twitter
    For Quick Alerts
    ALLOW NOTIFICATIONS  
    For Daily Alerts

    ನಿರ್ಮಾಪಕರ ಧರಣಿ ; ಅಂಬರೀಶ್ ನಿಲುವೇನು?

    By Harshitha
    |

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮೂರನೇ ದಿನವೂ ನಿರ್ಮಾಪಕರ ಧರಣಿ ಮುಂದುವರಿದಿದೆ. ಕಲಾವಿದರ ಸಂಘ ಸ್ಪಂದಿಸುವವರೆಗೂ ಸತ್ಯಾಗ್ರಹ ಮುಂದುವರಿಸುವುದಾಗಿ ನಿರ್ಮಾಪಕರ ಸಂಘ ನಿರ್ಧರಿಸಿದೆ.

    ಮೂರನೇ ದಿನಕ್ಕೆ ಕಾಲಿಟ್ಟರೂ, ಕಲಾವಿದರ ಸಂಘದಿಂದ ಯಾರೂ ಕ್ಯಾರೆ ಅಂದಿಲ್ಲ. ನಟ ರೆಬೆಲ್ ಸ್ಟಾರ್ ಅಂಬರೀಶ್, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಸಭೆಯಲ್ಲಿ ಪಾಲ್ಗೊಂಡು ಒಮ್ಮತ ನಿರ್ಧಾರಕ್ಕೆ ಬರಲಾಗುತ್ತೆ ಅಂತ ನಿರ್ಮಾಪಕ ಮುನಿರತ್ನ ಹೇಳಿಕೆ ನೀಡಿದ್ದರು. ಆದ್ರೆ, ನಿನ್ನೆ ನಡೆದ ಸಭೆಯಲ್ಲಿ ಇಬ್ಬರೂ ಪತ್ತೆ ಇರಲಿಲ್ಲ. [ಕೆ.ಎಫ್.ಸಿ.ಸಿಗೆ ನಿರ್ಮಾಪಕ ಎ.ಗಣೇಶ್ ಬರೆದಿರುವ ಪತ್ರದಲ್ಲೇನಿದೆ?]

    Actor Jaggesh meets Ambareesh to put an end to Producers protest

    ನಿರ್ಮಾಪಕರ ಸಮಸ್ಯೆಗಳನ್ನ ಬಗೆಹರಿಸುವುದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಮಿತಿಗಳನ್ನ ರಚಿಸಿದೆ. ನಟಿ ತಾರಾ, ನವರಸ ನಾಯಕ ಜಗ್ಗೇಶ್, ಹಿರಿಯ ನಟಿ ಪ್ರಮೀಳಾ ಜೋಷಾಯಿ, ಸಾರಾ ಗೋವಿಂದು ಸೇರಿದಂತೆ ಹಲವರು ವಿವಿಧ ಸಮಿತಿಗಳಲಿದ್ದಾರೆ. [ನಟ ರಮೇಶ್ ಅರವಿಂದ್ ವಿರುದ್ಧ ತಿರುಗಿಬಿದ್ದ ಕೃಷ್ಣೇಗೌಡ]

    ನಿರ್ಮಾಪಕರ ಹಿತಾಸಕ್ತಿಗಾಗಿ ಕೈಜೋಡಿಸಿರುವ ನಟ ಜಗ್ಗೇಶ್ ನೇತೃತ್ವದಲ್ಲಿ ನಿನ್ನೆ ನಟಿ ತಾರಾ, ಪ್ರಮೀಳಾ ಜೋಷಾಯಿ, ಉಮೇಶ್ ಬಣಕರ್ ಮತ್ತು ಸಾರಾ ಗೋವಿಂದು, ರೆಬೆಲ್ ಸ್ಟಾರ್ ಅಂಬರೀಶ್ ಮನೆಗೆ ಭೇಟಿ ನೀಡಿದ್ದರು. [ಒಗ್ಗೂಡದ ಕಲಾವಿದರ ಬಗ್ಗೆ ನಟ ಜಗ್ಗೇಶ್ ಗರಂ]

    Actor Jaggesh meets Ambareesh to put an end to Producers protest

    ಅಂಬಿ ಮಾಮನ ಜೊತೆ ನಟ ಜಗ್ಗೇಶ್ ನೇತೃತ್ವದ ಸಮಿತಿ ಎಲ್ಲಾ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದೆ. ಜೂನ್ 7ನೇ ತಾರೀಖು ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕರ ಸಂಘದ ಜೊತೆ ಮಾತುಕತೆ ನಡೆಸುವುದಕ್ಕೆ ಅಂಬರೀಶ್ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ನಟ ಜಗ್ಗೇಶ್ ಟ್ವೀಟ್ ಕೂಡ ಮಾಡಿದ್ದಾರೆ. [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]

    ಅಂಬರೀಶ್ ಕೈಜೋಡಿಸುವವರೆಗೂ ಯಾವ ಸಮಸ್ಯೆ ಕೂಡ ಪರಿಹಾರ ಆಗುವುದಿಲ್ಲ ಅನ್ನೋದು ಗಾಂಧಿನಗರದ ಹಲವರ ಮಾತು. ಇದುವರೆಗೂ ವಾಣಿಜ್ಯ ಮಂಡಳಿಯಲ್ಲಿದ್ದ ಈ ಸಮಸ್ಯೆ ಇದೀಗ ಅಂಬರೀಶ್ ಮನೆಯಂಗಳಕ್ಕೆ ತಲುಪಿದೆ. ಕನ್ವರ್ ಲಾಲ್ ನಿರ್ಧಾರದ ಮೇಲೆ ಈಗ ಎಲ್ಲರ ಚಿತ್ತ.

    English summary
    Kannada Actor Jaggesh along with the Actress Tara have met Rebel Star Ambareesh to discuss the problems faced by the Producers. Actor Ambareesh have decided to meet the Producer's Association on June 7th.
    Wednesday, June 3, 2015, 14:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X