For Quick Alerts
  ALLOW NOTIFICATIONS  
  For Daily Alerts

  'ಹೆಬ್ಬುಲಿ' ಕಿಚ್ಚನ ಮತ್ತೊಂದು ಶಿಕಾರಿ ಕಬೀರ್ ದುಹಾನ್

  By Suneetha
  |

  ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ 'ಹೆಬ್ಬುಲಿ' ಚಿತ್ರದ ಶೂಟಿಂಗ್ ಕೆಲಸಗಳು ಬಹಳ ಜೋರಾಗೇ ನಡೆಯುತ್ತಿದೆ. ಈಗಾಗಲೇ ಸುದೀಪ್ ಅವರ ಫಸ್ಟ್ ಲುಕ್ ಮೂಲಕ ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ಭರವಸೆಯನ್ನು ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.

  ಅದಕ್ಕೆ ತಕ್ಕಂತೆ ಚಿತ್ರದಲ್ಲಿ ಅಮಲಾ ಪೌಲ್, ರವಿಚಂದ್ರನ್, ಖಳನಟ ರವಿ ಕಿಶನ್ ['ಹೆಬ್ಬುಲಿ'ಯಲ್ಲಿ ಸುದೀಪ್ ಗೆ ಎದುರಾಗಲಿರುವ ವಿಲನ್ ಇವರೇ] ಮುಂತಾದ ಘಟಾನುಘಟಿಗಳೇ ಇದ್ದಾರೆ ಅನ್ನೋದು ಇನ್ನೊಂದು ಪ್ಲಸ್ ಪಾಯಿಂಟ್. ಸುದೀಪ್ ಅವರ ಫಸ್ಟ್ ಲುಕ್ ನೋಡಿದವರು, ಚಿತ್ರದಲ್ಲಿ ಹೀರೋನೇ ಹೀಗಿದ್ದರೆ, ಇನ್ನು ವಿಲನ್ ಹೇಗಿರಬಹುದು ಅನ್ನೋ ಸಣ್ಣ ಕುತೂಹಲ ಕೂಡ ಇಟ್ಟುಕೊಂಡಿದ್ದಾರೆ.

  ಅಂದಹಾಗೆ ಸುದೀಪ್ ಅವರ ಸಿನಿಮಾ ಅಂದ್ರೆ ಯಾವಾಗಲೂ 'ಆರ್ಮುಗಂ' ರವಿಶಂಕರ್ ಅವರು ಇದ್ದೇ ಇರುತ್ತಾರೆ. ಸುದೀಪ್ ಗರಡಿಯಲ್ಲಿ ಪಳಗಿದ ರವಿಶಂಕರ್ ಅವರಿಗೆ ಸುದೀಪ್ ಅಂದ್ರೆ ಏನೋ ಒಂಥರಾ ಪ್ರೀತಿ. ಕಿಚ್ಚ ಸುದೀಪ್ ಅವರ 'ಕೋಟಿಗೊಬ್ಬ 2' ಚಿತ್ರದಲ್ಲೂ ರವಿಶಂಕರ್ ಖಳನಟನ ಪಾತ್ರ ವಹಿಸಿದ್ದಾರೆ.

  ಆದರೆ ಈ ಬಾರಿ 'ಹೆಬ್ಬುಲಿ' ಚಿತ್ರದಲ್ಲಿ ಮಾತ್ರ ಹಾಗಿಲ್ಲ, ರವಿಶಂಕರ್ ಅವರಿಗೆ ಈ ಚಿತ್ರದಲ್ಲಿ ಖಳನಟನ ಪಾತ್ರವಿಲ್ಲ. ವಿಶೇಷವಾಗಿ ಈ ಚಿತ್ರಕ್ಕಾಗಿ ಖಳನಟರನ್ನು ಪರಭಾಷೆಯಿಂದ ಆಮದು ಮಾಡಿಕೊಳ್ಳಲಾಗಿದೆ.['ಹೆಬ್ಬುಲಿ'ಯಲ್ಲಿ ಅಮಲಾ ಮಾಡಲಿರುವ ಪಾತ್ರ ಏನಿರಬಹುದು?]

  ಅದರಲ್ಲಿ ಒಬ್ಬ ಖಳನಟ ಈಗಾಗಲೇ ಶೂಟಿಂಗ್ ಗಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ ಅವರು ಯಾರು ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ದಕ್ಷಿಣ ಭಾರತದ ಸ್ಟೈಲಿಷ್ ಖಳನಟ

  ದಕ್ಷಿಣ ಭಾರತದ ಸ್ಟೈಲಿಷ್ ಖಳನಟ

  ಇವರು ದಕ್ಷಿಣ ಭಾರತದ ಖ್ಯಾತ ಹಾಗೂ ಸಖತ್ ಸ್ಟೈಲಿಷ್ ಖಳನಟ ಕಬೀರ್ ದುಹಾನ್ ಸಿಂಗ್. ಈಗಾಗಲೇ ಹಲವಾರು ತಮಿಳು-ತೆಲುಗು ಸಿನಿಮಾಗಳಲ್ಲಿ ಮಿಂಚಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

  ಮಾಡೆಲ್ ಆಗಿದ್ದ ಕಬೀರ್

  ಮಾಡೆಲ್ ಆಗಿದ್ದ ಕಬೀರ್

  ಚಿತ್ರರಂಗಕ್ಕೆ ಕಾಲಿಡುವ ಮೊದಲು ಕಬೀರ್ ದುಹಾನ್ ಸಿಂಗ್ ಅವರು ಮಾಡೆಲಿಂಗ್ ಮಾಡುತ್ತಿದ್ದು, ಹಲವಾರು ಫ್ಯಾಶನ್ ಶೋಗಳಲ್ಲಿ ಭಾಗವಹಿಸಿದ್ದರು. ಇವರು ಮೊದಲು ಖಳನಟನಾಗಿ ಕಾಣಿಸಿಕೊಂಡಿದ್ದು, ತೆಲುಗು ನಟ ಗೋಪಿಚಂದ್ ಅವರ 'ಜಿಲ್' ಚಿತ್ರದಲ್ಲಿ.

  ಕನ್ನಡದಲ್ಲಿ ಮೊದಲ ಸಿನಿಮಾ

  ಕನ್ನಡದಲ್ಲಿ ಮೊದಲ ಸಿನಿಮಾ

  ಕನ್ನಡದ ಖ್ಯಾತ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜೊತೆ 'ಹೆಬ್ಬುಲಿ' ಚಿತ್ರದಲ್ಲಿ ಖಳನಟನಾಗಿ ಮಿಂಚುವ ಮೂಲಕ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಬಂದಿಳಿದಿರುವ ನಟ ಕನ್ನಡದಲ್ಲಿ ಸುದೀಪ್ ಅವರ ಜೊತೆ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ಫುಲ್ ಖುಷ್ ಆಗಿದ್ದಾರೆ.

  ಹೆಸರು ತಂದುಕೊಟ್ಟಿದ್ದು ತಮಿಳು ಸಿನಿಮಾ

  ಹೆಸರು ತಂದುಕೊಟ್ಟಿದ್ದು ತಮಿಳು ಸಿನಿಮಾ

  ತದನಂತರ ರವಿತೇಜಾ ಅವರ ಜೊತೆ ತೆಲುಗಿನ 'ಕಿಕ್ 2' ಹಾಗೂ 'ಬೆಂಗಾಲ್ ಟೈಗರ್', 'ಸರ್ದಾರ್ ಗಬ್ಬರ್ ಸಿಂಗ್', 'ಡಿಕ್ಟೇಟರ್', ಮುಂತಾದ ಸಿನಿಮಾದಲ್ಲಿ ಮಿಂಚಿದರು. ಆದರೆ ಇವರಿಗೆ ಹೆಸರು ತಂದುಕೊಟ್ಟ ಸಿನಿಮಾ ತಮಿಳಿನ 'ವೇದಲಂ' ಇದರಲ್ಲಿ ನಟ ಅಜಿತ್ ಅವರು ನಾಯಕನಾಗಿ ಮಿಂಚಿದ್ದರು. ತದನಂತರ ಇವರು ಸ್ಟೈಲಿಷ್ ಖಳನಟ ಅಂತಾನೇ ಫೇಮಸ್ ಆದರು. ಅಲ್ಲದೇ ಇವರು ಬಾಲಿವುಡ್ ನಲ್ಲೂ ಮಿಂಚಿದ್ದು, ಶೈನಿ ಅಹುಜ ಅವರ ಪ್ರಾಜೆಕ್ಟ್ ನಲ್ಲಿ ಕೈ ಜೋಡಿಸಿದ್ದರು.

  ನಟಿಸಿದ ಸಿನಿಮಾಗಳು ಹಿಟ್

  ನಟಿಸಿದ ಸಿನಿಮಾಗಳು ಹಿಟ್

  ಇವರು ಖಳನಟನಾಗಿ ನಟಿಸಿದ ಬಹುತೇಕ ಸಿನಿಮಾಗಳು ಹಿಟ್ ಆಗಿದ್ದು, ಸದ್ಯಕ್ಕೆ ಎಲ್ಲಾ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಬಹು ಬೇಡಿಕೆಯ ಖಳನಟನಾಗಿ ಹೊರಹೊಮ್ಮಿದ್ದಾರೆ. ಮಾತ್ರವಲ್ಲದೇ ಮೋಸ್ಟ್ ಬ್ಯುಸಿಯೆಸ್ಟ್ ಖಳನಟನಾಗಿದ್ದಾರೆ.

  English summary
  Popular Southern actor Kabir Duhan Singh joining the ensemble star cast in Kannada Actor Sudeep's Kannada Movie 'Hebbuli'. Actor ravichandran, Actress Amala Paul in the lead role. The movie is directed by S.Krishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X