twitter
    For Quick Alerts
    ALLOW NOTIFICATIONS  
    For Daily Alerts

    ನವೆಂಬರ್ 1ರಂದು ಡಾ. ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರದಾನ: ಸಿಎಂ ಬೊಮ್ಮಾಯಿ

    |

    ಕಳೆದ 'ಪುನೀತ ನಮನ' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನೀತ್‌ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದರು. ರಾಜ್ಯೋತ್ಸವ ಸಂಭ್ರಮದಲ್ಲಿ ನವೆಂಬರ್ 1ರಂದು ಪ್ರಶಸ್ತಿ ಪ್ರದಾನ ಮಾಡುವುದಾಗಿ ಇಂದು ಬೊಮ್ಮಾತಿ ತಿಳಿಸಿದ್ದಾರೆ. ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದ್ದು, ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.

    ಕನ್ನಡ ರಾಜ್ಯೋತ್ಸವಂದು ನವೆಂಬರ್ 1ರಂದು ಸಂಜೆ 4ಗಂಟೆಗೆ ವಿಧಾನಸೌಧ ಮುಂಭಾಗ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ನೆಚ್ಚಿನ ನಟ ಪುನೀತ್ ಸ್ಮರಣಾರ್ಥ ಸಮಾರಂಭದಲ್ಲಿ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಿಸಲಾಗಿತ್ತು. ಅದರಂತೆ ರಾಜ್ಯೋತ್ಸವದಂದು ನೀಡಲಾಗುತ್ತಿದೆ.ಇದು ರಾಜ್ಯದ ಅತ್ಯಂತ ಶ್ರೇಷ್ಠ ಪ್ರಶಸ್ತಿಯಾಗಿದೆ. ಈಗಾಗಲೇ ಎಂಟು ಜನಕ್ಕೆ ಮಾತ್ರ ಕೊಡಲಾಗಿದ್ದು, 2009ರ ನಂತರ ಯಾರಿಗೂ ಕೊಟ್ಟಿರಲಿಲ್ಲ. ಇದೀಗ ಆ ಪ್ರಶಸ್ತಿಯನ್ನು ನೆಚ್ಚಿನ ನಟ ಅಪ್ಪುರವರಿಗೆ ನೀಡಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿವರಿಸಿದರು.

    'ಗಂಧದ ಗುಡಿ' ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿ: ಸರ್ಕಾರಕ್ಕೆ ವಾಣಿಜ್ಯ ಮಂಡಳಿ ಮನವಿ'ಗಂಧದ ಗುಡಿ' ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿ: ಸರ್ಕಾರಕ್ಕೆ ವಾಣಿಜ್ಯ ಮಂಡಳಿ ಮನವಿ

    ನವೆಂಬರ್ 1ರ ವಿಧಾನಸೌಧದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಮಾಡಲಿದ್ದೇವೆ. "ವಿಧಾನಸೌಧದ ಮೆಟ್ಟಿಲಿನ ಮೇಲೆ ನವೆಂಬರ್ 1ರ ಸಂಜೆ 4 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ. 2009ರ ನಂತರ ಯಾರಿಗೂ ಕೂಡ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಿರಲಿಲ್ಲ. ಈಗಾಗಲೇ ರಾಜ್ಯದ 8 ಜನ ಮಹನೀಯರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ಕೊಡಲಾಗಿದೆ. ಎಲ್ಲರ ಮನದಾಳದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಪುನೀತ್ ನಿಜವಾಗಿಯೂ 'ಕರ್ನಾಟಕ ರತ್ನ'. ಯುವಜನತೆಗೆ ಸದಾ ಪ್ರೇರಣೆ ನೀಡುತ್ತಿದ್ದರು" ಎಂದು ಹೇಳಿದರು.

    Actor Late Puneeth Rajkumar will be conferred with the Karnataka Ratna award on November 1st

