»   » ಕಿಚ್ಚ ಸುದೀಪ್ ಬಗ್ಗೆ ಹೇಳುವುದಕ್ಕೆ ಬೇಕಾದಷ್ಟಿದೆ.! ಇಲ್ಲಿ ಕೇಳಿ..

ಕಿಚ್ಚ ಸುದೀಪ್ ಬಗ್ಗೆ ಹೇಳುವುದಕ್ಕೆ ಬೇಕಾದಷ್ಟಿದೆ.! ಇಲ್ಲಿ ಕೇಳಿ..

Posted By:
Subscribe to Filmibeat Kannada
ಟ್ವಿಟ್ಟರ್ ನಲ್ಲಿ 1.4 ಮಿಲಿಯನ್ ಫ್ಯಾನ್ ಫಾಲೋವರ್ಸ್ ಹೊಂದಿರುವ ಕಿಚ್ಚ ಸುದೀಪ್ | Filmibeat Kannada

ಕೆಲ ವ್ಯಕ್ತಿಗಳೇ ಹಾಗೆ.. ಅವರು ಏನು ಮಾಡಿದರೂ ಸುದ್ದಿ ಆಗುತ್ತದೆ. ಅಂಥವರ ಸಾಲಿಗೆ ಸೇರಿಕೊಳ್ಳುವುದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.

ಸುದೀಪ್ ವ್ಯಕ್ತಿತ್ವವೇ ಹಾಗೆ.. ಅವರನ್ನು ಅಭಿಮಾನಿಗಳು ಎಷ್ಟರ ಮಟ್ಟಿಗೆ ಫಾಲೋ ಮಾಡುತ್ತಾರೆ ಅಂದರೆ ಇವರು ಏನೇ ಮಾಡಿದರೂ ಸುದ್ದಿ ಆಗುತ್ತಲೇ ಇದೆ. ಈಗ ಕಿಚ್ಚನ ಬಗ್ಗೆ ಈ ರೀತಿಯ ಮಾತು ಯಾಕೆ ಅಂದರೆ ಸುದೀಪ್ ಬಗ್ಗೆ ಹೇಳುವುದಕ್ಕೆ ಸಾಕಷ್ಟಿದೆ.

ಕಿಚ್ಚನಿಗೆ ಮತ್ತಷ್ಟು ಅಭಿಮಾನಿಗಳು ಹೆಚ್ಚಾಗಿದ್ದಾರೆ. ಇದೇ ಖುಷಿಯಲ್ಲಿ ಸುದೀಪ್ ತನ್ನ ಅಭಿಮಾನಿ ದೇವರುಗಳಿಗೆ ಸಂದೇಶ ರವಾನಿಸಿದ್ದಾರೆ. ಇದರ ಜೊತೆಯಲ್ಲಿ ಸಮಾಜಮುಖಿ ಕಾರ್ಯಕ್ಕೂ ಸುದೀಪ್ ಮುಂದಾಗಿದ್ದಾರೆ. ಇದನ್ನೆಲ್ಲ ನೋಡಿ ಅಭಿಮಾನಿಗಳು ಚಾಚು ತಪ್ಪದೇ ಅವರನ್ನು ಪಾಲಿಸಲಿದ್ದಾರೆ. ಇದರ ಜೊತೆಗೆ ಮತ್ತೊಮ್ಮೆ ತಾನು ಸ್ನೇಹ ಜೀವಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ ಸುದೀಪ್.

ಸುದೀಪ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು ಇಲ್ಲಿದೆ ಓದಿ...

ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ

ಟ್ವಿಟ್ಟರ್ ನಲ್ಲಿ ಸುದೀಪ್ ಫಾಲೋವರ್ಸ್ ಒಂದು ಮಿಲಿಯನ್ ದಾಟಿದ್ದು ಗೊತ್ತೇ ಇದೆ. ಅದಾದ ನಂತರ ಈಗ 1.4 ಮಿಲಿಯನ್ ಅಭಿಮಾನಿಗಳು ಕಿಚ್ಚನ ಅಕೌಂಟ್ ನಲ್ಲಿದ್ದಾರೆ. ಇದರಿಂದ ಖುಷಿಯಾಗಿರುವ ಕಿಚ್ಚ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಅಭಿಮಾನಿಗಳಿಂದ ಕಿಚ್ಚನಿಗಾಗಿ, ಕಿಚ್ಚನಿಗೋಸ್ಕರ ವೆಬ್ ಸೈಟ್ ಮತ್ತು ಆಪ್

ಅಭಿಮಾನಿಗಳನ್ನು ಆಸ್ತಿ ಎಂದ ಕಿಚ್ಚ

1.4 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಖುಷಿಯಲ್ಲಿ ಕಿಚ್ಚ ಪ್ರೀತಿಯೇ ನನ್ನ ಆಸ್ತಿ ಎಂದಿದ್ದಾರೆ. ಯಾರಾದರೂ ಇಷ್ಟು ವರ್ಷ ನಿಮ್ಮ ಸಂಪಾದನೆಯೇನು ಅಂದರೆ ಅಪಾರ ಸಂಖ್ಯೆ ಅಭಿಮಾನಿಗಳನ್ನು ಪಡೆದಿರುವುದೇ ನನ್ನ ಆಸ್ತಿ ಎನ್ನುತ್ತೇನೆ ಎಂದು ಕಿಚ್ಚ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಕಿರುತೆರೆಯತ್ತ ಮುಖ ಮಾಡಿದ ಸ್ಯಾಂಡಲ್ ವುಡ್ ನ 'ನಕ್ಷತ್ರ'ಗಳು

ಪ್ರಕೃತಿ ಮಾತೆಗೆ ಶರಣಾದ್ರು ಕಿಚ್ಚ

ಸುದೀಪ್ ಸದ್ಯ ಅದಮ್ಯ ಚೇತನ ನಡೆಸುತ್ತಿರುವ ಸಸ್ಯಗ್ರಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ತಾವು ಕೂಡ ಸಸಿ ನೆಟ್ಟು ಸಾಮಾನ್ಯ ಜನರಿಗೆ ಹಾಗೂ ಅಭಿಮಾನಿಗಳಿಗೆ ಪರಿಸರ ಉಳಿಸಿ ಬೆಳಸಿ ಎನ್ನುವ ಸಂದೇಶ ರವಾನೆ ಮಾಡಿದ್ದಾರೆ .


'ಕಿಚ್ಚ'ನಿಂದ ಶುರುವಾಯ್ತು 'ಅಂಬಿ'ಗೆ ವಯಸ್ಸಿನ ಪಾಠ

ಸ್ನೇಹಿತನ ಮನೆಯಲ್ಲಿ ಅಭಿನಯ ಚಕ್ರವರ್ತಿ

ಸುದೀಪ್ ಸ್ನೇಹಜೀವಿ ಅದಕ್ಕಾಗಿಯೇ ಅವರ ಸುತ್ತಾ-ಮುತ್ತಾ ಸಾಕಷ್ಟು ಸ್ನೇಹಿತರು ಸದಾ ಜೊತೆಯಲ್ಲಿ ಇರ್ತಾರೆ. ಇತ್ತೀಚಿಗಷ್ಟೇ ಸುದೀಪ್ ನಟ ಚಂದನ್ ಮನೆಗೆ ಭೇಟಿ ನೀಡಿದ್ದಾರೆ. ಕೆಲ ಸಮಯ ಮನೆಯವರ ಜೊತೆ ಕಾಲ ಕಳೆದು ಬಂದಿದ್ದಾರೆ.

English summary
Interesting Facts about Kiccha Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada