For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ಕೋರಿಕೆಗೆ ಸ್ಪಂದನೆ: ವಿಕ್ಟೋರಿಯಾದಲ್ಲಿ ಕಿಲ್ಲರ್ ವೆಂಕಟೇಶ್ ಚಿಕಿತ್ಸೆ

  |

  Recommended Video

  ಸಾವು ಬದುಕಿನ ನಡುವೆ ನಟ ಕಿಲ್ಲರ್ ವೆಂಕಟೇಶ್ ಹೋರಾಟ

  ಕನ್ನಡದ ಖ್ಯಾತ ಪೋಷಕ ನಟ ಕಿಲ್ಲರ್ ವೆಂಕಟೇಶ್ ಆರೋಗ್ಯ ಸ್ಥಿತಿಯ ಬಗ್ಗೆ ನಟ ಜಗ್ಗೇಶ್ ನಿನ್ನೆ (ಫೆಬ್ರವರಿ 18) ಟ್ವೀಟ್ ಮಾಡಿದ್ದರು. ಇದೀಗ ಅವರ ಟ್ವೀಟ್ ಗೆ ಸ್ಪಂದನೆ ಸಿಕ್ಕಿದ್ದು, ಕಿಲ್ಲರ್ ವೆಂಕಟೇಶ್ ಚಿಕಿತ್ಸೆಗೆ ಸಹಕಾರ ಸಿಕ್ಕಿದೆ.

  ಕಿಲ್ಲರ್ ವೆಂಕಟೇಶ್ ಸಹಾಯಕ್ಕೆ ಆರೋಗ್ಯ ಮಂತ್ರಿ ಶ್ರೀರಾಮುಲು ಪಿಎ ಜಗದೀಶ್, ರಮೇಶ್ ಹಾಗೂ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಬಂದಿದ್ದಾರೆ. ಕಿಲ್ಲರ್ ವೆಂಕಟೇಶ್ ರಿಗೆ ವಿಕ್ಟೋರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.

  ಚಿಕಿತ್ಸೆಗೂ ಹಣ ಇಲ್ಲ: ಸಾವು ಬದುಕಿನ ನಡುವೆ ನಟ ಕಿಲ್ಲರ್ ವೆಂಕಟೇಶ್ ಹೋರಾಟಚಿಕಿತ್ಸೆಗೂ ಹಣ ಇಲ್ಲ: ಸಾವು ಬದುಕಿನ ನಡುವೆ ನಟ ಕಿಲ್ಲರ್ ವೆಂಕಟೇಶ್ ಹೋರಾಟ

  ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ''ಧನ್ಯವಾದಗಳು ಮಂತ್ರಿ ಶ್ರೀರಾಮುಲು ಪಿಎ ಜಗದೀಶ್ ಹಾಗೂ ರಮೇಶ್ ಗೆ. ವಿಕ್ಟೋರಿಯಾ ಆಸ್ಪತ್ರೆ ಡಾ ಗಿರೀಶ್ ಹಾಗೂ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ರವರಿಗೆ. ನನ್ನ ಕರೆಗೆ ಸ್ಪಂದಿಸಿ ಸರಿ ರಾತ್ರಿಯಲ್ಲಿ ವಿಕ್ಟೋರಿಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಪಾಸಣೆ ಶುಶ್ರೂಷೆ ಮಾಡುತ್ತಿದ್ದಾರೆ. ಸ್ನೇಹಕ್ಕಾಗಿ ನನ್ನ ಅಳಿಲು ಪ್ರಯತ್ನ. ಹರಿ ಓಂ'' ಎಂದು ಬರೆದುಕೊಂಡಿದ್ದಾರೆ.

  ನಟ ಕಿಲ್ಲರ್ ವೆಂಕಟೇಶ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಅವರ ಪರಿಸ್ಥಿತಿ ಬಗ್ಗೆ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದರು. ಅಂದಹಾಗೆ, ಕಿಲ್ಲರ್ ವೆಂಕಟೇಶ್ ಕನ್ನಡದಲ್ಲಿ 250ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ.

  English summary
  Kannada actor Killer Venkatesh getting treatment in victoria super speciality hospital bangalore. He is suffering from liver disease.
  Wednesday, February 19, 2020, 11:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X