»   » 'ಪುಟ್ಟಣ್ಣ' ನ ಅವತಾರ ಎತ್ತಿದ ಕಾಮಿಡಿ ಕಿಂಗ್ ಕೋಮಲ್!

'ಪುಟ್ಟಣ್ಣ' ನ ಅವತಾರ ಎತ್ತಿದ ಕಾಮಿಡಿ ಕಿಂಗ್ ಕೋಮಲ್!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಕಾಮಿಡಿ ನಟ ಕೋಮಲ್ ಕುಮಾರ್ ಹಾಗೂ ನಟಿ ಪ್ರಿಯಾಮಣಿ ಅವರು ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದು, 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಎಂಬ ಹಾರರ್ ಕಾಮಿಡಿ ಮಿಶ್ರಿತ ವಿಭಿನ್ನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಚಿತ್ರದ ಕೆಲವಾರು ಪೋಸ್ಟರ್ ಗಳು ರಿಲೀಸ್ ಆಗಿದ್ದು, ಇದು ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಿರ್ದೇಶಕರಲ್ಲೊಬ್ಬರಾದ ಪುಟ್ಟಣ್ಣ ಕಣಗಾಲ್ ಅವರ ಜೀವನ ಚರಿತ್ರೆಯಾಧರಿತ ಸಿನಿಮಾ ಅಂತೂ ಖಂಡಿತಾ ಅಲ್ಲ.

Actor Komal and Actress priyamani's 'Kathe-Chitrakathe-Nirdeshana Puttanna'

ಇದು ಹಾರರ್ ಸಿನಿಮಾ ಹೌದು ಜೊತೆಗೆ ಕಾಮಿಡಿ ಸಿನಿಮಾನೂ ಹೌದು. ತೆಲುಗಿನ ಹಿಟ್ ಚಿತ್ರ 'ಗೀತಾಂಜಲಿ' ಯ ರಿಮೇಕ್ ಆಗಿರುವ 'ಪುಟ್ಟಣ್ಣ' ಚಿತ್ರದಲ್ಲಿ ಕೋಮಲ್ ಕುಮಾರ್ ಇದ್ದಾರೆ ಅಂದ್ರೆ ಅಲ್ಲಿ ಹಾಸ್ಯಕ್ಕೆ ಏನು ತೊಂದರೆ ಇಲ್ಲ ಬಿಡಿ.

ಚಿತ್ರದ ಪೋಸ್ಟರ್ ಗಳಲ್ಲಿಯೇ ಚಿತ್ರ ಹಾರರ್ ಕಾಮಿಡಿ ಎಂದು ಹಾಕಿಕೊಂಡಿದ್ದು, ಚಿತ್ರಕ್ಕೆ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. 'ದಂಡುಪಾಳ್ಯ' ಚಿತ್ರಕ್ಕೆ ಬಂಡವಾಳ ಹಾಕಿದ್ದ ನಿರ್ಮಾಪಕ ಹೆಚ್.ಡಿ. ನಾರಾಯಣ ಬಾಬು ಅವರು ಈ ಸಿನಿಮಾಕ್ಕೂ ಬಂಡವಾಳ ಹೂಡಿದ್ದಾರೆ.

Actor Komal and Actress priyamani's 'Kathe-Chitrakathe-Nirdeshana Puttanna'

ಶ್ರೀನಿವಾಸರಾಜು ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಬಹುತೇಕ ಕೊನೆಯ ಹಂತದಲ್ಲಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಸದ್ಯದಲ್ಲೇ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಸಲು ಚಿತ್ರತಂಡ ತಯಾರಿ ನಡೆಸುತ್ತಿದೆ.

ಇನ್ನುಳಿದಂತೆ ಚಿತ್ರದಲ್ಲಿ ಖಳನಟ ರವಿಶಂಕರ್, ಸಾಧುಕೋಕಿಲ, ದೊಡ್ಡಣ್ಣ, ಪೂಜಾಗಾಂಧಿ ಮುಂತಾದವರು ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ.

English summary
Dandupalya producer Narayanababu, has dared to cast an unusual pair in his upcoming production venture- Kathe-Chitrakathe-Nirdeshana Puttanna, which is gearing up for release. Comedian turned actor Komal and National-award winning actress Priyamani have been paired for the first time for the film. The movie is currently in post-production phase and is planning for an audio launch as well.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada