For Quick Alerts
  ALLOW NOTIFICATIONS  
  For Daily Alerts

  ಸರ್ಜಾ - ಶ್ರುತಿ ಮೀಟೂ ಪ್ರಕರಣ : ತಪ್ಪು ಒಪ್ಪುಗಳ ಬಗ್ಗೆ ಕಿಶೋರ್ ಮಾತು

  |

  ಚಿತ್ರರಂಗದಲ್ಲಿ ಉಂಟಾಗಿರುವ ಮೀ ಟೂ ಗಲಾಟೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಅದರಲ್ಲಿಯೂ ನಟ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ಪ್ರಕರಣದಲ್ಲಿ ಇಬ್ಬರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

  ಈ ಘಟನೆಯ ಬಗ್ಗೆ ಈಗಾಗಲೇ ಚಿತ್ರರಂಗದ ಅನೇಕ ಗಣ್ಯರು ಮಾತನಾಡಿದ್ದಾರೆ. ಕೆಲವರು ಸರ್ಜಾಗೆ ಸಾಥ್ ನೀಡಿದ್ದರೆ, ಇನ್ನು ಕೆಲವರು ಶ್ರುತಿಗೆ ಬೆಂಬಲ ಸೂಚಿಸಿದ್ದರು. ಆದರೆ, ಈಗ ನಟ ಕಿಶೋರ್ ಈ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

  #ಮೀಟೂ ಆರೋಪ: ಹೈಕೋರ್ಟ್ ಮೊರೆ ಹೋದ ಅರ್ಜುನ್ ಸರ್ಜಾ #ಮೀಟೂ ಆರೋಪ: ಹೈಕೋರ್ಟ್ ಮೊರೆ ಹೋದ ಅರ್ಜುನ್ ಸರ್ಜಾ

  ''ಈ #METoo ಅಭಿಯಾನ ತನ್ನ ಧ್ಯೇಯವನ್ನು ಉಳಿಸಿಕೊಂಡರೆ ನಮ್ಮ ಕೆಲಸದ ಸ್ಥಳವನ್ನು ಆರೋಗ್ಯಕರ ಮತ್ತು ವೃತ್ತಿಪರವಾಗಿ ಮಾಡುವಲ್ಲಿ ಸಫಲವಾಗಲು ತಕ್ಕಮಟ್ಟಿಗೆ ಸಾಧ್ಯ ಎಂದೆಲ್ಲಾ ಯೋಚಿಸಿದ್ದೆ. ಆದರೆ, ಅದು ಈ ಬಾರಿ ನನ್ನನ್ನು ಬೆಚ್ಚಿಬೀಳಿಸಿ ನನ್ನ ಕೊರಳ ಪಟ್ಟಿ ಹಿಡಿದು ಒಳಕ್ಕೆಳೆದೊಯ್ದಿತ್ತು.'' ಎಂದು ಹೇಳಿರುವ ಕಿಶೋರ್ ಬಗ್ಗೆ ಅಭಿಪ್ರಾಯವನ್ನು ಪೂರ್ಣವಾಗಿ ಬರೆದುಕೊಂಡಿದ್ದಾರೆ. ಮುಂದೆ ಓದಿ....

  ಸರ್ಜಾ ಗುಣ ಮೆಚ್ಚಿದ ಕಿಶೋರ್

  ಸರ್ಜಾ ಗುಣ ಮೆಚ್ಚಿದ ಕಿಶೋರ್

  ''ರಾಜ್ಯಗಳಾದ್ಯಂತ ಜನರ ಪ್ರೀತಿಗೆ ಮಾತ್ರವಲ್ಲ ವೈಯುಕ್ತಿಕವಾಗಿ ನಾನೂ ತುಂಬ ಪ್ರೀತಿ ಗೌರವದಿಂದ ನೋಡುವ ಒಬ್ಬರ ಕಡೆಗೆ. ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ, ಅಭಿನಯವನ್ನು ಇಷ್ಟಪಟ್ಟಿದ್ದೇನೆ, ಅವರ ಬಾಲ್ಯದ ದಿನಗಳಿಂದ ಅವರ ಕೆಲಸ ನನಗೆ ಅಚ್ಚುಮೆಚ್ಚು. ಅವರ ಸಹೋದರ ಮತ್ತು ನಾನು ಒಂದೇ ಹೆಸರಷ್ಟೇ ಅಲ್ಲ, ಜನ್ಮ ದಿನಾಂಕ ಕೂಡ. ಒಟ್ಟಾರೆಯಾಗಿ ಹೇಳಬೇಕೆಂದರೆ. ನಾನು ತುಂಬಾ ಇಷ್ಟಪಡುವ ವ್ಯಕ್ತಿ ವ್ಯಕ್ತಿತ್ವ.'' - ಕಿಶೋರ್, ನಟ

  ಆರೋಪಗಳು ನಿಜವೆಂದು ನಂಬಲು ಬಯಸುವುದಿಲ್ಲ

  ಆರೋಪಗಳು ನಿಜವೆಂದು ನಂಬಲು ಬಯಸುವುದಿಲ್ಲ

  ''ಈ ಎಲ್ಲಾ ಆರೋಪಗಳು ನಿಜವೆಂದು ಎಂದಿಗೂ ನಂಬಲು ಬಯಸುವುದಿಲ್ಲ. ಆದರೂ ನಡೆದದ್ದೇನೆಂದು ತಿಳಿಯಲು ಫೇಸ್ ಬುಕ್ ಹೇಳಿಕೆ ಓದಿದೆ, 15 ವರ್ಷಗಳ ಕಾಲ ಅದೇ ಕೆಲಸದಲ್ಲಿದ್ದ, ನನ್ನ ಸ್ವೀಕೃತಿ ಮತ್ತು ತಿಳುವಳಿಕೆಯ ಪ್ರಕಾರ ನನಗನಿಸಿದ್ದು ಇದು ಕೇವಲ ತಪ್ಪು ಗ್ರಹಿಕೆಯೆಂದು. ಆದರೆ, ನನಗೆ ಹೆಚ್ಚು ಆಘಾತ ತಂದಿದ್ದು ನಮ್ಮ ಜನರ ಪ್ರತಿಕ್ರಿಯೆ. ಅಷ್ಟೊಂದು ಆಕ್ರಮಣಶೀಲತೆ ಮತ್ತು ದ್ವೇಷ.'' - ಕಿಶೋರ್, ನಟ

  ಸೆಟ್ ನಲ್ಲಿ ಶ್ರುತಿ ಹೇಳಿದ ಹಾಗೆ ಏನೂ ನಡೆದಿಲ್ಲ: ಪೊಲೀಸರ ಮುಂದೆ ನಿರ್ದೇಶಕ ಹೇಳಿಕೆ.! ಸೆಟ್ ನಲ್ಲಿ ಶ್ರುತಿ ಹೇಳಿದ ಹಾಗೆ ಏನೂ ನಡೆದಿಲ್ಲ: ಪೊಲೀಸರ ಮುಂದೆ ನಿರ್ದೇಶಕ ಹೇಳಿಕೆ.!

  ಆ ಹುಡುಗಿಯ ತೇಜೋವಧೆ ಮಾಡಲಾಗಿತ್ತು

  ಆ ಹುಡುಗಿಯ ತೇಜೋವಧೆ ಮಾಡಲಾಗಿತ್ತು

  ''ಸಾಮಾಜಿಕ ಜಾಲವೆಂಬ ಎರಡಲಗಿನ ಕತ್ತಿಯನ್ನು ಬಳಸಿ ದಾರುಣವಾಗಿ ಆ ಹುಡುಗಿಯ ತೇಜೋವಧೆ ಮಾಡಲಾಗಿತ್ತು. ಇದೇ ನಮ್ಮ ನವ ಸಮಾಜದ ನಿಜವಾದ ಮುಖವೆಂದು ನೆನೆದರೆ ಗಾಬರಿಯಾಗುತ್ತದೆ. ಇಷ್ಟು ಅಸ್ವಸ್ಥರಾದೆವೇ ನಾವು? ಹೌದು, ಸಂಘರ್ಷವಿದ್ದೆಡೆ ಅಸಮ್ಮತಿಯ ಧ್ವನಿ ಏಳುತ್ತದೆ. ಆ ದನಿಯೆತ್ತುವ ಅವಕಾಶ ಎಲ್ಲರಿಗೂ ಇರಬೇಕು, ಅದಕ್ಕೆ ಕಿವಿಗೊಡಬೇಕು, ಸರ್ವಸಮ್ಮತ ಪರಿಹಾರ ಹುಡುಕಬೇಕು ಹತ್ತಿಕ್ಕಬಾರದು ಇದು ನನ್ನ ಮಟ್ಟಿಗೆ ಸ್ವಸ್ಥ ಸಮಾಜದ ಲಕ್ಷಣ.'' - ಕಿಶೋರ್, ನಟ

  ಸಿನಿಮಾಗೆ ಅದು ಸಾಧ್ಯವಿಲ್ಲವೇ?

  ಸಿನಿಮಾಗೆ ಅದು ಸಾಧ್ಯವಿಲ್ಲವೇ?

  ''ಆಧುನೀಕರಣದ ನಾಗಾಲೋಟದಲ್ಲಿ ಕುಟುಂಬವಾಗಿದ್ದ ಸಿನಿಮಾ ಉದ್ಯಮವಾಗಿಹೋದದ್ದು ನನಗೆ ಗೊತ್ತಾಗಲೇ ಇಲ್ಲ.. ವಸುದೈವಕುಟುಂಬಕಂನಲ್ಲಿ ಜಗತ್ತೇ ಒಂದು ಕುಟುಂಬವಾಗಿರುವಾಗ... ಸಿನಿಮಾಗೆ ಅದು ಸಾಧ್ಯವಿಲ್ಲವೇ?. ಕೃಷಿಯಲ್ಲೂ ಹಳೆಯ ಪದ್ಧತಿಗಳಲ್ಲೇ ಪರ್ಯಾಯ, ಉತ್ತರ ಕಂಡ ಓಬೀರಾಯನ ಕಾಲದ ಗುಗ್ಗು ನಾನು, ಕಾಲದ ಮೂಸೆಯಲ್ಲಿ ಪಕ್ವಗೊಂಡ ಪರಿಹಾರಗಳೆಂದು ಅವುಗಳಲ್ಲೇ ನನ್ನ ನಂಬಿಕೆ. ನಿಜ ಅವೂ ದಾರಿ ತಪ್ಪಿ ಶೋಷಣೆಯ ಸಾಧನಗಳಾಗಿದ್ದಿದೆ.'' - ಕಿಶೋರ್, ನಟ

  ರಾಜಣ್ಣನಂಥ ತಂದೆ, ವಿಷ್ಣುವಿನಂಥ ಅಣ್ಣ

  ರಾಜಣ್ಣನಂಥ ತಂದೆ, ವಿಷ್ಣುವಿನಂಥ ಅಣ್ಣ

  ''ರಾಜಣ್ಣನಂಥ ತಂದೆ, ವಿಷ್ಣುವಿನಂಥ ಅಣ್ಣ, ಪಾರ್ವತಮ್ಮನವರಂಥ ತಾಯಿಯಿದ್ದಾಗ ಇಂಥವೆಷ್ಟೊ ಸಮಸ್ಯೆಗಳು ಸಮಸ್ಯೆಗಳಾಗುವ ಮುನ್ನವೇ ಬಗೆಹರಿದದ್ದನ್ನ ಕಂಡಿದ್ದೇವೆ ಕೇಳಿದ್ದೇವೆ. ಇದು ಉದ್ಯಮವಾದರೂ ಸಮಸ್ಯೆಗಳು ನಿರ್ಮೂಲವಾಗುವ ಭರವಸೆಯೆಲ್ಲಿದೆ? ಕಾನೂನಿನ ಚೌಕಟ್ಟು ಹಾಕಿ ನಿಯಮದ ಗೆರೆ ಹಿಡಿದು ಕಟಕಟೆಗಳಲ್ಲಿ ನಿಂತು ಹೊಡೆದಾಡಿ ಬದುಕಬಹುದು.'' - ಕಿಶೋರ್, ನಟ

  ಸಿನಿಮಾ ಹೊಲಸೆಂಬ ಕಲ್ಪನೆಯ ತೊಳೆಯಬೇಕಿದೆ

  ಸಿನಿಮಾ ಹೊಲಸೆಂಬ ಕಲ್ಪನೆಯ ತೊಳೆಯಬೇಕಿದೆ

  ''ಕಾನೂನಿನ ಕಠೋರತೆಗಿಂತ ಪ್ರೀತಿಯ ಸಲಹೆ ಬದಲಾವಣೆಗೆ ಆಪ್ತವಲ್ಲವೇ. ಸಿನಿಮಾ ಕುಟುಂಬ ಹೊಲಸೆಂಬ ಕಲ್ಪನೆಯ ತೊಳೆಯಬೇಕಿದೆ.. ಆ ಹೆಣ್ಣು ನನ್ನ ಕುಟುಂಬದ ಹೆಣ್ಣು ಅವಳ ನಿಂದನೆ ಸಲ್ಲ. ಅವಳ ಆರೋಪ ನನ್ನ ವಿರುದ್ಧವೇ ಆದರೂ ಸರಿ ಅದನ್ನು ಭರಿಸುವ ಶಕ್ತಿ ನನಗಿದೆ, ಗಂಡಿನ ಅಹಮ್ಮೆಂದರೂ ಸರಿಯೇ. ಆದರೆ ಯಾವ ಕಾರಣಕ್ಕೂ ನನ್ನ ಕುಟುಂಬದ ಹೆಣ್ಣಿನ ತೇಜೋವಧೆಯಾಗುವುದು ನನಗೆ ಒಪ್ಪಿತವಲ್ಲ.'' - ಕಿಶೋರ್, ನಟ

  ಹೆಣ್ಣಿನ ಚಾರಿತ್ರ್ಯವಧೆ ಮಾಡುವುದು ತಪ್ಪಲ್ಲವೇ

  ಹೆಣ್ಣಿನ ಚಾರಿತ್ರ್ಯವಧೆ ಮಾಡುವುದು ತಪ್ಪಲ್ಲವೇ

  ''ಪ್ರೇಕ್ಷಕನೇನು ಹೊರಗಿನವನಲ್ಲ. ಅವನೂ ಅಣ್ಣ ಅಕ್ಕನೆಂದು ಇದೇ ಕುಟುಂಬವ ಸುತ್ತಿ ಸುತ್ತಿ ಬಂದ ಸದಸ್ಯನೇ. ಅವನೇ ತನ್ನ ಕುಟುಂಬದ ಹೆಣ್ಣಿನ ಚಾರಿತ್ರ್ಯವಧೆ ಮಾಡುವುದು ತಪ್ಪಲ್ಲವೇ. ನಿಜ, ಹಲವು ಸಂದರ್ಭಗಳಲ್ಲಿ ಸರಿ ತಪ್ಪುಗಳು ಮಸುಕಾಗಿ ನೋವನುಭವಿಸಬೇಕಾಗಬಹುದು. ಆದರೆ ತಪ್ಪಾದರೂ ಸರಿ ಇಂದು ಈ ದನಿಯನ್ನು ಹತ್ತಿಕ್ಕಿದರೆ ಬರುವ ನಾಳೆಗಳಲ್ಲಿ ದನಿಯೆತ್ತಲೇಬೇಕಾದ ಸಂದರ್ಭದಲ್ಲೂ ಭಯದಿಂದ ನಮ್ಮ ಅಕ್ಕ ತಂಗಿ ಗೆಳತಿಯರ ಸದ್ದಡಗಿ ಸಾಯಬಹುದು. - ಕಿಶೋರ್, ನಟ

  ಮನಸ್ಸು ಭಾರವಾಯಿತು

  ಮನಸ್ಸು ಭಾರವಾಯಿತು

  ''ಈ ಘಟನೆಯ ಭಾಗವಾದ ನನ್ನವರು ಮತ್ತು ಅವರ ಕುಟುಂಬಗಳ ಪರಿಸ್ಥಿತಿಯನ್ನು ನೆನೆದು ಮನಸ್ಸು ಭಾರವಾಯಿತು. ನನ್ನ ಗಂಡುಕುಲ, ಹೆಣ್ಣುಕುಲ, ನನ್ನ ಜಾತಿ, ನನ್ನ ಭಾಷೆ, ನನ್ನ ರಾಷ್ಟ್ರೀಯತೆ, ನನ್ನ ಮತ್ತು ನನ್ನೆಲ್ಲದರ ಪರವಾಗಿ ಕೂಗಿ ಕ್ಷಮೆ ಕೇಳಲೇ?, ನನ್ನಲ್ಲಿರುವ ಛಿದ್ರಗೊಂಡ ನಾನು ಕೇಳುವ ಆ ಕ್ಷಮೆಗೆ ತಿಳಿದೋ ತಿಳಿಯದೆಯೋ ನಾನು ಒಡೆದ ಲೆಕ್ಕವಿಲ್ಲದಷ್ಟು ಮನಗಳು ಮನೆಗಳು ಸಂಬಂಧಗಳನ್ನು ಸರಿಪಡಿಸಲು ಶಕ್ತಿಯಿದೆಯೇ ಮತ್ತೆ ಅವುಗಳನ್ನು ಮೊದಲಿನ ಹಾಗೇ ಒಡೆದ ಬಿರುಕುಗಳು ಕಾಣದಂತೆ ಮಾಡಲು ಸಾಧ್ಯವೇ? - ಕಿಶೋರ್, ನಟ

  ಪ್ರೀತಿಯೊಂದೆ ಪ್ರಾರ್ಥನೆಯು

  ''ಏಕೋ ಮಿಟೂ ನ ‘ನಾನು' ವಿಗೆ ಉತ್ತರವಾಗಿ ಗೆಳೆಯ ಗಿರಿರಾಜರ ‘ಜಟ್ಟ' ಸಿನಿಮಾ ಮತ್ತದರ "ಪ್ರೀತಿಯೊಂದೆ ಪ್ರಾರ್ಥನೆಯು" ಹಾಡು ಜ್ಞಾಪಕ ಬರುತ್ತಿದೆ.. ನನ್ನ ಮತ್ತು ಮಿಟೂವಿನ ನಡುವೆ ಹರಿದು ಇಬ್ಭಾಗವಾಗಿಹೋದ ಹೃದಯದ ಕೂಗು ಹೇಳುತ್ತಲೇ ಇದೆ, ಇದೆಲ್ಲ ಕೇವಲ ತಪ್ಪು ತಿಳುವಳಿಕೆಯೆಂದು - ಕಿಶೋರ್, ನಟ

  English summary
  Actor Kishore reaction about Sruthi Hariharan's allegation. Kannada actress Sruthi Hariharan has accused actor Arjun Sarja.
  Friday, November 2, 2018, 12:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X