Just In
Don't Miss!
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- News
ಮ್ಯಾಡ್ರಿಡ್ ಕಟ್ಟಡ ಸ್ಫೋಟ: ಇಬ್ಬರು ಸಾವು, ಹಲವರಿಗೆ ಗಾಯ
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Sports
ಐಪಿಎಲ್ 2021: ಬೆಂಗಳೂರಿಗೆ ಬಂದ ಹರ್ಷಲ್ ಪಟೇಲ್, ಡೇನಿಯಲ್ ಸ್ಯಾಮ್ಸ್!
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅರೆಸ್ಟ್ ಆಗಿದ್ದು ಡಿಕೆಶಿ, ಆದ್ರೆ ಪರದಾಡಿದ್ದು ಮಾತ್ರ ಕುರಿ ಪ್ರತಾಪ್
ಅತ್ತ ರಾಜ್ಯ ಕಾಂಗ್ರೆಸ್ ಮುಂಖಡ, ಮಾಜಿ ಸಚಿವ, ಕನಕಪುರ ಕ್ಷೇತ್ರದ ಶಾಸಕ ಡಿಕೆ ಶಿವಕುಮಾರ್ ಅರೆಸ್ಟ್ ಆಗಿದ್ದಾರೆ. ಆದರೆ, ಇತ್ತ ಕನ್ನಡದ ಹಾಸ್ಯ ನಟ ಕುರಿ ಪ್ರತಾಪ್ ಇದರಿಂದ ತೊಂದರೆ ಅನುಭವಿಸಿದ್ದಾರೆ.
ಮೇಲಿನ ಸಾಲು ಓದಿದ ಕೂಡಲೇ ಡಿಕೆ ಶಿವಕುಮಾರ್ ರಿಗೂ ಕುರಿ ಪ್ರತಾಪ್ ರಿಗೂ ಏನು ಸಂಬಂಧ?, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಡಿಕೆಶಿ ಬಂಧನ ಆಗಿದ್ದರೆ, ಕುರಿ ಪ್ರತಾಪ್ ಗೆ ಯಾಕೆ ತೊಂದರೆ ಆಗಬೇಕು? ಎನ್ನುವ ಕೆಲವು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಉದ್ಭವ ಆಗಬಹುದು.
'ಬಿಗ್ ಬಾಸ್'ಗೆ ಕುರಿ ಪ್ರತಾಪ್ ಹೋಗಲೇಬೇಕು, ಇದು ಓದುಗರ ಇಚ್ಛೆ.!
ಡಿಕೆ ಶಿವಕುಮಾರ್ ರಿಗೆ ಹಾಗೂ ಕುರಿ ಪ್ರತಾಪ್ ರಿಗೆ ಯಾವುದೇ ಸಂಬಂಧ ಇಲ್ಲ, ಡಿಕೆಶಿ ಜೊತೆಗೆ ಕುರಿ ಪ್ರತಾಪ್ ಯಾವುದೇ ಹಣಕಾಸಿನ ವ್ಯವಹಾರವನ್ನೂ ಮಾಡಿಲ್ಲ. ಆದರೂ ಡಿಕೆ ಶಿವಕುಮಾರ್ ಬಂಧನದಿಂದ ಕುರಿ ಪ್ರತಾಪ್ ರಿಗೆ ಕಷ್ಟ ಆಗಿದ್ದು ನಿಜ.
ಅಯ್ಯೋ.. ಹಾಗಾದರೆ, ಏನಿದು... ಡಿಕೆಶಿ ಕುರಿ ಪ್ರತಾಪ್ ಕಥೆ ಅಂದ್ರ ಮುಂದೆ ಓದಿ....

ಡಿಕೆಶಿ ಬಂಧನ ವಿರೋಧಿಸಿ ನಡೆದ ಪ್ರತಿಭಟನೆ
ಶಾಸಕ ಡಿಕೆ ಶಿವಕುಮಾರ್ ಬಂಧನ ವಿರೋಧಿಸಿ ಅವರ ಬೆಂಬಲಿಗರು ಪ್ರತಿಭಟನೆ ಮಾಡುತ್ತಿದ್ದಾರೆ. ಬುಧವಾರ ಹಾಗೂ ಗುರುವಾರ ಕನಕಪುರ ಮತ್ತು ರಾಮನಗರದಲ್ಲಿ ಬಂದ್ ಮಾಡಲಾಗಿತ್ತು. ಇದರಿಂದ ಜನ ಸಾಮಾನ್ಯರಿಗೆ ಬಹಳ ತೊಂದರೆಯಾಯ್ತು. ಈ ರೀತಿ ತೊಂದರೆ ಅನುಭವಿಸಿದವರಲ್ಲಿ ಹಾಸ್ಯ ನಟ ಕುರಿ ಪ್ರತಾಪ್ ಕೂಡ ಒಬ್ಬರು.

ಚಿತ್ರೀಕರಣಕ್ಕೆ ಹೋಗಲು ಆಗದೆ ಪರದಾಟ
ಪ್ರಥಮ್ ನಟನೆ ಮತ್ತು ನಿರ್ದೇಶನದ 'ನಟ ಭಯಂಕರ' ಸಿನಿಮಾದ ಬಹು ಮುಖ್ಯ ಪಾತ್ರದಲ್ಲಿ ಕುರಿ ಪ್ರತಾಪ್ ನಟಿಸುತ್ತಿದ್ದಾರೆ. ಮೈಸೂರಿನಲ್ಲಿಯೇ ವಾಸವಾಗಿರುವ ಕುರಿ ಪ್ರತಾಪ್ ಚಿತ್ರೀಕರಣ ಇದ್ದರೆ ಮಾತ್ರ ಬೆಂಗಳೂರಿಗೆ ಬರುತ್ತಾರೆ. ಎಂದಿನಂತೆ ಕಳೆದ ಬುಧವಾರ ಸಹ ಕಾರು ಓಡಿಸಿಕೊಂಡು ಬಂದ ಕುರಿ ಪ್ರತಾಪ್ ದಾರಿ ಮಧ್ಯೆಯಲ್ಲಿ ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಂಡರು.
ಹೊಸ ಹೇರ್ ಸ್ಟೈಲ್ ಜೊತೆಗೆ ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟ ಕುರಿ ಪ್ರತಾಪ್

ಕುರಿ ಪ್ರತಾಪ್ ಕಾರಿನ ಹಿಂದೆ, ಮುಂದೆ ಬೆಂಕಿ
ಚನ್ನಪಟ್ಟಣ ದಾಟಿದ ಮೇಲೆ ಪ್ರತಿಭಟನೆ ತೀವ್ರತೆ ಕುರಿ ಪ್ರತಾಪ್ ಗೆ ಅರಿವಾಯಿತು. ಅವರ ಕಾರಿನ ಹಿಂದೆ, ಮುಂದೆ ಹಾಕಿದ್ದ ಬೆಂಕಿ ರಸ್ತೆಯ ತುಂಬ ಹಬ್ಬಿತ್ತು. ಒಬ್ಬ ಚಿತ್ರ ನಟನಾಗಿ ಕಾರ್ ನಿಂದ ಇಳಿದು ಹೋದರೆ ಏನಾಗಬಹುದು ಎಂಬ ಆತಂಕದಲ್ಲಿ ಅಲ್ಲೇ ಇದ್ದರು. ಬಳಿಕ ಕಷ್ಟ ಪಟ್ಟು ಹರಸಾಹಸ ಪಟ್ಟು, ಆ ರಸ್ತೆ ಈ ರಸ್ತೆ ಅಂತ ಸುತ್ತಿಕೊಂಡು ಅಲ್ಲಿಂದ ಪಾರಾದರು.

