»   » 'ದಂಡಂ' ಅಂತ ಮತ್ತೆ ಗಾಂಧಿನಗರಕ್ಕೆ ಬಂದ 'ನಮಕ್ ಹರಾಮ್' ಮಹೇಶ್

'ದಂಡಂ' ಅಂತ ಮತ್ತೆ ಗಾಂಧಿನಗರಕ್ಕೆ ಬಂದ 'ನಮಕ್ ಹರಾಮ್' ಮಹೇಶ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್ ಅವರ ತಮ್ಮ ಮಹೇಶ್ ಅವರ ಚೊಚ್ಚಲ ಚಿತ್ರ 'ನಮಕ್ ಹರಾಮ್' ಬಾಕ್ಸಾಫೀಸ್ ನಲ್ಲಿ ಅಷ್ಟೇನು ಸದ್ದು ಮಾಡದೇ ತೋಪೆದ್ದು ಹೋದ ನಂತರ ಅದರ ಬೆನ್ನಲ್ಲೇ 'ದುಬಾರಿ' ಎಂಬ ಚಿತ್ರಕ್ಕೂ ಸಹಿ ಹಾಕಿದ್ದು, ಇದೀಗ ಮತ್ತೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

ಅಂದಹಾಗೆ ಮೊದಲ ಚಿತ್ರ ಅಷ್ಟಾಗಿ ಯಶಸ್ಸು ಗಳಿಸದಿದ್ದರು ಕೂಡ ನಟ ಮಹೇಶ್ ಅವರಿಗೆ ಚಂದನವನದಲ್ಲಿ ಬಹಳ ಬೇಡಿಕೆ ಇದೆ. ಅದಕ್ಕಾಗಿ ನಟ ಮಹೇಶ್ ಅವರಿಗೆ 'ದಂಡಂ' ಎಂಬ ಚಿತ್ರದಲ್ಲಿ ನಟಿಸಲು ಆಫರ್ ಬಂದಿದ್ದು, ಈಗಾಗಲೇ ಸಹಿ ಕೂಡ ಹಾಕಿದ್ದಾರೆ.

Actor Mahesh back with Kannada movie 'Dandam'-The Punishment

ನಿರ್ದೇಶಕ ಬಾಲಾ ವಿನಾಯಕ ಅವರು 'ದಂಡಂ' ಚಿತ್ರದ ಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದು, ನಿರ್ಮಾಪಕರಾದ ಶಿವಮಹಾದೇವಪ್ಪ ಮತ್ತು ತಿರುಮಲೇಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.[ಸೆನ್ಸಾರ್ ಅಂಗಳದಲ್ಲಿ ಪಾಸ್ ಆದ 'ನಮಕ್ ಹರಾಮ್']

'ಎದೆಗಾರಿಕೆ' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದ ಕಾಮಿಡಿ ನಟ ಸಾಧು ಕೋಕಿಲ ಅವರು ತುಂಬಾ ದಿನಗಳ ನಂತರ ಮತ್ತೆ ಸಂಗೀತ ನಿರ್ದೇಶನದತ್ತ ಹೊರಳಿದ್ದು, ಮಹೇಶ್ ಅವರ 'ದಂಡಂ' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

ಸಖತ್ ಆಕ್ಷನ್-ಥ್ರಿಲ್ಲರ್ ಮೂವಿ ಆಗಿರುವ 'ದಂಡಂ' ಚಿತ್ರಕ್ಕೆ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ (ನವೆಂಬರ್ 27) ಚಿತ್ರದ ಸೆಟ್ಟೇರಿದೆ.

Actor Mahesh back with Kannada movie 'Dandam'-The Punishment

ಅದೇನೇ ಇರಲಿ ನಟ ಮಹೇಶ್ ಅವರು 'ದಂಡಂ' (ಶಿಕ್ಷೆ) ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೆ ನಿಂತು ಈ ಸಿನಿಮಾ ಕೈ ಹಿಡಿಯುತ್ತ ಕಾದು ನೋಡಬೇಕು.

English summary
Actor Krishna Mahesh's (Golden Star Ganesh Brother) debut film 'Namak Haram' might have bombed at the box-office, but still there is a lot of demand for him as an actor. After signing a film called 'Dubari', Krishna Mahesh has signed yet another film called 'Dandam - The Punishment'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada