For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಹುಡುಗರಿಗೆ 'ತಲೆ ಮಾಂಸದ' ಸರ್ಟಿಫಿಕೇಟ್: ಸಾಕ್ಷಿ ಸಮೇತ ಸಿಕ್ಕಿಬಿದ್ದ ಜಗ್ಗೇಶ್

  By ಫಿಲ್ಮ್ ಡೆಸ್ಕ್
  |

  ನವರಸ ನಾಯಕ ಜಗ್ಗೇಶ್ ಅದ್ಭುತ ನಟ ಎನ್ನುವುದು ಎಷ್ಟು ಸತ್ಯವೋ ಉತ್ತಮ ಮಾತುಗಾರ ಎನ್ನುವುದು ಅಷ್ಟೆ ಸತ್ಯ. ಆದರೆ ಎಷ್ಟೋ ಬಾರಿ ಅದೇ ಮಾತುಗಳು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು ಇದೆ. ಜಗ್ಗೇಶ್ ಬಾಯಿಗೆ ಬಂದ ಹಾಗೆ, ಏನೇನೋ ಮಾತನಾಡಿ ಎಡವಟ್ಟು ಮಾಡಿಕೊಂಡ ಉದಾಹರಣೆಯು ಸಾಕಷ್ಟಿವೆ. ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡು ಪೇಚಾಡುತ್ತಿದ್ದಾರೆ. ದರ್ಶನ್ ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಜಗ್ಗೇಶ್ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ.

  ಚಿಕ್ಕ ಹುಡುಗನ ಆಟ ಇದು ಎಂದು ದರ್ಶನ್ ಫ್ಯಾನ್ಸ್ ಗೆ ಸ್ಪಷ್ಟನೆ ಕೊಟ್ಟ ಜಗ್ಗೇಶ್

  ನವರಸ ನಾಯಕ ಹೆಸರಿಗೆ ತಕ್ಕಹಾಗೆ ನವರಸಗಳನ್ನು ಸೇರಿಸಿ ಭಾಷಣ ಬಿಗಿಯುವುದರಲ್ಲಿ ಎತ್ತಿದ ಕೈ. ಎಂಥವರನ್ನಾದರೂ ಮರಳು ಮಾಡುವ ಕಲೆ ಜಗ್ಗೇಶ್ ಮಾತುಗಳಿಗಿವೆ. ಆದರೆ ಅದೇ ಮಾತುಗಳು ಜಗ್ಗೇಶ್ ಅವರಿಗೆ ಎಷ್ಟೋ ಬಾರಿ ಮುಳುವಾಗಿ, ತಲೆ ತಗ್ಗಿಸುವಂತೆಯೂ ಆಗಿದೆ. ಯಾವಾಗಲು ದರ್ಶನ್ ಪರ ಮತ್ತು ಅಭಿಮಾನಿಗಳ ಪರ ಮಾತನಾಡುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದ ಜಗ್ಗೇಶ್ ಅವರ ನಿಜ ಬಣ್ಣ ಈಗ ಬಯಲಾಗಿದೆ.

  ಇನ್ಸ್ ಪೆಕ್ಟರ್ ವಿಕ್ರಂ ಸಿನಿಮಾದ ನಿರ್ಮಾಪಕ ವಿಖ್ಯಾತ್ ಜೊತೆ ಜಗ್ಗೇಶ್ ಮೊಬೈಲ್ ನಲ್ಲಿ ಮಾತನಾಡಿರುವ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಡಿಯೋ ಈಗ ದರ್ಶನ್ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ.

  ಜಗ್ಗೇಶ್ ನಿರ್ಮಾಪಕ ವಿಖ್ಯಾತ ಜೊತೆ ಮಾತನಾಡಿದ ಸಂಭಾಷಣೆ, 'ಅದು (ಹೊಸ ದಿಗಂತ) ಪಕ್ಕಾ ಆರ್ ಎಸ್ ಎಸ್ ಪತ್ರಿಕೆ. ಕನ್ನಡಪ್ರಭ, ಪ್ರಜಾವಾಣಿ ಇವರೆಲ್ಲರಿಗಿಂತ ಹೆಚ್ಚಿನ ರೀತಿಯಲ್ಲಿ ಜನ ನೋಡುವಂತ ಮತ್ತು ನಂಬುವಂಥ ಪತ್ರಿಕೆ ಅದು. ಇದರಲ್ಲಿ ಒಂದೇ ಒಂದು ಅಪಭ್ರಂಶ ಪದಪುಂಜ ಇರುವುದಿಲ್ಲ. ತುಂಬಾ ಡೀಸೆಂಟು. ಯಾವನ್ ನೋಡುತ್ತಾನೋ ಬಿಡ್ತಾನೋ ಸುಮಾರು 9 ಜನ ಆರ್ ಎಸ್ ಎಸ್ ಅವರ ಮನೆಯಲ್ಲಿ ಪೇಪರ್ ಇರುತ್ತೆ. ನಮ್ಮನೆಯವರು ಹೆಲ್ತ್ ಬಗ್ಗೆ ಬರೀತಾರೆ ಎಂಥ ಪವರ್ ಫುಲ್ ಪತ್ರಿಕೆಯದು. ಈ ಪತ್ರಿಕೆಗೆ ಜಾಹೀರಾತುಕೊಡುವುದನ್ನು ಮಿಸ್ ಮಾಡಬೇಕಾ. ಅದನ್ನ ಅವಾಯ್ಡ್ ಮಾಡಕ್ಕೆ ಹೇಳು ಚೂ*** ಥರ ಮಾತಾಡಿದ್ದಾರೆ. ಮತ್ತೆ ಆ ಹುಡುಗನಿಗು ಕೊಡು. ಅವನು ಮದುವೆ ಆಗಿದ್ದಾನೆ ಪ್ರತ್ಯೇಕವಾದ ಸಂಸಾರ ಮಾಡುತ್ತಿದ್ದಾನೆ, ಕಷ್ಟದಲ್ಲಿ ಇದ್ದಾನೆ.

  ನಮ್ಮ ಹತ್ರ ಇರೋರೆಲ್ಲ ಅಂಥವರೆನೇ. ಬಟ್... ದರ್ಶನ್ ಥರ ಅವರ ಥರ ಇದ್ದಾರಲ್ಲಾ? ಅವರ**** ತಲೆ ಮಾಂಸ ಕಳಿಸಿ ಅಣ್ಣಾ.. ನೂರ್ ಕುರಿ ಕಳಿಸಿ ಅಂತಣ್ಣಾ ಅನ್ನೋರು ಯಾರು ಇಲ್ಲ ನನ್ನ ಹತ್ರ...' ಅಂತ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಈ ಆಡಿಯೋ ಈಗ ಎಲ್ಲಾ ಕಡೆ ಹರಿದಾಡುತ್ತಿದೆ.

  ಅಷ್ಟಕ್ಕೂ ಜಗ್ಗೇಶ್ ತಲೆ ಮಾಂಸ ಕೇಳೋರು ಅಂತ ಹೇಳಿದ್ದು ಯಾರಿಗೆ? ದರ್ಶನ್ ಅಭಿಮಾನಿಗಳಿಗಾ, ದರ್ಶನ್ ಜೊತೆ ಇರುವ ಸ್ನೇಹಿತರಿಗಾ ಅಥವಾ ಬೇರೆ ಇನ್ನಾರಿಗೆ ಎನ್ನುವ ಪ್ರಶ್ನೆ ಎದ್ದಿದೆ. ಆದರೆ ಜಗ್ಗೇಶ್ ಅವರ ಈ ಮಾತುಗಳು ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ.

  ಜಗ್ಗೇಶ್ ಮಾತು ಕೇಳಿದ್ರೆ ಇದು ರಾತ್ರಿ ಹೊತ್ತಲ್ಲಿ ಆಡುವ ಮಾತುಗಳು ಎನಿಸುತ್ತೆ. ಇದೀಗ ಆಡಿಯೋ ಲೀಕ್ ಆಗಿರುವ ವಿಚಾರ ಗೊತ್ತಾಗಿ ಜಗ್ಗೇಶ್ ಪರದಾಡುತ್ತಿದ್ದಾರೆ. ತೋತಾಪುರಿ ಚಿತ್ರೀಕರಣದಲ್ಲಿದ್ದ ಜಗ್ಗೇಶ್ ದಿಢೀರ್ ಅಂತ ಮನೆಗೆ ಬಂದಿದ್ದಾರಂತೆ.

  ದರ್ಶನ್ ಅವರಲ್ಲಿ ಕ್ಷಮೆ ಕೇಳಲು ಫೋನ್ ಮೇಲೆ ಫೋನ್ ಮಾಡುತ್ತಿದ್ದಾರಂತೆ. ಆದರೆ ಎಷ್ಟೇ ಕರೆ ಮಾಡಿದರೂ ದರ್ಶನ್ ಫೋನ್ ತೆಗೆಯುತ್ತಿಲ್ಲ. ಆಗಲೇ ದರ್ಶನ್ ಅವರಿಗೆ ಈ ಆಡಿಯೋ ರೀಚ್ ಆಗಿದೆಯಂತೆ. ತಿರುಪತಿಯಲ್ಲಿರುವ ದರ್ಶನ್ ಬೆಂಗಳೂರಿಗೆ ವಾಪಸ್ ಆದ ಬಳಿಕ ಜಗ್ಗೇಶ್ ಜೊತೆ ಮಾತನಾಡುತ್ತಾರಾ?

  ಈ ಕುರುತು ಪ್ರತಿಕ್ರಿಯೆಗಾಗಿ ನಟ ಜಗ್ಗೇಶ್ ಹಾಗು ನಿರ್ಮಾಪಕ ವಿಖ್ಯಾತ್ ರನ್ನ ಫಿಲ್ಮಿ ಬೀಟ್ ಕನ್ನಡ ಸಂಪರ್ಕಿಸಿತ್ತಾದರು ಇಬ್ಬರು ಲಭ್ಯವಾಗಲಿಲ್ಲ.

  English summary
  Actor Jaggesh talks about Darshan and his fans in leaked audio clip.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X