ಬೆಳಗ್ಗೆ ಇದ್ದ ಶೂಟಿಂಗ್ ಗೆ ಮಧ್ಯಾಹ್ನ ಬಂದ ಕುರಿ ಪ್ರತಾಪ್
ಸಿನಿಮಾದ ಚಿತ್ರೀಕರಣ ಬೆಳಗ್ಗೆಯಿಂದಲೇ ಶುರು ಆಗಿತ್ತು. ಕುರಿ ಪ್ರತಾಪ್ ಭಾಗದ ಚಿತ್ರೀಕರಣ 9 ಗಂಟೆಗೆ ನಡೆಯಬೇಕಿತ್ತು. ಇಡೀ ಚಿತ್ರತಂಡ ಅವರಿಗಾಗಿ ಕಾಯುತ್ತಿತ್ತು. ಆದರೆ, ಪ್ರತಿಭಟನೆ ಮಧ್ಯೆ ಸಿಕ್ಕಿ ಹಾಕಿಕೊಂಡ ಕುರಿ ಪ್ರತಾಪ್ ಬೆಂಗಳೂರು ತಲುಪಿದಾಗ ಮಧ್ಯಾಹ್ನ ಆಗಿ ಹೋಗಿತ್ತು. ಹೀಗಾಗಿ, ಪ್ರತಿಭಟನೆಯಿಂದ ಕುರಿ ಪ್ರತಾಪ್ ಮತ್ತು 'ನಟ ಭಯಂಕರ' ತಂಡ ತೊಂದರೆ ಪಡುವಂತೆ ಆಯ್ತು.
ಕುರಿ ಪ್ರತಾಪ್ 'ಇನ್ನೊಂದು ಮುಖ'ವನ್ನ ಪರಿಚಯಿಸಿದ ಪ್ರಥಮ್.!

ಮೂರು ದಿನ ಆ ಕಡೆ ತಲೆ ಹಾಕಲ್ಲ
ಹೇಗೋ.. ಏನೋ.. ಮಾಡಿ ಬೆಂಗಳೂರು ತಲುಪಿದ ಕುರಿ ಪ್ರತಾಪ್ ಮೂರು ದಿನ ಆ ಕಡೆ ತಲೆ ಹಾಕೋಲ್ಲ ಎಂದಿದ್ದಾರೆ. ಪ್ರತಿಭಟನೆ ಮುಗಿಯುವವರೆಗೆ ಬೆಂಗಳೂರಿನಲ್ಲಿಯೇ ಇದ್ದು, ನಂತರ ಮನೆಗೆ ಹೋಗುವ ನಿರ್ಧಾರ ಮಾಡಿದ್ದಾರೆ. 'ನಟ ಭಯಂಕರ' ಕ್ಲೈಮ್ಯಾಕ್ಸ್ ಶೂಟಿಂಗ್ ಸೇರಿದಂತೆ ಕೆಲವು ಚಿತ್ರದ ಕೆಲಸಗಳನ್ನು ಮುಗಿಸಿಕೊಳ್ಳಲಿದ್ದಾರೆ.

ಕುರಿ ಪ್ರತಾಪ್ ಕೆರಿಯರ್ ನ ವಿಶೇಷ ಸಿನಿಮಾ
'ನಟ ಭಯಂಕರ' ಕುರಿ ಪ್ರತಾಪ್ ಕೆರಿಯರ್ ನ ವಿಶೇಷ ಸಿನಿಮಾ ಆಗಲಿದೆಯಂತೆ. ಈ ಚಿತ್ರದಲ್ಲಿ ಅವರು ಸೂಪರ್ ಸ್ಟಾರ್ ಕ್ಯಾಮರಾ ಮ್ಯಾನ್ ಪಾತ್ರ ಮಾಡುತ್ತಿದ್ದಾರೆ. ನಟನೆ ಮಾತ್ರದಲ್ಲದೆ ಚಿತ್ರದ ಸಂಭಾಷಣೆಗೂ ಸಹಾಯ ಮಾಡಿದ್ದಾರೆ. ಪ್ರತಿದಿನ ಪ್ರಥಮ್ ಜೊತೆಗೆ ಚರ್ಚೆ ಮಾಡಿ ವಿಶೇಷ ಕಾಳಜಿಯೊಂದಿಗೆ ಕುರಿ ಪ್ರತಾಪ್ ಈ ಸಿನಿಮಾ ಮಾಡುತ್ತಿದ್ದಾರೆ. ಡಿಫರೆಂಟ್ ಅವತಾರಗಳಲ್ಲಿ ಇಲ್ಲಿ ಕುರಿ ಪ್ರತಾಪ್ ಕಾಣಿಸಿಕೊಳ್ಳುತ್ತಿದ್ದಾರೆ.