    "ಪುನೀತ್ ರಾಜ್‌ಕುಮಾರ್ ಹೆಸರು ಚಿರಸ್ಥಾಯಿಯಾಗಬೇಕು, ಪ್ರೇರಣೆಯಾಗಬೇಕು ಎಂದು ಈ ಪುರಸ್ಕಾರ ನೀಡಲಾಗುತ್ತಿದೆ. ಹಲವಾರು ಶ್ರೇಷ್ಠ ಸಾಹಿತಿಗಳು, ಮುಖ್ಯ ಅತಿಥಿಗಳು, ನಟರು, ಸಚಿವರು, ಶಾಸಕರು, ಹಿರಿಯ ರಾಜಕಾರಣಿಗಳು ಅಂದು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಬಹಳ ಅರ್ಥಪೂರ್ಣವಾಗಿ ಕಾರ್ಯಕ್ರಮ ಮಾಡಲಿದ್ದೇವೆ. ಇನ್ನು 'ನವೆಂಬರ್ 1ರ ನಂತರ ಬೆಂಗಳೂರಿನಲ್ಲೇ ಮೂರು ಕಾರ್ಯಕ್ರಮ ಮಾಡುತ್ತಿದ್ದೇವೆ.
    10 ದಿನಗಳ ಅಂತರದಲ್ಲಿ ಬೆಂಗಳೂರಿನ ಮೂರು ಭಾಗಗಳಲ್ಲಿ ಅಪ್ಪು ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ" ಎಂದು ಸಿಎಂ ಹೇಳಿದರು.

    'ಪುನೀತ್ ಪರ್ವ' ವೇದಿಕೆಯಲ್ಲಿ ಪರ್ಫಾಮೆನ್ಸ್ ನೀಡುವ ಸೆಲೆಬ್ರೆಟಿಗಳು, ಅತಿಥಿಗಳ ಲಿಸ್ಟ್ ಇಲ್ಲಿದೆ!'ಪುನೀತ್ ಪರ್ವ' ವೇದಿಕೆಯಲ್ಲಿ ಪರ್ಫಾಮೆನ್ಸ್ ನೀಡುವ ಸೆಲೆಬ್ರೆಟಿಗಳು, ಅತಿಥಿಗಳ ಲಿಸ್ಟ್ ಇಲ್ಲಿದೆ!

    ನವೆಂವರ್ 1ರಂದು ವಿಧಾನಸೌಧದ ಮುಂಭಾಗದಲ್ಲಿ ನಡೆಯುವ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಿತ್ರರಂಗದ ಗಣ್ಯ ವ್ಯಕ್ತಿಗಳು ಆಗಮಿಸುವ ನಿರೀಕ್ಷೆ ಇದೆ. ಕರ್ನಾಟಕ ಮೂಲದ ದೊಡ್ಡ ದೊಡ್ಡ ಕಲಾವಿದರು ಕೂಡ ಭಾಗವಹಿಸುವ ಸಾಧ್ಯತೆ ಇದೆ. ಸೂಪರ್ ಸ್ಟಾರ್ ರಜನಿಕಾಂತ್, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ , ದೀಪಿಕಾ ಪಡುಕೋಣೆ ಅವರನ್ನು ಕರೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನು ಮಾಹಿತಿಯನ್ನು ಸಿಎಂ ನೀಡಿದ್ದಾರೆ.

    Actor Late Puneeth Rajkumar will be conferred with the Karnataka Ratna award on November 1st

    ಪುನೀತ್‌ ರಾಜ್‌ಕುಮಾರ್ ನಟನೆಯ 'ಗಂಧದಗುಡಿ' ಡಾಕ್ಯುಡ್ರಾಮಾ ಸಿನಿಮಾ ಮುಂದಿನ ವಾರ ಪ್ರೇಕ್ಷಕರ ಮುಂದೆ ಬರಲಿದೆ. ಈಗಾಗಲೇ ಸಿನಿಮಾ ರಿಲೀಸ್ ಕೆಲಸಗಳು ನಡೀತಿದೆ. ನಾಳೆ (ಅಕ್ಟೋಬರ್ 21) ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿದೆ. ಕನ್ನಡ ಚಿತ್ರರಂಗದ ತಾರೆಯರ ಜೊತೆಗೆ ಅಕ್ಕಪಕ್ಕದ ಇಂಡಸ್ಟ್ರಿಯ ದಿಗ್ಗಜ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಮ್ಯಾ, ಶಿವಣ್ಣ ಸೇರಿದಂತೆ ಸಾಕಷ್ಟು ಜನ ಡ್ಯಾನ್ಸ್ ಮಾಡಿ ರಂಜಿಸಲಿದ್ದಾರೆ.

    English summary
    Actor Late Puneeth Rajkumar will be conferred with the Karnataka Ratna award on November 1st. Chief Minister Basavaraj Bommai said, so far, eight persons have been honoured with this award, but it had not been given to anybody since 2009. Know More.
    Thursday, October 20, 2022, 21:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X