»   » ಕಲೆಕ್ಷನ್ ಚೆನ್ನಾಗಿದ್ದರೂ 'ಪುಟ್ಟಣ್ಣ'ನಿಗೆ ಮಲ್ಟಿಪ್ಲೆಕ್ಸ್ ಸಿಗುತ್ತಿಲ್ಲ

ಕಲೆಕ್ಷನ್ ಚೆನ್ನಾಗಿದ್ದರೂ 'ಪುಟ್ಟಣ್ಣ'ನಿಗೆ ಮಲ್ಟಿಪ್ಲೆಕ್ಸ್ ಸಿಗುತ್ತಿಲ್ಲ

Posted By:
Subscribe to Filmibeat Kannada

ಕಾಮಿಡಿ ನಟ ಕೋಮಲ್ ಕುಮಾರ್ ಅಭಿನಯದ ಕಾಮಿಡಿ ಹಾರರ್ ಸಿನಿಮಾ 'ಕಥೆ-ಚಿತ್ರಕಥೆ-ನಿರ್ದೇಶನ-ಪುಟ್ಟಣ್ಣ' ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಜೊತೆಗೆ ಒಳ್ಳೆ ಕಲೆಕ್ಷನ್ ಮಾಡುತ್ತಿದ್ದರೂ ಕೂಡ ಚಿತ್ರತಂಡಕ್ಕೆ ಬೇಜಾರಾಗಿದೆ.

ಅದೇನಪ್ಪಾ ಅಂದ್ರೆ, ಒಳ್ಳೆ ಪ್ರದರ್ಶನ ಕಾಣುತ್ತಿರುವ ಕೋಮಲ್ ಮತ್ತು ಪ್ರಿಯಾಮಣಿ ಅವರ 'ಕಥೆ-ಚಿತ್ರಕಥೆ-ನಿರ್ದೇಶನ-ಪುಟ್ಟಣ್ಣ' ಸಿನಿಮಾದ ಪ್ರದರ್ಶನಕ್ಕೆ ಮಲ್ಟಿಪ್ಲೆಕ್ಸ್ ಗಳು ಸಿಗುತ್ತಿಲ್ಲ, ಈಗಾಗಲೇ ಪ್ರದರ್ಶನ ಆಗುತ್ತಿರುವಲ್ಲಿಂದ ಎತ್ತಂಗಡಿ ಆಗುತ್ತಿದೆ ಎಂದು ಚಿತ್ರತಂಡ ಬೇಸರ ವ್ಯಕ್ತಪಡಿಸುತ್ತಿದೆ.[ದೆವ್ವದ ಕೈಯಲ್ಲಿ ಚಿತ್ರಾನ್ನವಾಗುವ 'ಪುಟ್ಟಣ್ಣ'ನಿಗೆ ವಿಮರ್ಶಕರು ಏನಂತಾರೇ?]

Actor Komal Kumar starrer 'Puttanna' movie facing multiplex problem

ಈ ಬೇಸರವನ್ನು ಇತ್ತೀಚೆಗೆ ಚಿತ್ರದ ನಿರ್ಮಾಪಕ ನಾರಾಯಣ ಬಾಬು ಅವರೇ ಹೇಳಿಕೊಂಡಿದ್ದಾರೆ. 'ನಮ್ಮ ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಗುತ್ತಿದೆ. ಸಿನಿಮಾ ನೋಡಿದವರೆಲ್ಲಾ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಬರೀ ಬಾಯಿ ಮಾತಿನ ಪ್ರಚಾರದಿಂದಲೇ ಚಿತ್ರಕ್ಕೆ ಜನ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರದ ಪ್ರದರ್ಶನ ಬಹಳ ಕಡಿಮೆಯಾಗಿರುವುದು ದುರದೃಷ್ಟಕರ ಎಂದಿದ್ದಾರೆ.[ಕಥೆ-ಚಿತ್ರಕಥೆ-ನಿರ್ದೇಶನ 'ಪುಟ್ಟಣ್ಣ' ಸುತ್ತ ಹೊಸ ವಿವಾದ!]

ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ಕಡಿಮೆ ಮಾಡಿ ಪರಭಾಷಾ ಚಿತ್ರಗಳ ಪ್ರದರ್ಶನಗಳನ್ನು ಹೆಚ್ಚಿಸಲಾಗುತ್ತಿದೆ. ಮಲ್ಟಿಪ್ಲೆಕ್ಸ್ ಗಳ ಸುಮಾರು 480 ಶೋಗಳಲ್ಲಿ ಕೇವಲ 119 ಶೋಗಳು ಮಾತ್ರ ಕನ್ನಡಕ್ಕೆ ಲಭ್ಯವಾಗಿದೆ. ಉಳಿದಂತೆ ಬೇರೆ ಭಾಷೆಯ ಚಿತ್ರಗಳಿಗೆ ಹೆಚ್ಚು ಪ್ರಧಾನ್ಯತೆ ನೀಡಲಾಗುತ್ತಿದೆ ಎಂದು ನಿರ್ಮಾಪಕರು ಬೇಸರ ವ್ಯಕ್ತಪಡಿಸಿದ್ದಾರೆ.[ಥಿಯೇಟರ್ ಕಮ್ಮಿ ಅಂತ ಕೊರಗುತ್ತಿಲ್ಲ 'ಪುಟ್ಟಣ್ಣ']

Actor Komal Kumar starrer 'Puttanna' movie facing multiplex problem

ಇನ್ನೊಂದು ದುಃಖದ ಸಂಗತಿ ಎಂದರೆ ಈ ವಾರ ಕನ್ನಡದಲ್ಲಿ ಮೂರು ಚಿತ್ರಗಳ ಬಿಡುಗಡೆ ಹಾಗೂ ಬೇರೆ ಭಾಷೆಗಳಲ್ಲೂ ತುಂಬಾ ಸಿನಿಮಾ ಬಿಡುಗಡೆ ಆಗಲಿರುವುದರಿಂದ ಈ ವಾರ 'ಪುಟ್ಟಣ್ಣ' ಎತ್ತಂಗಡಿಯಾಗಲಿದೆ.

English summary
Kannada Actor Komal Kumar and Actress Priyamani starrer Kannada Movie 'Kathe-Chitrakathe-Nirdheshana-Puttanna' facing multiplex problem. The movie is directed by Srinivasa Raju.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada