Just In
Don't Miss!
- News
ಧಾರವಾಡದ ಅಪಘಾತದಲ್ಲಿ ಮೃತಪಟ್ಟವರ ಉಂಗುರ, ವಾಚ್ ನೋಡಿ ಭಾವುಕರಾದ ಕುಟುಂಬಸ್ಥರು
- Automobiles
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
- Finance
ಆನ್ ಲೈನ್ ವಂಚನೆ ತಡೆಯಲು ಸೇಫ್ ಪೇ ಪರಿಚಯಿಸಿದ ಏರ್ ಟೆಲ್
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ಬಿಡುಗಡೆಗೊಳಿಸಿದಕ್ಕೆ ಧನ್ಯವಾದ ಎಂದ ಪಾರ್ಥಿವ್ ಪಟೇಲ್
- Lifestyle
ನಿಮ್ಮ ಕೋಮಲ ತುಟಿಗಳಿಗಾಗಿ ಮನೆಯಲ್ಲಿಯೇ ತಯಾರಿಸಿ ಈ ಲಿಪ್ ಬಾಮ್ ಗಳನ್ನು...
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆರಾಧ್ಯ ದೈವ ರಾಜ್‌ಕುಮಾರ್ ಬಗ್ಗೆ ಜಗ್ಗೇಶ್ ಭಾವುಕ ಮಾತು
ಜಗ್ಗೇಶ್ ಮಾತಿಗೆ ಕೂತರೆ, ಹಾಸ್ಯ, ಭಾವುಕತೆ, ಅಧ್ಯಾತ್ಮ, ರಾಜಕೀಯ, ಪ್ರಚಲಿತ ವರ್ತಮಾನ, ಸಿನಿಮಾ ರಂಗದ ಹಿಂದು-ಮುಂದು ಎಲ್ಲದರ ಬಗ್ಗೆ ಚರ್ಚೆಯಾಗುತ್ತದೆ. ಅವರ ಆರಾಧ್ಯ ದೈವ ರಾಜ್‌ಕುಮಾರ್ ಬಗ್ಗೆ ಮಾತನಾಡದೆ ಜಗ್ಗೇಶ್ ಮಾತು ಮುಗಿಯದು.
ಜಗ್ಗೇಶ್ ಚಿತ್ರರಂಗಕ್ಕೆ ಬಂದು 40 ವರ್ಷ ಪೂರೈಸಿದ ಸಂತಸ ಹಂಚಿಕೊಳ್ಳಲೆಂದು ಜಗ್ಗೇಶ್ ಇಂದು ಮಾಧ್ಯಮಿತ್ರರೊಂದಿಗೆ ಸಂವಾದ ಹಮ್ಮಿಕೊಂಡಿದ್ದರು. ಸಂವಾದದಲ್ಲಿ ಜಗ್ಗೇಶ್ ಮಾತಿನ ಲಹರಿ ಅಲ್ಲಿ-ಇಲ್ಲಿ ಹರಿದು ಕೊನೆಗೆ ರಾಜ್‌ಕುಮಾರ್ ಅವರ ವಿಷಯಕ್ಕೆ ಬಂತು.
'ನನ್ನ ಮೇಲೆ ರಾಜ್‌ಕುಮಾರ್ ಪ್ರಭಾವ ಹೆಚ್ಚಿದೆ. ನನ್ನ ಉಸಿರಲ್ಲಿಯೇ ರಾಜ್‌ಕುಮಾರ್ ಬೆರತು ಹೋಗಿದ್ದಾರೆ. ಅವರಿಂದ ನನ್ನ ಜೀವನದಲ್ಲಿ ಸಾಕಷ್ಟು ಪಾಠಗಳನ್ನು ನಾನು ಕಲಿತಿದ್ದೇನೆ' ಎಂದರು ಜಗ್ಗೇಶ್.
'ನಾನು ಎಷ್ಟೋ ಬಾರಿ ಗಂಟೆಗಟ್ಟಲೆ ರಾಜ್ ಅವರ ಬಳಿ ಮಾತನಾಡಿದ್ದೇನೆ. ಬೆಳಿಗ್ಗೆ 5 ರಿಂದ ರಾತ್ರಿ 11 ರ ವರೆಗೆ ಮಾತನಾಡಿದ್ದಿದೆ, ಅದ್ಯಾವುದೂ ನನಗೆ ಸರಿಯಾಗಿ ಈಗ ನೆನಪಿಲ್ಲ, ಅವರ ಬಳಿ ಹೆಚ್ಚಿಗೆ ಮಾತನಾಡುತ್ತಿದ್ದುದು ರಾಯರ ಬಗ್ಗೆ' ಎಂದಿದ್ದಾರೆ ಜಗ್ಗೇಶ್.
ನನಗೆ ಬದುಕಿನ ಹಲವು ಪಾಠಗಳನ್ನು ಡಾ.ರಾಜ್‌ಕುಮಾರ್ ಹೇಳಿಕೊಟ್ಟಿದ್ದಾರೆ. ರಾಜ್ ಕುಮಾರ್ ಹೇಳಿದ ಎಲ್ಲಾ ಮಾತುಗಳನ್ನೂ ಈಗಲೂ ಚಾಚೂ ತಪ್ಪದೆ ಪಾಲಿಸುತ್ತಿದ್ದೇನೆ, ಅಣ್ಣಾವ್ರು ಬೆಳಿಗ್ಗೆ ಎದ್ದು ಸಂಧ್ಯಾವಂದನೆ ಮಾಡುತ್ತಿದ್ದರು, ಇದು ಬಹಳ ಜನಕ್ಕೆ ಗೊತ್ತಿಲ್ಲ' ಎಂದು ಹೇಳಿದರು ನಟ ಜಗ್ಗೇಶ್.
ಡಾ.ರಾಜ್‌ಕುಮಾರ್ ಬಗ್ಗೆ ಅತೀವ ಗೌರವ, ಪ್ರೀತಿ ಇಟ್ಟುಕೊಂಡಿದ್ದ ಜಗ್ಗೇಶ್, ಹಲವು ಬಾರಿ ರಾಜ್‌ಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ. 'ರಾಜ್ ಕುಮಾರ್ ಅವರನ್ನು ಸಂತನಂತೆ, ದೇವರಂತೆ ನೋಡುತ್ತಿದ್ದೇ ನಾನು' ಎಂದು ಮತ್ತೊಮ್ಮೆ ಗೌರವ ಭಾವ ಪ್ರದರ್ಶಿಸಿದರು ಜಗ್ಗೇಶ್.