»   » ನಟ 'ಜೆ.ಕೆ' ಹೇಳಿಕೆಗೆ ತೀವ್ರ ಖಂಡನೆ: 'ಜೆ.ಕೆ' ಹೇಳಿದ್ದೇ ಬೇರೆ, ಆಗಿದ್ದೇ ಬೇರೆ.!

ನಟ 'ಜೆ.ಕೆ' ಹೇಳಿಕೆಗೆ ತೀವ್ರ ಖಂಡನೆ: 'ಜೆ.ಕೆ' ಹೇಳಿದ್ದೇ ಬೇರೆ, ಆಗಿದ್ದೇ ಬೇರೆ.!

Posted By:
Subscribe to Filmibeat Kannada

ಕಿರುತೆರೆ ಸೂಪರ್ ಸ್ಟಾರ್, ಕನ್ನಡ ನಟ ಕಾರ್ತಿಕ್ ಜಯರಾಂ (ಜೆ.ಕೆ) ತಮಗೆ ಸಿಕ್ಕ ಅವಕಾಶಗಳನ್ನ ಸದುಪಯೋಗ ಪಡಿಸಿಕೊಂಡು ಬೆಳದ ಪ್ರತಿಭಾನ್ವಿತ ನಟ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ, ಬಾಲಿವುಡ್ ನ ಪೌರಾಣಿಕ ಧಾರಾವಾಹಿಯಲ್ಲಿ 'ರಾವಣ'ನ ಪಾತ್ರ ಮಾಡಿ ಯಶಸ್ಸು ಕಂಡವರು.

ಆದ್ರೆ, ಇತ್ತೀಚೆಗೆ ನಟ ಜೆ.ಕೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಹೇಳಿಕೆ ಈಗ ಸ್ಯಾಂಡಲ್ ವುಡ್ ಅಭಿಮಾನಿಗಳನ್ನ ಕೆರಳಿಸಿದೆ. ಸಾಮಾಜಿಕ ಜಾಲಾತಣಗಳಲ್ಲಿ ನಟ 'ಜೆ.ಕೆ' ವಿರುದ್ಧ ಟ್ರೋಲ್ ಮಾಡಿ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ.

ಈ ಬೆಳವಣಿಗೆಯ ಬಗ್ಗೆ ನಟ ಜೆ.ಕೆ ಸ್ಪಷ್ಟನೆ ಕೂಡ ಕೊಟ್ಟಿದ್ದು, ''ನಾನು ಹೇಳಿದ್ದೇ ಬೇರೆ ಅರ್ಥ, ಎಲ್ಲರೂ ಅರ್ಥೈಸಿಕೊಂಡಿರುವುದೇ ಬೇರೆ ಅರ್ಥ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ, ಜೆ.ಕೆ ಏನಂತ ಪೋಸ್ಟ್ ಹಾಕಿದ್ದರು? ಏನಿದು ವಿವಾದ ಅಂತ ಮುಂದೆ ಓದಿ......

ಜೆ.ಕೆ ಹಾಕಿಕೊಂಡಿದ್ದ ಪೋಸ್ಟ್.!

''ಬಾಲಿವುಡ್ ಇಂಡಸ್ಟ್ರಿಗೆ ಥ್ಯಾಂಕ್ಸ್, ಯಾಕಂದ್ರೆ 'ರಾವಣ' ಅಂತಹ ದೊಡ್ಡ ಪಾತ್ರಕ್ಕೆ ನನಗೆ ಅವಕಾಶ ಕೊಟ್ಟಿದ್ದಕ್ಕೆ. ಸ್ಯಾಂಡಲ್ ವುಡ್ ನಲ್ಲಿ ಪೌರಾಣಿಕ ಪಾತ್ರಕ್ಕೆ ನನ್ನನ್ನು ನಿರಾಕರಿಸಲಾಗಿತ್ತು. ಆದ್ರೆ, ನೀವು ನನ್ನ ಶಕ್ತಿಗೊಳಿಸಿದ್ದೀರಾ. ನಾನು ಕೊಳದಲ್ಲಿ ಈಜುವುದಕ್ಕಿಂತ ಸಮುದ್ರದಲ್ಲಿ ಈಜಲು ಇಷ್ಟಪಡುತ್ತೇನೆ'' - ಜೆ.ಕೆ, ನಟ

ಸಮುದ್ರ ಯಾವುದು? ಕೊಳ ಯಾವುದು?

ಜೆ.ಕೆ ಅವರ ಪೋಸ್ಟ್ ನಲ್ಲಿ ವಿವಾದಕ್ಕೆ ಕಾರಣವಾಗಿದ್ದೇ 'ನಾನು ಕೊಳದಲ್ಲಿ ಈಜುವುದಕ್ಕಿಂತ ಸಮುದ್ರದಲ್ಲಿ ಈಜಲು ಇಷ್ಟಪಡುತ್ತೇನೆ' ಎಂಬ ಸಾಲುಗಳು. ಜೆ.ಕೆ ಇಲ್ಲಿ ಯಾರನ್ನ ಸಮುದ್ರಕ್ಕೆ ಹೋಲಿಸಿದ್ದಾರೆ? ಯಾರನ್ನ ಕೊಳಕ್ಕೆ ಹೋಲಿಸಿದ್ದಾರೆ ಎಂಬುದು ಜನರಿಗೆ ಯೋಚನೆ ಆಯಿತು.

ಕಿಡಿಕಾರಿದ ಅಭಿಮಾನಿಗಳು

ಬಾಲಿವುಡ್ ನ್ನ ಸಮುದ್ರ ಎನ್ನುತ್ತಿದ್ದಾರೆ, ಸ್ಯಾಂಡಲ್ ವುಡ್ ನ್ನ ಕೊಳ ಎನ್ನುತ್ತಿದ್ದಾರೆ ಎಂದು ಅರ್ಥೈಸಿಕೊಂಡ ಜನರು, ನಟ ಜೆ.ಕೆ ವಿರುದ್ಧ ಕೆಂಡಕಾರಿದರು. ಜೆ.ಕೆ ವಿರುದ್ಧ ಟ್ರೋಲ್ ಮಾಡಿದರು.

ಆದ್ರೆ, 'ಜೆ.ಕೆ' ಹೇಳಿದ್ದೇ ಬೇರೆ.!

ಈ ಬೆಳವಣಿಗೆಯ ನಂತರ ಸ್ಪಷ್ಟನೆ ನೀಡಿದ ಜೆ.ಕೆ, ಹೇಳಿದ್ದೇ ಬೇರೆ. ''ನಾನು ಸಮುದ್ರ ಮತ್ತು ಕೊಳ ಎಂದು ಯಾವ ಇಂಡಸ್ಟ್ರಿಯನ್ನ ಹೋಲಿಸಿಲ್ಲ. ಅದನ್ನ ತಪ್ಪಾಗಿ ಗ್ರಹಿಸಲಾಗಿದೆ'' ಎಂದು ಈ ಕ್ಲಾರಿಟಿ ಕೊಡುವ ಮೂಲಕ ವಿವಾದಕ್ಕೆ ಬ್ರೇಕ್ ಹಾಕಿದ್ದಾರೆ.

ಹಾಗಿದ್ರೆ, ಜೆ.ಕೆ ಹೇಳಿಕೆಯ ಅರ್ಥವೇನು?

''ಕೇವಲ ಪೌರಾಣಿಕ ಪಾತ್ರಕ್ಕೆ ಮಾತ್ರವಲ್ಲ, ಕಳೆದ ಮೂರು ವರ್ಷದಿಂದ ಎಲ್ಲಾ ರೀತಿಯ ಪಾತ್ರಗಳಿಗೂ ನನ್ನನ್ನ ಕಡೆಗಣಿಸುತ್ತಿದ್ದಾರೆ. ನೀನು ಅವರ ಕಡೆ, ಇವರ ಕಡೆ ಎಂಬ ಕಾರಣಕ್ಕೆ. ಅದಕ್ಕೆ ಒಂದು ಹಿಂದಿ ಧಾರಾವಾಹಿ ಮಾಡಿದೆ. ಅದನ್ನ ಮುಗಿಸಿಕೊಂಡು ಬಂದ ಮೇಲೂ ನನಗೆ ಅವಕಾಶಗಳು ಇಲ್ಲ''

ಸಮುದ್ರ ಅಂದ್ರೆ 'ಕಷ್ಟ', ಕೊಳ ಅಂದ್ರೆ...?

