For Quick Alerts
  ALLOW NOTIFICATIONS  
  For Daily Alerts

  ನನ್ನ ಹಾಸ್ಯ ಕಂಡು ಮಗುವಂತೆ ನಗುತ್ತಿದ್ದರು; ಜಯಂತಿ ಅಗಲಿಕೆಗೆ ಜಗ್ಗೇಶ್ ಭಾವುಕ

  |

  ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಇನ್ನು ನೆನಪು ಮಾತ್ರ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಜಯಂತಿ ಇಂದು ಬೆಳಗ್ಗೆ ಕೊನೆಯುಸಿರೆಳಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಜಯಂತಿ ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು.

  ರಾಜ್ ಕುಮಾರ್ ಜೊತೆಗೆ 45 ಚಿತ್ರಗಳಲ್ಲಿ ನಟಿಸಿ ದಾಖಲೆ ಬರೆದಿದ್ರು ಜಯಂತಿ

  ಜಯಂತಿ ಅವರ ನಿಧನಕ್ಕೆ ಸಿನಿಮಾ ಮತ್ತು ರಾಜಕೀಯ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಹಿರಿಯ ನಟ ಜಗ್ಗೇಶ್ ಟ್ವೀಟ್ ಮಾಡಿ ಭಾವುಕರಾಗಿದ್ದಾರೆ. ಕೆಲವೊಮ್ಮೆ ನನ್ನ ಹಾಸ್ಯಕಂಡು ಮಗುವಂತೆ ನಗುತ್ತಿದ್ದರು. ಹೋದ ಅನೇಕ ಹಿರಿನಟರ ಸಾಲಿಗೆ ಜಯಮ್ಮ ಸೇರಿಬಿಟ್ಟರು. ನಿಮ್ಮ ಆತ್ಮ ಶಾರದೆಯಲ್ಲಿ ಲೀನವಾಗಲಿ. loveyou ಅಮ್ಮ ಎಂದು ಹೇಳಿದ್ದಾರೆ.

  ಈ ಬಗ್ಗೆ ಸಾಲು ಸಾಲು ಟ್ವೀಟ್ ಗಳನ್ನು ಮಾಡಿರುವ ಜಗ್ಗೇಶ್, "ಆನಂದಿಸಿ you are my favorite actor ಎಂದು ಮುತ್ತಿಕ್ಕಿದ್ದರು. ಕೆಲವೊಮ್ಮೆ ನನ್ನ ಹಾಸ್ಯಕಂಡು ಮಗುವಂತೆ ನಗುತ್ತಿದ್ದರು. ಮನಸ್ಸು ಮಗುವಂತೆ ನಡೆದ ಸಂಗತಿ ಮೆಲುಕಾಕಿ ಆನಂದಿಸುತ್ತದೆ. ಇಂದು ಆ ಮಹಾನಟಿ ಇಲ್ಲಾ ಎಂದಾಗ ಮನಸ್ಸಿಗೆ ನೋವಾಯಿತು. ಹೋದ ಅನೇಕ ಹಿರಿನಟರ ಸಾಲಿಗೆ ಜಯಮ್ಮ ಸೇರಿಬಿಟ್ಟರು. ನಿಮ್ಮ ಆತ್ಮ ಶಾರದೆಯಲ್ಲಿ ಲೀನವಾಗಲಿ. loveyou ಅಮ್ಮ" ಎಂದಿದ್ದಾರೆ.

  "ಸಿಕ್ಕಿತು ಆಗ ನನ್ನ ಸಿನಿಮಾ ಪಯಣ ಅವರ ಜೊತೆ ಹಂಚಿಕೊಂಡ ಸಮಯ ಮರೆಯಲಾಗದ ಕ್ಷಣ. ಅವರಿಗೆ ನಾನು ರೇಗಿಸಿದ್ದು ಜಯಮ್ಮ ದೊರದ ಬೆಟ್ಟ ಚಿತ್ರದಲ್ಲಿ ನಿಮ್ಮ ನೋಡಿ ಈಗ ಅನ್ನಿಸುತ್ತದೆ ಅಯ್ಯೋ ದೇವರೆ ಇಂದು ನಾಯಕ ನಟ ಆಗುವ ಬದಲು ದೂರದ ಬೆಟ್ಟದ ಸಮಯ ಆಗಿದ್ದರೆ ಎಂಥ ಅದ್ಭುತ ಇರುತ್ತಿತ್ತು ಎಂದಾಗ ನಾಚಿ ನೀರಾಗಿದ್ದರು ಹಾಗು ಕೋಲು ಹಿಡಿದು ಅಟ್ಟಾಡಿಸಿ ನಕ್ಕು" ಎಂದು ಬರೆದುಕೊಂಡಿದ್ದಾರೆ.

  "ನನ್ನ ಬಾಲ್ಯದಿಂದ ನಾನು ತುಂಬ ಇಷ್ಟಪಟ್ಟ ನಟಿಯರಲ್ಲಿ ಭಾರತಿ ಅಮ್ಮ ಹಾಗು ಜಯಂತಿ ಅಮ್ಮ. ಭಾರತಿ ಅಮ್ಮನ ಜೊತೆ ನಟಿಸಲು ನನ್ನ ಅವಕಾಶ ಸಿಗಲಿಲ್ಲಾ ಆದರೆ ಜಯಂತಿ ಅಮ್ಮನ ಜೊತೆ ಅನೇಕ ಚಿತ್ರ ನಟಿಸಿದ ಸಮಾಧಾನ ಸಂತೋಷ ನನ್ನ ಕಲಾಬದುಕಿಗೆ. ಅವರ ಜೊತೆ ಪಟೇಲ ನಟಿಸುವಾಗ ಪಾಂಡುಪುರದ ಚಿಕ್ಕಾಡೆ ಗ್ರಾಮದಲ್ಲಿ ಶೂಟಿಂಗ್ ವಿರಾಮ ಸಿಕ್ಕು ಸಮಯಕಳೆವ ಅವಕಾಶ" ಎಂದಿದ್ದಾರೆ.

  English summary
  Actor Jaggesh mourns to Veteran actress Jayanthi demise. Actress Jayanthi passes away in Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X