ಕಷ್ಟದಲ್ಲಿದ್ದ ಕುಟುಂಬಕ್ಕೆ ನೆರವಾದ ಸುದೀಪ್: ಆಟೋ ಚಾಲಕನ ತಂಗಿ ಮದುವೆಗೆ ಕಿಚ್ಚನ ಸಹಾಯ
ಕಷ್ಟದಲ್ಲಿರುವ ಅದೆಷ್ಟೊ ಕುಟುಂಬಕ್ಕೆ ಕಿಚ್ಚ ಸುದೀಪ್ ನೆರವಾಗಿದ್ದಾರೆ. ಕಷ್ಟ ಅಂತ ಬಂದವರನ್ನು ಕಿಚ್ಚ ಯಾವತ್ತು ಬರಿಗೈಯಲ್ಲಿ ವಾಪಸ್ ಕಳುಹಿಸಿಲ್ಲ. ಈಗ ಕಿಚ್ಚ ಸುದೀಪ್ ಲಾಕ್ ಡೌನ್ ವೇಳೆ ಕಷ್ಟದಲ್ಲಿದ್ದ ಆಟೋಚಾಲಕನ ಕುಟುಂಬಕ್ಕೆ ನೆರವಿಗೆ ಬಂದಿದ್ದಾರೆ.
Recommended Video
ತಿಲಕ್ ನಗರದ ರಿಯಾಜ್ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಲಾಕ್ ಡೌನ್ ನಿಂದ ರಿಯಾಜ್ ಕುಟುಂಬ ಆರ್ಥಿಕವಾಗಿ ತುಂಬಾ ಸಂಕಷ್ಟಕ್ಕೆ ಸಿಲುಕಿತ್ತು. ಅಲ್ಲದೆ ಲಾಕ್ ಡೌನ್ ಗು ಮುನ್ನ ರಿಯಾಸ್ ತಂಗಿ ನಸ್ರೀನ್ ಮದುವೆ ಫಿಕ್ಸ್ ಮಾಡಿದ್ದರು. ಈ ಸಮಯದಲ್ಲಿ ತಂದೆಯನ್ನು ಕಳೆದುಕೊಂಡು ಕುಟುಂಬ ಮತ್ತಷ್ಟು ಕುಗ್ಗಿಹೋಗಿತ್ತು. ಲಾಕ್ ಡೌನ್ ನಿಂದ ಕೆಲಸ ವಿಲ್ಲದೆ ರಿಯಾಜ್ ಕುಟುಂಬಕ್ಕೆ ದಿಕ್ಕೆ ತೋಚದಂತಾಗಿತ್ತು.
ಮದುವೆ ಖರ್ಚಿಗೂ ಹಣ ಹೊಂದಿಸಲು ಸಾಧ್ಯವಾಗದೆ ಕಂಗಾಲಾಗಿದ್ದ ಕುಟುಂಬಕ್ಕೆ ನೆರವಿಗೆ ಬಂದಿದ್ದು ಕಿಚ್ಚ ಸುದೀಪ್. ರಿಯಾಜ್ ಕುಟುಂಬ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಮೊರೆ ಹೋಗಿದ್ದಾರೆ. ಸಹಾಯಮಾಡುವಂತೆ ಕೇಳಿಕೊಂಡಿದ್ದಾರೆ.

ವಿಷಯಗೊತ್ತಾಗುತ್ತಿದ್ದಂತೆ ಸುದೀಪ್ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಚಾರಿಟಿ ಮೂಲಕ ಕುಟುಂಬಕ್ಕೆ ಹಣದ ಸಹಾಯ ಜೊತೆಗೆ ರಿಯಾನ್ ತಂಗಿಯ ಮದುವೆಯ ಖರ್ಚನ್ನು ನೋಡಿಕೊಂಡಿದ್ದಾರೆ. ಸುದೀಪ್ ಸಹಾಯಕ್ಕೆ ರಿಯಾಜ್ ಕುಟುಂಬ ತುಂಬಾ ಸಂತಸಪಟ್ಟಿದ್ದಾರೆ.
ಮದುವೆಯಾಗುತ್ತಿರುವ ನಸ್ರೀನ್ ಭಾವುಕರಾಗಿದ್ದಾರೆ. ಸಹಾಯ ಹಸ್ತ ಚಾಚಿದ ಸುದೀಪ್ ಸುದೀಪ್ ಅಣ್ಣನಿಗೆ ಧನ್ಯವಾದ ತಿಳಿಸಿದ್ದಾರೆ. ಅಂದ್ಹಾಗೆ ಸುದೀಪ್ ಚಾರಿಟೇಬಲ್ ಸೊಸೈಟಿ ಈಗಾಗಲೆ ಸಾಕಷ್ಟು ಮಂದಿಗೆ ನೆರವಾಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಮಂದಿಗೆ ಸಹಾಯ ಮಾಡಿದ್ದಾರೆ.


Click it and Unblock the Notifications