''ನನಗೆ ಈ ರೀತಿಯ ಕಷ್ಟಗಳು ಬರ್ತಿರೋದು ಒಂದು ಸಮುದ್ರವಿದ್ದಂತೆ. ಅದನ್ನ ನಾನು ಎದುರಿಸುತ್ತೇನೆ. ಆ ಸಮುದ್ರದಲ್ಲಿ ಎಷ್ಟೇ ಕಷ್ಟ ಇದ್ರೂ ಈಜುತ್ತೇನೆ. ಕೊಳ ಎನ್ನುವುದು ತುಂಬ ಸುಲಭ. ಆರಾಮಗಿರುವುದು, ಏನೇ ಕಷ್ಟ ಬಂದ್ರು ಮುಳುಗಲ್ಲ. ಸಮುದ್ರ ಅಂದ್ಮೇಲೆ ಕಷ್ಟವನ್ನ ಗೆಲ್ಲುತ್ತೇವೆ'' ನಾನು ಹೇಳಿದ್ದು ಇದು. ಆದ್ರೆ, ಬೇರೆಯವರೂ ಎಲ್ಲ ಏನೇನೋ ಅರ್ಥ ಕಲ್ಪಿಸಿಕೊಂಡರು'' - ಜೆ.ಕೆ, ನಟ

ಜೆ.ಕೆ, ಸಂಯುಕ್ತ ಅವರನ್ನು ಪತ್ತೆ ಹಚ್ಚಿ ಸೂಕ್ತ ಬಹುಮಾನ ಗೆಲ್ಲಿ

ಕನ್ನಡಕ್ಕೆ ನನ್ನ ಪ್ರಾಮುಖ್ಯತೆ

''ನನಗೆ ಅವಕಾಶ ಸಿಕ್ಕಿಲ್ಲ ಎಂಬ ಕಾರಣಕ್ಕೆ ನಾನೇ ಒಂದು ಸಿನಿಮಾ ಮಾಡುತ್ತಿದ್ದೀನಿ. 'ಮೇ 1' ಅಂತ. ನಾನು ಮತ್ತು ನನ್ನ ಸ್ನೇಹಿತರೇ ನಿರ್ಮಾಣ ಮಾಡುತ್ತಿದ್ದೇವೆ. ಯಾಕಂದ್ರೆ, ನನಗೆ ಕನ್ನಡದ ಮೇಲಿರುವ ಅಭಿಮಾನ. ಪ್ರೀತಿ. ಇಲ್ಲೇ ಸಾಧನೆ ಮಾಡಬೇಕು ಎಂಬ ಛಲ'' - ಜೆ.ಕೆ, ನಟ

ನನಗೆ ಇಲ್ಲೇ ಸಾಧಿಸುವ ಹಂಬಲ

''2009 ರಿಂದಲೂ ಸಣ್ಣಪುಟ್ಟ ಪಾತ್ರಗಳನ್ನ ಮಾಡುತ್ತಾ ನಾನು ಬಂದಿದ್ದೀನಿ. ಹೌದು, ನನಗೆ ಅವಕಾಶ ಕೊಟ್ಟಿದ್ದು 'ಅಶ್ವಿನಿ ನಕ್ಷತ್ರ' ಧಾರಾವಾಹಿ. ಅದರಿಂದಲೇ ನನಗೆ ಗೌರವ, ಸ್ಟಾರ್ ಪಟ್ಟ ಸಿಕ್ಕಿದ್ದು. ಆದ್ರೆ, ಈ ಮಧ್ಯೆ ಇಂತಹ ಅಪವಾದಗಳು ಬಂದ್ರೆ ತುಂಬ ಬೇಸರವಾಗುತ್ತೆ. ನಾನು ಹೇಳಿದ್ದೇ ತಪ್ಪು ಗ್ರಹಿಸಬೇಡಿ ಕನ್ನಡಿಗರನ್ನ ಉಳಿಸಿ.'' -ಜೆ.ಕೆ

'ಫಿಲ್ಮಿಬೀಟ್'ಗೆ ಸೂಪರ್ ಸ್ಟಾರ್ ಜೆ.ಕೆ ಎಕ್ಸ್ ಕ್ಲೂಸಿವ್ ಸಂದರ್ಶನ

ಜೆ.ಕೆ ಮಾತನಾಡಿರುವ ವಿಡಿಯೋ ನೋಡಿ

English summary
Kannada Actor Karthik Jayaram (JK) Has give Clarification About His Facebook Post. ನಟ ಕಾರ್ತಿಕ್ ಜಯರಾಂ ತಾವು ಹಾಕಿದ್ದ ಫೇಸ್ ಬುಕ್ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada