ಮಧ್ಯರಾತ್ರಿ ವಿಚಿತ್ರ ಶಬ್ದ: ನಟ ಜಗ್ಗೇಶ್ ಗೆ ನಿದ್ರೆಯೇ ಇಲ್ಲ
ನಟ ಜಗ್ಗೇಶ್ ನಿನ್ನೆ ರಾತ್ರಿ ಸರಿಯಾಗಿ ನಿದ್ರೆ ಮಾಡಲು ಆಗಲಿಲ್ಲ. ಕಾರಣ ಮಧ್ಯರಾತ್ರಿ ಕೇಳಿಸುತ್ತಿದ್ದ ಒಂದು ವಿಚಿತ್ರ ಶಬ್ದ.
ರಾತ್ರಿ ಮನೆಯಲ್ಲಿ ಮಲಗಿದ್ದ ಜಗ್ಗೇಶ್ ಗೆ ವಿಚಿತ್ರ ಶಬ್ದವೊಂದು ಕೇಳಿಸಿತು. ಅದು ಅವರ ನಿದ್ರೆಯನ್ನು ಕಡೆಸಿತು. ಇದರಿಂದ ಏನಿದು ನೋಡೋಣ ಎಂದು ಸಿಸಿ ಟಿವಿ ಪರಿಶೀಲನೆ ಮಾಡಿದರು. ಆಗ ಬೀದಿ ನಾಯಿಗಳು ಜಗ್ಗೇಶ್ ಕಾರ್ ಮೇಲೆ ಹತ್ತಿ ಗಲಾಟೆ ಮಾಡುತ್ತಿದ್ದವು.
ಇದನ್ನು ನೋಡಿದ ಜಗ್ಗೇಶ್ ಕಾರ್ ಮೇಲೆ ನಾಯಿಗಳು ಇದ್ದರೂ ಪರವಾಗಿಲ್ಲ. ಮನುಷ್ಯನಾಗಲಿ ಪ್ರಾಣಿಯಾಗಲಿ ಅದರ ಸಂತೋಷ ಕೆಡಿಸಬಾರದು ಎಂದು ಸುಮ್ಮನಾದರು. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಹಂಚಿಕೊಂಡಿದ್ದಾರೆ.

''ಮಧ್ಯರಾತ್ರಿ ವಿಚಿತ್ರ ಶಬ್ಧಕ್ಕೆ ನಿದ್ರೆ ಮಾಯ..! ಏನು ಎಂದು cctv ನೋಡಿದರೆ ಬೀದಿ ನಾಯಿಗಳು ನನ್ನ ಕಾರನ್ನೆ ಆಟದ ಮೈದಾನ ಮಾಡಿಕೊಂಡು ಆಡುತ್ತಿವೆ.. ಯಾಕೋ ಓಡಿಸಲು ಮನಸ್ಸು ಬರಲಿಲ್ಲ.. ಮನುಷ್ಯನಿಗಾಗಲಿ ಪ್ರಾಣಿಗಾಗಲಿ ಅವರ ಸಂತೋಷವನ್ನು ಕೆಡಿಸುವುದು ಮಹಾ ಪಾಪ ಅನ್ನಿಸಿತು. ರಕ್ಕಸ ಗುಣದ ಯಾಂತ್ರಿಕ ಜಗತ್ತಿನಲ್ಲಿ ಇಂದು ಮನುಷ್ಯ ಪ್ರಾಣಿಗಳಿಗೆ ಸಂತೋಷ ಮರೀಚಿಕೆ. ಸಂತೋಷವಾಗಿ ಬದುಕುವುದು ಎಲ್ಲಾ ಶ್ರೀಮಂತಿಕೆಗಿಂತ ಶ್ರೇಷ್ಠ. ಇಂದು ಯಾರು ಬೇಕಾದರು ದುಡ್ಡು ಸಂಪಾದನೆ ಮಾಡಬಹುದು. ಆದರೆ ಸಂತೋಷ ಮತ್ತು ಸಮಯ ಯಾರಿಂದಲು ಸಂಪಾದನೆ ಮಾಡಲಾಗದು. ಬದಲಿಗೆ ಸರಿಯಾಗಿ ಸಮಯ ಬಳಸಿ ಸಂತೋಷ ಪಡೆಯಬಹುದು. ಶುಭ ಮಧ್ಯರಾತ್ರಿ.'' ಎಂದು ಜಗ್ಗೇಶ್ ಘಟನೆ ವಿವರಿಸಿದ್ದಾರೆ.
ನಾಯಿಯನ್ನು ಮನುಷ್ಯನಂತೆ ಕಂಡ ಜಗ್ಗೇಶ್ ರನ್ನು ಅವರ ಅಭಿಮಾನಿಗಳ ಹೊಗಳಿದ್ದಾರೆ. ಟ್ವಿಟ್ಟರ್ ನಲ್ಲಿ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











