»   » ಕಾಲಿನ ಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾದ ಕಮಲ್ ಹಾಸನ್

ಕಾಲಿನ ಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾದ ಕಮಲ್ ಹಾಸನ್

Posted By:
Subscribe to Filmibeat Kannada

ಖ್ಯಾತ ನಟ ಕಮಲ್ ಹಾಸನ್ ಅವರು ಮೆಟ್ಟಿಲು ಇಳಿಯುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಜಾರಿ ಬಿದ್ದ ಸಂದರ್ಭದಲ್ಲಿ ಮೂಳೆ ಮುರಿದ ಪರಿಣಾಮ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜುಲೈ 14, ಗುರುವಾರದಂದು ನಟ ಕಮಲ್ ಹಾಸನ್ ಚೆನ್ನೈನಲ್ಲಿರುವ ತಮ್ಮ ಕಛೇರಿ ಬಳಿ ಮೆಟ್ಟಿಲಿಳಿಯುತ್ತಿದ್ದ ಸಂದರ್ಭದಲ್ಲಿ ಜಾರಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಚೆನ್ನೈ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರೆ.[ಪುಷ್ಪಕವಿಮಾನದಲ್ಲಿ ಟ್ವಿಟ್ಟರ್ ಊರಿಗೆ ಬಂದ ರಾಮ ಶಾಮ ಭಾಮ!]

Actor Kamal Hassan admitted to hospital with leg fracture

ಬಲಗಾಲಿನ ಮೂಳೆ ಮುರಿದ ಕಾರಣ ಅಪೋಲೋ ಆಸ್ಪತ್ರೆಯ ವೈದ್ಯರು ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಲಂಡನ್ ಚಲನಚಿತ್ರೋತ್ಸವದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಬೇಕಿದ್ದ 'ಉಳಗನಾಯಗನ್' ಕಮಲ್ ಹಾಸನ್ ಅವರು ಇದೀಗ 'ಲಂಡನ್ ಭಾರತೀಯ ಚಲನಚಿತ್ರೋತ್ಸವದಲ್ಲಿ' ಪಾಲ್ಗೊಳ್ಳುತ್ತಿಲ್ಲ.

ಕನ್ನಡದಲ್ಲಿ 'ರಾಮ ಶಾಮ ಭಾಮ' ಚಿತ್ರದಲ್ಲಿ ನಟಿಸಿದ್ದ ನಟ ಕಮಲ್ ಹಾಸನ್ ಅವರು ಕನ್ನಡಿಗರಿಗೂ ಮೆಚ್ಚಿನ ನಟರಾಗಿದ್ದಾರೆ.[ರಾಷ್ಟ್ರಪ್ರಶಸ್ತಿ ವಾಪಸ್: ಕಮಲ್ ಹಾಸನ್ ಹೇಳಿದ್ದೇನು?]

ಕನ್ನಡದ ನಟ ಕಮ್ ನಿರ್ಮಾಪಕ ರಮೇಶ್ ಅರವಿಂದ್ ಅವರ ಆಪ್ತ ಗೆಳೆಯ ಆಗಿರುವ ಕಮಲ್ ಹಾಸನ್ ಅವರನ್ನು ರಮೇಶ್ ಅವರ 100ನೇ ಸಿನಿಮಾ 'ಪುಷ್ಪಕ ವಿಮಾನ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಕರೆಸುವ ಬಗ್ಗೆ ಚಿಂತಿಸಲಾಗಿತ್ತು.['ನಾಯಗನ್' ಕಮಲ್ ಜೊತೆ ಮಣಿರತ್ನಂ ಹೊಸ ಚಿತ್ರ!]

Actor Kamal Hassan admitted to hospital with leg fracture

ಆದರೆ ಇದೀಗ ಇಂತಹ ಅಚಾತುರ್ಯ ನಡೆದ ಕಾರಣ ನಟ ಕಮಲ್ ಹಾಸನ್ ಅವರಿಗೆ ಸಂಪೂರ್ಣ ಬೆಡ್ ರೆಸ್ಟ್ ಮಾಡಲು ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.['ಹೆಬ್ಬುಲಿ' ಸುದೀಪ್ ಗೆ ಅನಾರೋಗ್ಯ: ಅಪೋಲೋ ಆಸ್ಪತ್ರೆಗೆ ದಾಖಲು]

ಸದ್ಯಕ್ಕೆ ನಟ ಕಮಲ್ ಹಾಸನ್ ಮತ್ತು ಮಗಳು ನಟಿ ಶ್ರುತಿ ಹಾಸನ್ ಒಂದಾಗಿ ಕಾಣಿಸಿಕೊಂಡಿರುವ 'ಸಬಾಶ್ ನಾಯ್ಡು' ಚಿತ್ರದ ಶೂಟಿಂಗ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

English summary
Actor Kamal Hassan slipped and fell on the stairs at his office (July 14th) and has fractured his leg. Now Actor admitted Apollo Hospital in Chennai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada