twitter
    For Quick Alerts
    ALLOW NOTIFICATIONS  
    For Daily Alerts

    ಗಿನ್ನಿಸ್ ದಾಖಲೆಗೆ 'ನಮೋ' ಅಂತಿದ್ದಾರೆ ಜಗ್ಗೇಶ್

    By ಜೀವನರಸಿಕ
    |

    ಇದು ನವರಸನಾಯಕ ಜಗ್ಗೇಶ್ ಅವರ ಹೊಸ ಸಿನಿಮಾ. ಜಗ್ಗೇಶ್ ಸಿನಿಮಾ ಅಂದರೆ ಅದು ಕಾಮಿಡಿ ಅಂದುಕೊಳ್ಳೋರೆ ಹೆಚ್ಚು. ಆದರೆ ಇದು ಅದಕ್ಕಿಂತ ಭಿನ್ನ ಅನ್ನಿಸೊ ಸಿನಿಮಾ. ಇಲ್ಲಿ ಜಗ್ಗೇಶ್ ಒಬ್ಬ ಸಾಮಾನ್ಯ ವ್ಯಕ್ತಿ. ಲಿಫ್ಟ್ ನ ಒಳಗೆ ಸಿಕ್ಕಿಹಾಕಿಕೊಳ್ಳೋ ಒಬ್ಬ ವ್ಯಕ್ತಿಯ ಮೂಲಕ ಶುರುವಾಗೋ ಕಥೆ ಲಿಫ್ಟ್ ನಲ್ಲೇ ನಡೆಯುತ್ತದೆ.

    ಇಷ್ಟಕ್ಕೂ ಇದೆಲ್ಲ ವಿಶೇಷ ಅಲ್ಲ. ಇಲ್ಲಿ ವಿಶೇಷ ಅಂದರೆ ಈ ಚಿತ್ರವನ್ನ ಗಿನ್ನಿಸ್ ದಾಖಲೆಗಾಗಿ ರೆಡಿಮಾಡ್ತಿರೋದು. ಇಡೀ ಚಿತ್ರ 24 ಗಂಟೆಗಳಲ್ಲಿ ಶೂಟ್ ಆಗಿ, ಎಡಿಟ್ ಆಗಿ, ಡಬ್ಬಿಂಗ್ ಕೂಡ ಆಗಿ ಮಾರನೇ ದಿನ ಅಥವಾ ಅದೇ ವಾರದಲ್ಲಿ ತೆರೆಗೆ ಕೂಡ ಬರುತ್ತಂತೆ. [ತುಮಕೂರು ಲೋಕಸಭೆ ಕ್ಷೇತ್ರದಿಂದ ಜಗ್ಗೇಶ್ ಸ್ಪರ್ಧೆ]

    Navarasa Nayaka Jaggesh
    ಚಿತ್ರಕ್ಕೆ 'ನಮೋ' ಅಂತ ಹೆಸರಿಡಲಾಗಿದ್ದು ಚಿತ್ರ ಇದೇ ಡಿಸೆಂಬರ್ ಮೂವತ್ತೊಂದರಂದು ಶೂಟಿಂಗ್ ನಡೆಸಲಿದೆ. ಹೊಸ ವರ್ಷಕ್ಕೆ ಅಂದ್ರೆ ಒಂದೇ ದಿನದಲ್ಲಿ ರೆಡಿಯಾಗಲಿದೆ ಹೊಸ ಸಿನಿಮಾ. ಸಾಮಾನ್ಯವಾಗಿ ಕಾಮಿಡಿ ಇಲ್ಲದಿದ್ರೆ ಹೀರೋಯಿಸಂ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ನವರಸನಾಯಕ ಜಗ್ಗೇಶ್ ವಿಭಿನ್ನ ಪಾತ್ರದಲ್ಲಿ ಎಂಟ್ರಿಕೊಡ್ತಿರೋದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸ್ತಿದೆ.

    ಏತನ್ಮಧ್ಯೆ ಲಕ್ಕಿ ಸ್ಟಾರ್ ರಮ್ಯಾ ಜೊತೆಗಿನ 'ನೀರ್ ದೋಸೆ' ಚಿತ್ರವೂ ವಿವಾದದಿಂದ ಮುಕ್ತವಾಗಿದ್ದು ಅದರಲ್ಲೂ ಜಗ್ಗೇಶ್ ಬಿಜಿಯಾಗಿದ್ದಾರೆ. ಜೊತೆಗೆ 'ಸಾಫ್ಟ್ ವೇರ್ ಗಂಡ' ಚಿತ್ರವೂ ಇದೆ. ಜಗ್ಗೇಶ್ ಅವರು ಬಿಜೆಪಿ ಎಂಎಲ್ ಸಿಯೂ ಆಗಿದ್ದು ಚಿತ್ರದ ಶೀರ್ಷಿಕೆಯೂ 'ನಮೋ' ಎಂದಿಟ್ಟಿರುವುದು 2014ರ ಲೋಕಸಭೆ ಚುನಾವಣೆ ಮೇಲೆ ಕಣ್ಣಾಕಿದ್ದಾರಾ ಎಂಬ ಅನುಮಾನವೂ ಬಾರದೆ ಇರುವುದಿಲ್ಲ.

    English summary
    Navarasa Nayaka Jaggesh new movie titled as 'Namo'. The actor decided to make it into the Guinness Book Of World Records with the goal of having shot, edit, dub the entire film in a mere 24 hours. At very next day or in a week planning to release the film.
    Friday, December 20, 2013, 12:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X