»   » 'ಸೂಪರ್ ಜೋಡಿ'ಗೂ ಮೊದಲೇ ವೆಂಕಟ್-ರಚನಾಗೆ ಪರಿಚಯವಿತ್ತು.!

'ಸೂಪರ್ ಜೋಡಿ'ಗೂ ಮೊದಲೇ ವೆಂಕಟ್-ರಚನಾಗೆ ಪರಿಚಯವಿತ್ತು.!

Posted By:
Subscribe to Filmibeat Kannada

'ಸೂಪರ್ ಜೋಡಿ' ಖ್ಯಾತಿಯ ರಚನಾ ಅವರು ಪ್ರೀತಿಸಿ, ಕೈ ಕೊಟ್ಟಿದ್ದಾರೆ ಎಂದು ನಟ, ನಿರ್ದೇಶಕ 'ಫೈರಿಂಗ್ ಸ್ಟಾರ್' ಹುಚ್ಚ ವೆಂಕಟ್ ಆರೋಪ ಮಾಡಿದ್ದಾರೆ. ಈ ಸುದ್ದಿ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.

ಒಂದೆಡೆ ವೆಂಕಟ್ ಪಿನಾಯಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮತ್ತೊಂದೆಡೆ ನಟಿ ರಚನಾ, ಇದ್ಯಾವುದಕ್ಕೂ ನನಗೂ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಹುಚ್ಚ ವೆಂಕಟ್

ಎಲ್ಲರಿಗೂ ಗೊತ್ತಿರುವಾಗೆ, ರಚನಾ ಹಾಗೂ ಹುಚ್ಚ ವೆಂಕಟ್ ನಡುವೆ ಪರಿಚಯವಾಗಿದ್ದು, 'ಸೂಪರ್ ಜೋಡಿ-2' ಕಾರ್ಯಕ್ರಮದ ಮೂಲಕ ಎಂದುಕೊಂಡಿದ್ದಾರೆ. ಆದ್ರೆ, ಅದಕ್ಕೂ ಮುಂಚೆಯೇ ಇವರಿಬ್ಬರಿಗೂ ಪರಿಚಯವಿತ್ತುವೆಂದು ಸ್ವತಃ ರಚನಾ ಅವರೇ ಬಹಿರಂಗ ಪಡಿಸಿದ್ದಾರೆ. ಹೇಗೆ ಮತ್ತು ಯಾವಾಗನಿಂದ ಎಂಬುದನ್ನ ಮುಂದೆ ಓದಿ.....

ಇಂದಿರಾನಗರದಲ್ಲಿ ಭೇಟಿ ಆಗಿದ್ದು....

ಹುಚ್ಚ ವೆಂಕಟ್ ಅವರನ್ನ ರಚನಾ ಅವರು ಮೊದಲು ಭೇಟಿ ಮಾಡಿದ್ದು ಇಂದಿರಾನಗರದಲ್ಲಿ. ''ಅದೊಂದು ದಿನ ರಸ್ತೆಯಲ್ಲಿ ಹೋಗುತ್ತಿರುವಾಗ ನೋಡಿ, ನಾನೇ ಮಾತನಾಡಿಸಿದ್ದೆ. ಸೆಲ್ಫಿ ತಗೆದುಕೊಂಡಿದ್ದೆ. ನಾನು ನಿಮ್ಮ ಫ್ಯಾನ್ ಎಂದಿದ್ದೆ. ಟಿವಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದೀನಿ ಎಂದಿದ್ದೆ'' - ರಚನಾ, ನಟಿ

ಸಿನಿಮಾ ಆಕ್ಟ್ ಮಾಡಿ ಎಂದಿದ್ದರು

''ವೆಂಕಟ್ ಅವರೇ ನನಗೆ ನನ್ನ 'ಪೊರ್ಕಿ ಹುಚ್ಚ ವೆಂಕಟ್' ಚಿತ್ರದಲ್ಲಿ ಅಭಿನಯಿಸಿ ಎಂದರು. ನಾನು ನಟಿಯಾಗಿದ್ದರಿಂದ ಅವಕಾಶವನ್ನ ಒಪ್ಪಿಕೊಂಡೆ. ಚಿತ್ರದಲ್ಲಿ ಅಭಿನಯಿಸಿದೆ. ನಾಲ್ಕೈದು ದಿನಗಳು ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆ'' - ರಚನಾ, ನಟಿ

'ಸೂಪರ್ ಜೋಡಿ'ಗೆ ಆಹ್ವಾನ

''ಕೆಲದಿನಗಳ ನಂತರ ನನಗೆ ಹುಚ್ಚ ವೆಂಕಟ್ ಅವರೇ ಫೋನ್ ಮಾಡಿ, 'ಸೂಪರ್ ಜೋಡಿ-2' ರಿಯಾಲಿಟಿ ಶೋ ಕಾರ್ಯಕ್ರಮವಿದೆ. ನೀವು ನನ್ನ ಪಾಟ್ನರ್ ಆಗಿ ಬನ್ನಿ ಎಂದು ಸ್ವತಃ ಹುಚ್ಚ ವೆಂಕಟ್ ಅವರೇ ಆಹ್ವಾನಿಸಿದರು'' - ರಚನಾ, ನಟಿ

'ಸೂಪರ್ ಜೋಡಿ' ಒಪ್ಪಿಕೊಳ್ಳಲು ಕಾರಣ ವೆಂಕಟ್

''ಹುಚ್ಚ ವೆಂಕಟ್ 'ಮಹಿಳೆಯರಿಗೆ ಗೌರವ ಕೊಡ್ತಾರೆ, ಮಹಿಳೆಯರ ಪರವಾಗಿ ಹೋರಾಟ ಮಾಡ್ತಾರೆ, ಅವರ ಜೊತೆ ರಿಯಾಲಿಟಿ ಶೋ ಮಾಡಿದ್ರೆ ನಾನು ಸೇಫ್ ಆಗಿರುತ್ತೇನೆ ಎಂಬ ಕಾರಣಕ್ಕೆ, ನಾನು ನನ್ನ ಮನೆಯವರ ಒಪ್ಪಿಗೆಯನ್ನ ತಗೆದುಕೊಂಡು ಭಾಗವಹಿಸಿದೆ'' - ರಚನಾ

ವೆಂಕಟ್ 'ಹುಚ್ಚು' ಪ್ರೀತಿ ಬಗ್ಗೆ 'ಸೂಪರ್ ಜೋಡಿ' ರಚನಾ ಬಿಚ್ಚಿಟ್ಟ ರಿಯಲ್ ಕಹಾನಿ

English summary
Actress Rachana Revealed, Firing Star Huchcha Venkat and Rachana's First Meet

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada