»   » ಫುಲ್ 'ZOOಮ್' ನಲ್ಲಿ ಕಾಶೀನಾಥ್ ಮತ್ತೆ ಎಂಟ್ರಿ

ಫುಲ್ 'ZOOಮ್' ನಲ್ಲಿ ಕಾಶೀನಾಥ್ ಮತ್ತೆ ಎಂಟ್ರಿ

Posted By:
Subscribe to Filmibeat Kannada

ಕನ್ನಡ ಸಿನಿ ಪ್ರಿಯರಿಗೆ ಹೊಸ 'ಅನುಭವ' ನೀಡಿದ ನಿರ್ದೇಶಕ ಕಮ್ ನಟ ಕಾಶೀನಾಥ್. ಮೂರು ದಶಕಗಳಲ್ಲಿ ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನ ನಿರ್ದೇಶಿಸಿ, ನಟಿಸಿರುವ ಕಾಶೀನಾಥ್ ಇತ್ತೀಚೆಗೆ ಗಾಂಧಿನಗರದಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ.

ತಮ್ಮ ಮಗ ಅಭಿಮನ್ಯು ಅಭಿನಯದ '12 AM ಮಧ್ಯರಾತ್ರಿ' ಮತ್ತು 'ಮಿಸ್ಟರ್ 420' ಚಿತ್ರಗಳನ್ನ ಬಿಟ್ಟರೆ, ಕಾಶೀನಾಥ್ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡು ಬರೋಬ್ಬರಿ ಎರಡು ವರ್ಷಗಳಾಗಿವೆ.

Actor Kashinath to play special role in Ganesh starrer Zoom

ತೆರೆಮೇಲೆ ಕಾಶೀನಾಥ್ ಕಮಾಲ್ ನ ಮಿಸ್ ಮಾಡಿಕೊಂಡವರಿಗೆ ಗೋಲ್ಡನ್ ಸ್ಡಾರ್ ಗಣೇಶ್ ದೊಡ್ಡ ಉಡುಗೊರೆ ನೀಡಿದ್ದಾರೆ. ತಮ್ಮ ಮುಂದಿನ ಚಿತ್ರ 'ZOOಮ್' ನಲ್ಲಿ ಕಾಶೀನಾಥ್ ಗೆ ಮತ್ತೆ ಬಣ್ಣ ಹಚ್ಚಿಸಿದ್ದಾರೆ ಗಣೇಶ್.

'ZOOಮ್' ಚಿತ್ರದ ಸ್ಪೆಷಲ್ ಪಾತ್ರವೊಂದರಲ್ಲಿ ಕಾಶೀನಾಥ್ ಮಿಂಚಲಿದ್ದಾರೆ. ವಿಚಿತ್ರ ಗೆಟಪ್ ನಲ್ಲಿ ಕಾಶೀನಾಥ್ ಕಾಣಿಸಿಕೊಂಡಿರುವ ಫೋಟೋ ನೋಡಿದ್ರೆ, 'ZOOಮ್'ನಲ್ಲಿ ಕಾಶೀನಾಥ್ ಕಾಮಿಡಿ ಇಂಜೆಕ್ಷನ್ ನೀಡುವುದು ಪಕ್ಕಾ ಅನ್ಸುತ್ತೆ. [ಈ ಜೋಡಿ ಯಾರು ಗೊತ್ತಾಯ್ತಾ..? 'ZOOಮ್' ಮಾಡಿ ನೋಡಿ...]

Actor Kashinath to play special role in Ganesh starrer Zoom

ಕಾಶೀನಾಥ್ ಜೊತೆ ಡಿಫರೆಂಟ್ ಗೆಟಪ್ ನಲ್ಲಿ ಸಾಧು ಮಹಾರಾಜ್ ಇರೋದ್ರಿಂದ ನಾವು ನಿಮಗೆ ಬಿಡಿಸಿ ಹೇಳೋದೇ ಬೇಡ ಅಲ್ವೇ. ಚಿತ್ರರಂಗದಿಂದ ಕೊಂಚ ಬಿಡುವು ಮಾಡಿಕೊಂಡಿದ್ದ ಕಾಶೀನಾಥ್ ರ ಮನವೊಲಿಸಿ, ವಿಶೇಷ ಪಾತ್ರವೊಂದಕ್ಕೆ ಕರೆತರುವಲ್ಲಿ ನಿರ್ದೇಶಕ ಪ್ರಶಾಂತ್ ರಾಜ್ ಗೆದ್ದಿದ್ದಾರೆ.

ಈಗಾಗಲೇ ಬೆಂಗಳೂರು ಸುತ್ತ ಮುತ್ತ 'ZOOಮ್' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕಾಶೀನಾಥ್-ಸಾಧು ಜೊತೆಗೆ ಗಣೇಶ್ ಕಾಮಿಡಿ ಕಿಕ್ ಪಡೆಯುವುದಕ್ಕೆ 'ZOOಮ್' ರಿಲೀಸ್ ಆಗುವರೆಗೂ ನೀವು ಕಾಯಲೇಬೇಕು. (ಫಿಲ್ಮಿಬೀಟ್ ಕನ್ನಡ)

English summary
After a long gap, Kannada Actor Kashinath has been roped in to play a special character in Golden Star Ganesh and Radhika Pandit starrer 'Zoom', which is directed by Prashant Raj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada