇ ಒಬ್ಬಳು ಮಗಳಿದ್ದಾಳೆ.

  ಕರೀನಾ ಕಪೂರ್ ಬೇಬಿ ಬಂಪ್ ಫೋಟೋ ವೈರಲ್: 2ನೇ ಮಗು ಆಗಮನ ಯಾವಾಗ?

  ಇದೀಗ ಎರಡನೇ ಬಾರಿಗೆ ತಂದೆಯಾಗಿರುವ ಹರೀಶ್ ರಾಜ್, ನಿಮ್ಮೆಲ್ಲರ ಹಾರೈಕೆಗಳು ಬೇಕು ಎಂದು ಹೇಳಿ ಪೊಸ್ಟ್ ಮಾಡಿದ್ದಾರೆ. ನನಗೆ ಹೆಣ್ಣು ಮಗಳು ಜನಿಸಿದ್ದಾಳೆ. ನಿಮ್ಮಲ್ಲರ ಹಾರೈಕೆಗಳು ಬೇಕು' ಎಂದು ಹೇಳಿದ್ದಾರೆ. ಹರೀಶ್ ರಾಜ್ ಗೆ ಆಪ್ತರು, ಬಂಧುಗಳು ಮತ್ತು ಹಿತೈಶಿಗಳು ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ತಿಳಿಸುತ್ತಿದ್ದಾರೆ.

  ಈ ಹಿಂದೆಯೇ ಹರೀಶ್ ರಾಜ್ 2ನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದರು. ಮೊದಲ ಮಗಳಿಗೆ ಸಾನಿಧ್ಯ ಎಂದು ಹೆಸರಿಟ್ಟಿದ್ದಾರೆ. ಹರೀಶ್ ರಾಜ್ ಸದ್ಯ ಸಿನಿಮಾಗಳ ಜೊತೆಗೆ ಕಿರುತೆರೆಯಲ್ಲಿ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದಾರೆ.

  ನಮ್ಮಿಂದ ಬೇರೆಯವರಿಗೆ ತೊಂದರೆ ಆಗೋದು ನನಗೆ ಇಷ್ಟ ಇಲ್ಲ ಎಂದ Sri Murali | Madagaja | Filmibeat Kannada

  ಹರೀಶ್ ಕನ್ನಡ ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಯಾಗಿ ಬಿಗ್ ಮನೆಯೊಳಗೆ ಪ್ರವೇಶಿಸಿದ್ದರು. ಬಿಗ್ ಮನೆಯಲ್ಲಿದ್ದು ಅನೇಕ ದಿನಗಳ ಕಾಲ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಹರೀಶ್ ಬಳಿಕ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದರು. ಇದೀಗ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಹರೀಶ್ ರಾಜ್ ಮನೆಗೆ ಎರಡನೇ ಮಗಳು ಬಂದಿರುವ ಸಂತಸದಲ್ಲಿದ್ದಾರೆ.

  English summary
  Sandalwood Actor Harish Raj blessed with baby girl for second time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X