»   » 20 ವರ್ಷದ ಗೆಳೆಯನ ಅಗಲಿಕೆಗೆ ಕಂಬನಿ ಮಿಡಿದ ಜೆ.ಕೆ

20 ವರ್ಷದ ಗೆಳೆಯನ ಅಗಲಿಕೆಗೆ ಕಂಬನಿ ಮಿಡಿದ ಜೆ.ಕೆ

Posted By:
Subscribe to Filmibeat Kannada

ನಟ ಧ್ರುವ ಶರ್ಮಾ ಅಗಲಿಕೆಗೆ ಕನ್ನಡ ನಟ ಜಯರಾಮ್ ಕಾರ್ತಿಕ್ (ಜೆ.ಕೆ) ಕಂಬನಿ ಮಿಡಿದಿದ್ದಾರೆ. ಅಕಾಲಿಕ ಮರಣಕ್ಕೆ ತುತ್ತಾದ ಸ್ನೇಹಿತನ ನೆನೆದು ಭಾವುಕರಾಗಿದ್ದಾರೆ. ಜೆ.ಕೆ ಮತ್ತು ಧ್ರುವ ಶರ್ಮಾ ಅವರದ್ದು ಸುಮಾರು 20 ವರ್ಷಗಳ ಸ್ನೇಹ. ಹೀಗಾಗಿ, 20 ವರ್ಷಗಳ ಗೆಳೆಯನನ್ನ ಕಳೆದುಕೊಂಡ ಜೆ.ಕೆ, ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬೇಸರ ವ್ಯಕ್ತಪಡಿಸಿರುವ ಜೆ.ಕೆ ''ಧ್ರುವ ಶರ್ಮಾ ಮತ್ತು ನನ್ನದು ಉತ್ತಮ ಸ್ನೇಹ. ಹಲವು ಜನಗಳಿಗೆ ಸ್ಪೂರ್ತಿ ಆಗಿದ್ದ. ನನ್ನ ಕೆಲಸಗಳಿಗೆ ಸದಾ ಬೆಂಬಲವಾಗಿರುತ್ತಿದ್ದ. 'ಕರ್ನಾಟಕ ಬುಲ್ಡೋಜರ್ಸ್' ತಂಡದ ಆಧಾರಸ್ತಂಭ ಈಗ ನೆನಪು ಮಾತ್ರ. ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ'' ಎಂದಿದ್ದಾರೆ.

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ್ರಾ ನಟ ಧ್ರುವ ಶರ್ಮಾ.?

Actor Karthik jayaram Express condolences to Dhruva sharma death

ಅಂದ್ಹಾಗೆ, ಜೆಕೆ ಮತ್ತು ಧ್ರುವ ಶರ್ಮಾ ಇಬ್ಬರು ಒಟ್ಟಿಗೆ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. ಸಿಸಿಎಲ್ ಕ್ರಿಕೆಟ್ ನಲ್ಲಿ 'ಕರ್ನಾಟಕ ಬುಲ್ಡೋಜರ್ಸ್' ತಂಡದ ಪರವಾಗಿ ಒಟ್ಟಿಗೆ ಆಟವಾಡಿದ್ದಾರೆ. ಇದನ್ನ ಹೊರತು ಪಡಿಸಿ ಇಬ್ಬರದ್ದು 20 ವರ್ಷಗಳ ಸ್ನೇಹ ಅಂದ್ರೆ ನೀವೇ ಊಹಿಸಿಕೊಳ್ಳಿ. ಇವರಿಬ್ಬರ ಬಾಂಧವ್ಯ ಹೇಗಿತ್ತು ಎಂಬುದನ್ನ.....

Sa Kannada movie exlusive; Karthik Jayaram Interview- Exclusive

ನಟ ಧ್ರುವ ಶರ್ಮಾ ಅಭಿನಯಿಸಿದ್ದ ಕನ್ನಡ ಚಿತ್ರಗಳಿವು

English summary
Actor Karthik jayaram has taken his Facebook account to express his condolences to Dhruva sharma death

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada