»   » ಗುಟ್ಟು-ಗುಟ್ಟಾಗಿ ಮದುವೆಯಾದ ದಕ್ಷಿಣ ಭಾರತದ ನಟ ಜೆಡಿ ಚಕ್ರವರ್ತಿ

ಗುಟ್ಟು-ಗುಟ್ಟಾಗಿ ಮದುವೆಯಾದ ದಕ್ಷಿಣ ಭಾರತದ ನಟ ಜೆಡಿ ಚಕ್ರವರ್ತಿ

Posted By: Suni
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಈ ಸಿನಿಮಾ ತಾರೆಯರೇ ಹಾಗೆ ಏನಾದರೂ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಲವ್ ಅಫೇರ್, ಲವ್ ಫೈಲ್ಯೂರ್, ಗುಟ್ಟಾಗಿ ಮದುವೆ ಆಗಿ ಸುದ್ದಿಯಾಗೋದು ಇತ್ಯಾದಿ ಇತ್ಯಾದಿ...

  ಸಾಮಾನ್ಯವಾಗಿ ಲವ್ ಬ್ರೇಕ್ ಅಪ್ ಗಳು ಹೆಚ್ಚಾಗಿ ಚಾಲ್ತಿಯಲ್ಲಿರೋದು ಬಾಲಿವುಡ್ ಚಿತ್ರರಂಗ ಕ್ಷೇತ್ರದಲ್ಲಿ. ಇನ್ನು ನಿಶ್ಚಿತಾರ್ಥ ಮಾಡಿಕೊಂಡು, ತದನಂತರ ಯಾಕೋ ಸರಿ ಬರುತ್ತಿಲ್ಲ ಎಂದು ಹೇಳಿ ಬಿಟ್ಟು ಹೋಗೋ ಹಲವು ಪ್ರಸಂಗಗಳು ಕಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ನಡೆದಿದೆ.[ಕನ್ನಡಕ್ಕೆ ಬಾಲಿವುಡ್ ಬಿಚ್ಚಮ್ಮ ಮಿನೀಷಾ ಲಂಬ]

  ಆದ್ರೆ ಈಗೇನಿದ್ದರೂ, ಮಾಧ್ಯಮದವರ ಕಣ್ತಪ್ಪಿಸಿ, ಹೇಳದೇ-ಕೇಳದೇ ಗುಟ್ಟಾಗಿ ನಿಶ್ಚಿತಾರ್ಥ-ಮದುವೆ ಮಾಡಿಕೊಳ್ಳೋದು. ಇದೀಗ ದಕ್ಷಿಣ ಭಾರತದ ಖ್ಯಾತ ನಟರೊಬ್ಬರು ನಿನ್ನೆ (ಆಗಸ್ಟ್ 18) ಗುಟ್ಟಾಗಿ ಮದುವೆಯಾಗಿದ್ದಾರೆ.[ಬಿಗ್ ಬ್ರೇಕಿಂಗ್ : ಮತ್ತೊಂದು ಮದುವೆ ಆದ ದುನಿಯಾ ವಿಜಯ್.!]

  ತಮಿಳು-ತೆಲುಗು, ಹಿಂದಿ, ಮಲಯಾಳಂ ಕ್ಷೇತ್ರದಲ್ಲಿ ನಟ ಕಮ್ ನಿರ್ದೇಶನಕನಾಗಿ ದುಡಿದು, ಇದೀಗ ಕನ್ನಡ ಚಿತ್ರರಂಗ ಕ್ಷೇತ್ರದಲ್ಲೂ ಛಾಪು ಮೂಡಿಸಲಿರುವ 46 ವರ್ಷದ ಖ್ಯಾತ ನಟರೊಬ್ಬರು, ತಮ್ಮ ಪ್ರಿಯತಮೆ ಜೊತೆ ಮದುವೆ ಮಾಡಿಕೊಂಡಿದ್ದಾರೆ.

  ಅಂದಹಾಗೆ ಈ ನಟ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಪರಮಾತ್ಮ ಹಾಗೂ ಅವರ ಗರಡಿಯಲ್ಲಿ ಪಳಗಿದ ನಟ ಕಮ್ ನಿರ್ದೇಶಕ ಅನ್ನೋದು ವಿಶೇಷ. ಅಷ್ಟಕ್ಕೂ ಯಾರ 'ಆ' ನಟ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೋಡಿ ಮುಂದಿನ ಸ್ಲೈಡ್ಸ್ ಗಳಲ್ಲಿ....

  ಯಾರು 'ಆ' ನಟ.?

  ಹಿಂದಿ, ಮಲಯಾಳಂ, ತಮಿಳು-ತೆಲುಗು ಚಿತ್ರರಂಗದಲ್ಲಿ ಮೊದ-ಮೊದಲು ನಟನಾಗಿ, ನಂತರ ವಿಲನ್ ಆಗಿ, ತದನಂತರ ನಿರ್ದೇಶಕನಾಗಿ ಕೂಡ ದುಡಿದಿರುವ ನಟ ಜೆ ಡಿ ಚಕ್ರವರ್ತಿ (46 ವಯಸ್ಸು) ಅವರು ಅಂತೂ-ಇಂತೂ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.[ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ಪ್ರಿಯಾಮಣಿ]

  ಯಾರ ಜೊತೆ.?

  ಅಂದಹಾಗೆ ಬಹುಭಾಷಾ ನಟ ಜೆ.ಡಿ ಚಕ್ರವರ್ತಿ ಅವರು ಇಷ್ಟು ಸಮಯ ಮದುವೆ ಆಗದೇ ಉಳಿದಿದ್ದರೂ ಸಹ, ಹಲವು ಅಫೇರ್ ಗಳಿಂದ ಸುದ್ದಿಯಾಗಿದ್ದರು. ಇದೀಗ ಕೊನೆಗೂ ತಮ್ಮ ದೀರ್ಘ ಕಾಲದ ಪ್ರಿಯತಮೆ ನಟಿ ಅನುಕೃತಿ ಗೋವಿಂದ ಶರ್ಮ ಅವರನ್ನು ಮದುವೆಯಾಗಿದ್ದಾರೆ.[ಗೋವಾದಲ್ಲಿ ನಿಶ್ಚಿತಾರ್ಥ: ಯಶ್ ಬಿಚ್ಚಿಟ್ಟ ರಹಸ್ಯ]

  ಯಾರೀಕೆ.?

  ಇದೇ ಜೆಡಿ ಚಕ್ರವರ್ತಿ ನಿರ್ದೇಶನದಲ್ಲಿ, ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ನಿರ್ಮಾಣದಲ್ಲಿ ಮೂಡಿಬಂದಿದ್ದ, 'ಎ' ಪ್ರಮಾಣಪತ್ರ ಪಡೆದ ತೆಲುಗು ಸಿನಿಮಾ 'ಶ್ರೀದೇವಿ'ಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ನಟಿ ಅನುಕೃತಿ ಶರ್ಮ ಅವರು ಇಡೀ ಟಾಲಿವುಡ್ ಅಂಗಳದಲ್ಲಿ ಭಾರಿ ಸುದ್ದಿ ಮಾಡಿದ್ದರು.

  ಲವ್ವಿ-ಡವ್ವಿ

  'ಶ್ರೀದೇವಿ' ಚಿತ್ರದ ನಂತರ ನಟಿ ಅನುಕೃತಿ ಮತ್ತು ನಟ ಕಮ್ ನಿರ್ದೇಶಕ ಜೆಡಿ ಚಕ್ರವರ್ತಿ ನಡುವೆ ಲವ್ವ-ಡವ್ವಿ ನಡೆದಿತ್ತು. ಇದೀಗ ಇವರಿಬ್ಬರ ಕುಛ್-ಕುಛ್ ಗೆ ಮದುವೆ ಮೂಲಕ ಅಧೀಕೃತ ಮುದ್ರೆ ಬಿದ್ದಿದೆ.

  ಗುಟ್ಟಾಗಿ ಮದುವೆ

  ಯಾರನ್ನೂ ಮದುವೆಗೆ ಆಹ್ವಾನಿಸದೆ, ಕೇವಲ ಹುಡುಗ-ಹುಡುಗಿ ಕುಟುಂಬಸ್ಥರ ಸಮ್ಮುಖದಲ್ಲಿ ಈ ಮದುವೆ ನೆರವೇರಿದೆ. ಆಗಸ್ಟ್ 18, ಗುರುವಾರದಂದು ಹೈದರಾಬಾದ್ ನಲ್ಲಿ ರಹಸ್ಯವಾಗಿ ಜೆಡಿ ಚಕ್ರವರ್ತಿ ಮತ್ತು ನಟಿ ಅನುಕೃತಿ ಶರ್ಮ ಅವರು ಸತಿ-ಪತಿಗಳಾಗಿದ್ದಾರೆ.

  ಎಲ್ಲರಿಗೂ ಸರ್ ಪ್ರೈಸ್

  ಜೆಡಿ ಚಕ್ರವರ್ತಿ ಮತ್ತು ನಟಿ ಅನುಕೃತಿ ಅವರ ಮದುವೆ ವಿಚಾರ ಇದೀಗ ತಮಿಳು-ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದವರಿಗೆ ಬಿಗ್ ಸರ್ ಪ್ರೈಸ್ ಆಗಿದೆ.

  ಇಂದು ಘೋಷಣೆ ಮಾಡಲಿದ್ದಾರೆ

  ರಹಸ್ಯವಾಗಿ ಕುಟುಂಬದ ಜೊತೆ ಮದುವೆಯಾದ ಜೆಡಿ ಚಕ್ರವರ್ತಿ ಅವರು, ಇಂದು ಮಾಧ್ಯಮದ ಮುಂದೆ ಬಂದು ಮದುವೆಯಾದ ಬಗ್ಗೆ ಆಫೀಶಿಯಲ್ ಆಗಿ ಅನೌನ್ಸ್ ಮಾಡಲಿದ್ದಾರೆ.

  ಜೆಡಿಗೂ ಕನ್ನಡಕ್ಕೂ ಟಚ್ ಇದೆ

  ಅಂದಹಾಗೆ ಬಹುಭಾಷಾ ನಟ-ನಿರ್ದೇಶಕ ಜೆಡಿ ಚಕ್ರವರ್ತಿ ಅವರಿಗೆ ಕನ್ನಡ ಚಿತ್ರರಂಗದ ಟಚ್ ಕೂಡ ಇದೆ. ನಟಿ ಪೂಜಾ ಗಾಂಧಿ ಅವರು ತಮ್ಮ ಹೋಮ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿರುವ 'ರಾವಣಿ' ಚಿತ್ರಕ್ಕೆ ನಟನಾಗಿ ಜೊತೆಗೆ ನಿರ್ದೇಶಕನಾಗಿ ಜೆಡಿ ಚಕ್ರವರ್ತಿ ಅವರು ಕೆಲಸ ಮಾಡಲಿದ್ದಾರೆ. ಈಗಾಗಲೇ ಚಿತ್ರದ ಮುಹೂರ್ತ ಆಗಿದ್ದು, ಯಾವಾಗ ಶೂಟಿಂಗ್ ಅನ್ನೋದು ತಿಳಿದು ಬಂದಿಲ್ಲ.

  English summary
  Actor J D Chakravarthy has tied the knots with actress Anukriti Govind Sharma. She is the actress who landed in a controversy over the issue of "skin show" in Telugu movie 'Sridevi'. The wedding ceremony was a secret one Yesterday (August 18th) in Hyderabad, with only family members attending it.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more