»   » ಲಂಡನ್ ನಲ್ಲಿ ಜಗ್ಗೇಶ್ ಪುತ್ರನ ವಿವಾಹ ಮಹೋತ್ಸವ

ಲಂಡನ್ ನಲ್ಲಿ ಜಗ್ಗೇಶ್ ಪುತ್ರನ ವಿವಾಹ ಮಹೋತ್ಸವ

By: ಉದಯರವಿ
Subscribe to Filmibeat Kannada

ನವರಸ ನಾಯಕ ಜಗ್ಗೇಶ್ ಅವರ ಜ್ಯೇಷ್ಠ ಪುತ್ರ ಗುರುರಾಜ್ ಅವರ ಮದುವೆ ನಿಶ್ಚಯವಾಗಿದೆ. ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಅಂದರೆ ಏಪ್ರಿಲ್ 24ರಂದು ಗುರುರಾಜ್ ಅವರು ನೂತನ ದಾಂಪತ್ಯಕ್ಕೆ ಅಡಿಯಿಡುತ್ತಿದ್ದಾರೆ.

ಗುರುರಾಜ್ ಕೈಹಿಡಿಯುತ್ತಿರುವ ಹುಡುಗಿ ಹೆಸರು ಕ್ಯಾಪಿಪೈಲಿ. ಅಯ್ಯೋ ಇದ್ಯಾವ ಊರಿನ ಹೆಸರು, ನಮ್ಮ ತುರುವೇಕೆರೆ ಈ ರೀತಿ ಹೆಸರಿಲ್ಲವಲ್ಲಾ ಎಂದು ಗಾಬರಿಯಾಗಬೇಡಿ. ವಧು ಹಾಲೆಂಡ್ ಮೂಲದವರು. ಮದುವೆ ಲಂಡನ್ ನಲ್ಲಿ ನೆರವೇರಲಿದೆ.[ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Actor Jaggesh son Gururaj marriage held in London

ಇಲ್ಲೇ ಮದುವೆ ಮಾಡಬೇಕೆಂದು ಜಗ್ಗೇಶ್ ಬಹಳ ಆಸೆ ಇಟ್ಟುಕೊಂಡಿದ್ದರು. ಆದರೆ ಕ್ಯಾಪಿಪೈಲಿ ಅವರ ಅಜ್ಜಿಗೆ ವಯಸ್ಸಾಗಿರುವ ಕಾರಣ ಅವರು ಇಲ್ಲಿಗೆ ಬರಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಲಂಡನ್ ನಲ್ಲಿ ಮದುವೆ ನಡೆಯಲಿದೆ.

ಲಂಡನ್ ನಿಂದ ವಾಪಸು ಬಂದ ಮೇಲೆ ಮಂತ್ರಾಲಯದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಇಟ್ಟುಕೊಂಡಿದ್ದಾರೆ. ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಕನ್ನಡ ಚಿತ್ರರಂಗದ ಎಲ್ಲರನ್ನೂ ಆಹ್ವಾನಿಸಲಾಗುತ್ತಿದೆ.

ಲಂಡನ್ ನಲ್ಲಿ ನಡೆಯುವ ಮದುವೆಗೆ ಜಗ್ಗೇಶ್ ಕುಟುಂಬಿಕರ ಜೊತೆ ಚಿತ್ರರಂಗದ ಹಲವು ಪ್ರಮುಖರೂ ತೆರಳುತ್ತಿದ್ದಾರೆ. ಹೊಸ ಬಾಳಿನ ಹೊಸಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ ಎಂದು ಶುಭ ಹಾರೈಸೋಣ.

ಗಿಲ್ಲಿ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಅಡಿಯಿಟ್ಟ ಗುರುರಾಜ್ ಬಳಿಕ ಸಂಕ್ರಾಂತಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ ತಂದೆಯಂತೆ ಚಿತ್ರರಂಗದಲ್ಲಿ ಗುರುರಾಜ್ ಭರವಸೆ ನಾಯಕ ನಟನಾಗಿ ಹೊರಹೊಮ್ಮಲಿಲ್ಲ.

English summary
Navarasa Nayaka Jaggesh elder son Gururaj, who has already made his on-screen appearance with Gilli and Sankrathi will be tying knot with his girlfriend on April 24, 2014. The wedding function in London will be followed by a small ritual in holy place Mantralaya and a grand reception will be held in Bangalore.
Please Wait while comments are loading...